ಕೋಟೆನಾಡು ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ ಬೆಲೆ ಕುಸಿತ!

By Ravi Janekal  |  First Published Sep 24, 2023, 8:32 PM IST

ಅದೊಂದು ಬಯಲುಸೀಮೆ ಪ್ರದೇಶ. ಅಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ. ಆದ್ರೆ ಕಳೆದ ವರ್ಷ ಸುರಿದ ಮಳೆಯಿಂದಾಗಿ  ತೀವ್ರ ನಷ್ಟ ಅನುಭವಿಸಿದ್ದ‌ ರೈತರು, ಈ ಬಾರಿ ಲಾಭದ ನಿರೀಕ್ಷೆಯಲ್ಲಿದ್ರು. ಆದ್ರೆ ಕೇಂದ್ರ ಸರ್ಕಾರ ಈರುಳ್ಳಿಯ ರಫ್ತು ಸುಂಕ ಹೆಚ್ಚಳಗೊಳಿಸಿರೋ ಪರಿಣಾಮ ದಿಢೀರ್ ಈರುಳ್ಳಿ‌ ಬೆಲೆ ಕುಸಿದಿದ್ದು, ರೈತರ ಗಾಯದ ಮೇಲೆ‌ ಬರೆ ಎಳೆದಂತಾಗಿದೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಸೆ.24): ಅದೊಂದು ಬಯಲುಸೀಮೆ ಪ್ರದೇಶ. ಅಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ. ಆದ್ರೆ ಕಳೆದ ವರ್ಷ ಸುರಿದ ಮಳೆಯಿಂದಾಗಿ  ತೀವ್ರ ನಷ್ಟ ಅನುಭವಿಸಿದ್ದ‌ ರೈತರು, ಈ ಬಾರಿ ಲಾಭದ ನಿರೀಕ್ಷೆಯಲ್ಲಿದ್ರು. ಆದ್ರೆ ಕೇಂದ್ರ ಸರ್ಕಾರ ಈರುಳ್ಳಿಯ ರಫ್ತು ಸುಂಕ ಹೆಚ್ಚಳಗೊಳಿಸಿರೋ ಪರಿಣಾಮ ದಿಢೀರ್ ಈರುಳ್ಳಿ‌ ಬೆಲೆ ಕುಸಿದಿದ್ದು, ರೈತರ ಗಾಯದ ಮೇಲೆ‌ ಬರೆ ಎಳೆದಂತಾಗಿದೆ.

Latest Videos

undefined

ಚಿತ್ರದುರ್ಗ ಜಿಲ್ಲೆಯ ರೈತರು,ಪ್ರತಿವರ್ಷ 40 ಸಾವಿರ‌ ಹೆಕ್ಟೇರ್ ಗೂ ಅಧಿಕ ಈರುಳ್ಳಿ  ಬಿತ್ತನೆ ಮಾಡ್ತಿದ್ದರು. ಆದ್ರೆ ಕಳೆದ ವರ್ಷ ಸುರಿದ ಅತಿಯಾದ ಮಳೆಯಿಂದಾಗಿ ನಯಾಪೈಸೆ‌ ಲಾಭ ಸಿಗದೇ ರೈತರು ಸಾಲದ ಸುಳಿಗೆ ಸಿಲುಕಿದ್ದರು.ಹೀಗಾಗಿ ಈ ಬಾರಿ ಸಕಾಲಕ್ಕೆ ಆಗದ ಹಿನ್ನಲೆಯಲ್ಲಿ ತಡವಾಗಿ ಬಿತ್ತನೆ ಮಾಡಿದ  ಕೋಟೆನಾಡಿನ  ರೈತರು ಸುಮಾರು 20 ಹೆಕ್ಟೇರ್ ನಷ್ಟು ಮಾತ್ರ ಈರುಳ್ಳಿ ಬಿತ್ತನೆ ಮಾಡಿದ್ದಾರೆ. 

ಬರಗಾಲ ಒಂದೆಡೆ; ನಕಲಿ ಈರುಳ್ಳಿ ಬೀಜ ಇನ್ನೊಂದೆಡೆ ಕೋಟೆನಾಡು ರೈತರು ಕಂಗಾಲು!

ಇಂತಹ ಸಮಯದಲ್ಲಿ ರೈತರನ್ನು ಪ್ರೋತ್ಸಾಹಿಸಬೇಕಿದ್ದ ಕೇಂದ್ರ ಸರ್ಕಾರವು ಶೇ.40ರಷ್ಟು ಈರುಳ್ಳಿಯ ರಫ್ತು ಸುಂಕವನ್ನು ಹೆಚ್ಚಿಸಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಡೀರ್ ಕುಸಿದಿದೆ. ಒಂದು ಕೆಜಿ ಈರುಳ್ಳಿಗೆ ಕೇವಲ 10ರೂಪಾಯಿ ಯಷ್ಟು ಬೆಲೆ‌ ಮಾತ್ರ ರೈತರಿಗೆ ಸಿಕ್ತಿದೆ. ಹೀಗಾಗಿ ದಿನದಿಂದ ದಿನಕ್ಕೆ  ಇಳಿಮುಖದಲ್ಲಿ ಸಾಗ್ತಿರುವ  ಈರುಳ್ಳಿ ಬೆಲೆಯಿಂದಾಗಿ ಈರುಳ್ಳಿ ಬೆಳೆಗಾರರು ತೀವ್ರ  ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಈರುಳ್ಳಿ ರಫ್ತು ಸುಂಕ ವನ್ನು ಕಡಿತಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ  ಆಗ್ರಹಿಸಿದ್ದಾರೆ.

ಇನ್ನು ಈ ಬಾರಿ ಮಳೆ‌ಸಂಪೂರ್ಣ‌‌ಕೈಕೊಟ್ಟ ಪರಿಣಾಮ ಬಿತ್ತಿದ‌ಈರುಳ್ಳಿ‌ ಇಳುವರಿ ಕುಂಠಿತವಾಗಿದೆ. ಅಲ್ಲದೇ  ಬೆಳೆದ‌ ಈರುಳ್ಳಿಯ ಬೆಳವಣಿಗೆಯು ಸಹ ಗುಣಮಟ್ಟದಲ್ಲಿರದ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ‌ ಸಿಗಲಾರದೆಂಬುದು ತೋಟಗಾರಿಕೆ‌ ಇಲಾಖೆ‌ಅಧಿಕಾರಿಗಳ ಅಭಿಪ್ರಾಯ. 

 

ಚಿಕ್ಕಬಳ್ಳಾಪುರ: ಗುಲಾಬಿ ಈರುಳ್ಳಿಗೆ ಶೇ.40 ತೆರಿಗೆ: ಸಂಕಷ್ಟದಲ್ಲಿ ರೈತ!

ಒಟ್ಟಾರೆ‌ ಬರದ ಸುಳಿಗೆ ಸಿಲುಕಿರುವ ಚಿತ್ರದುರ್ಗದ ರೈತರು ಈಗಾಗಲೇ ಸಂಕಷ್ಟ‌ ಅನುಭವಿಸ್ತಿದ್ದಾರೆ‌. ಈ ವೇಳೆ ಕೇಂದ್ರ‌ಸರ್ಕಾರ ವಿಧಿಸಿರುವ ಈರುಳ್ಳಿ ರಫ್ತು ಸುಂಕ‌ ದೊಡ್ಡ ತಲೆನೋವು ತರಿಸಿದೆ. ಹೀಗಾಗಿ‌ರೈತರ ಹಿತಕ್ಕಾಗಿ ‌ಸರ್ಕಾರ‌ ಅಗತ್ಯ ಕ್ರಮ‌ ಕೈಗೊಳ್ಳಲು ಮುಂದಾಗಬೇಕಿದೆ.

click me!