ದೇಶದಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು.
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಆ.28) : ದೇಶದಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ದೇಶದಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ ಎಂದು ಮಾಧ್ಯಮಗಳ ಸಮೀಕ್ಷೆ ( ಸಿ ಓಟರ್ಸ್ ) ಹಿನ್ನೆಲೆಯಲ್ಲಿ ಕನಿಷ್ಠ 300 ಸ್ಥಾನಗಳಿಸಿ ಮತ್ತೊಮ್ಮೆ ಮೋದಿ ಪ್ರಧಾನಿ(Prime minister narendra modi)ಯಾಗಲಿದ್ದಾರೆ. ಸದ್ಯ ದೇಶ ಆರ್ಥಿಕವಾಗಿ ಸಬಲವಾಗಿದ್ದು 5ನೇ ಸ್ಥಾನದಲ್ಲಿದೆ. ರಷ್ಯಾ, ಅಮೇರಿಕಾ ಬಿಟ್ಟರೇ ಭಾರತವೇ ಆರ್ಥಿಕವಾಗಿ ಸಬಲವಾದ ರಾಷ್ಟ್ರವಾಗಿದೆ. ಇದಕ್ಕೆ ಮೋದಿಯವರು ನೀಡಿದ 9 ವರ್ಷದ ಆಡಳಿತವೇ ಕಾರಣ ಎಂದರು.
ಆರು ತಿಂಗಳ ಆಟ..ಯಾರು ಆಟಗಾರ..?ಯಾರು ಸೂತ್ರಧಾರ..? ರಾಜ್ಯದಲ್ಲೂ ನಡೆಯಲಿದ್ಯಾ 'ಮಹಾ'ಚದುರಂಗದಾಟ..?
ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಗಾಳಿ ಸುದ್ದಿ..!
ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಕೇವಲ ಗಾಳಿ ಮಾತು. ಬಿಜೆಪಿಯಲ್ಲಿ ಮಂತ್ರಿಗಳಾಗಿ, ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಅವರಿಗೆ ಒಂದು ಕಿವಿಮಾತು ಹೇಳಲು ಬಯಸುತ್ತೇನೆ. ಲೋಕಸಭೆ ಚುನಾವಣೆ ಇದು ಕೇವಲ ವೈಯಕ್ತಿಕವಲ್ಲ, ದೇಶವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ವ್ಯಕ್ತಿಯೊಬ್ಬನನ್ನು ಪ್ರಧಾನಿ ಹುದ್ದೆಗೆ ಏರಿಸಬೇಕಾದ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು. ಈ ವಾತಾವರಣ ನೋಡಿ ಕಾಂಗ್ರೆಸ್ ಮುಖಂಡರು ಸಂಪೂರ್ಣ ಹತಾಶೆಯಾಗಿದ್ದಾರೆ. ಬಿಜೆಪಿ ಮುಖಂಡರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಬಹುತೇಕ ಬಿಜೆಪಿ ಪಕ್ಷದವರು ಪಕ್ಷ ಬಿಟ್ಟು ಹೋಗುವದಿಲ್ಲ ಎಂಬ ವಿಶ್ವಾಸ ತಮಗೆ ಇದೆ. ಈಗ ಬಿಜೆಪಿಯಿಂದ ಕಾಂಗ್ರೆಸ್‌ಗೆ ಯಾರಾದರೂ ಸೇರಿದ್ದಾರೆಯೇ? ಎಸ್.ಟಿ. ಸೋಮಶೇಖರ. ಹೆಬ್ಬಾರ, ಎಂ.ಪಿ.ರೇಣುಕಾಚಾರ್ಯ, ಶಂಕರ ಮುನೇನಕೊಪ್ಪ ಸೇರಿ ಎಲ್ಲರೂ ಬಿಜೆಪಿಯಲ್ಲಿಯೇ ಇಲ್ಲವೇ ಎಂದು ಪ್ರಶ್ನಿಸಿದರು.
"ಮತ್ತೆ ಹೊಸ ಬಾಂಬ್ ಹಾಕಿದ ಶಾಸಕ ಯತ್ನಾಳ್..!"
ಕಾಂಗ್ರೆಸ್‌ನವರು ರಾಜ್ಯದಲ್ಲಿ 135 ಸ್ಥಾನ ಪಡೆದು ಅಧಿಕಾರ ನಡೆಸುತ್ತಿದ್ದಾರೆ. ಆದರೂ ಬಿಜೆಪಿ ಹಾಲಿ, ಮಾಜಿ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ಯಾವದೋ ಭಯ ಕಾಡುತ್ತಿದೆ. ಬರುವ ಲೋಕಸಭೆ ಚುನಾವಣೆ(Loksabha election) ಇಲ್ಲವೇ ನಂತರ ರಾಜಕೀಯ ಬದಲಾವಣೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಬಿಜೆಪಿ(BJP karnataka) ರಾಜ್ಯದಲ್ಲಿ ನಾಶವಾಗುತ್ತಿದೆ ಎಂದು ಸೃಷ್ಟಿಸುವ ಯತ್ನ ನಡೆಸಿದ್ದಾರೆ ಎಂದರು.
ಪಕ್ಷದಲ್ಲಿ ನಾವೆಲ್ಲ ಒಗ್ಗಟ್ಟಾಗಿದ್ದೇವೆ : ಶಾಸಕ ಯತ್ನಾಳ್
ಕಳೆದ ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದವರು ಇಲ್ಲದಿದ್ದರೂ, ನಾವು 66 ಶಾಸಕರು ಸಮರ್ಥವಾಗಿ ಆಡಳಿತ ಪಕ್ಷದ ವೈಫ್ಯಲವನ್ನು ತೋರಿಸಿದ್ದೇವೆ. ಎಂಪಿ ಚುನಾವಣೆ ಮುನ್ನವಾಗಲಿ, ನಂತರವಾಗಲಿ, ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ನೀಡದಿದ್ದರೂ ಸಹ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದರು. ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಇರದಿದ್ದರೂ ವಿಧಾನಸಭೆ ಅಧಿವೇಶನದಲ್ಲಿ ಉತ್ತಮ ಪ್ರತಿಪಕ್ಷವಾಗಿ ಕೆಲಸ ಮಾಡಿದ್ದೇವೆ.
ಜಗದೀಶ್ ಶೆಟ್ಟರ್‌ಗೆ ಶಾ ಕರೆ ಶುದ್ಧ ಸುಳ್ಳು ; ಯತ್ನಾಳ್!
ಮಾಜಿ ಸಿಎಂ ಜಗದೀಶ ಶೆಟ್ಟರ್(Jagadish shettar) ಅವರನ್ನು ಬಿಜೆಪಿ ಮುಖಂಡರು ಸಂಪರ್ಕಿಸಿ ಘರವಾಪಸಿ(Ghar wapsi)ಗೆ ಮನವಿ ಮಾಡಿಕೊಂಡಿರುವುದು ಎಲ್ಲ ಸುಳ್ಳು ಸುದ್ದಿಯಾಗಿದೆ. ನನಗೂ ರಾತ್ರಿ ಪ್ರಧಾನಿ ಮೋದಿ ಕರೆ ಮಾಡಿದ್ದರು ಎಂದು ಹೇಳಿದರೆ ಎಂದು ಪ್ರಶ್ನಿಸಿದ ಅವರು, ಕೆಲ ಮುಖಂಡರು ತಮ್ಮ ಡಿಮ್ಯಾಂಡ್ ಹೆಚ್ಚಿಸಿಕೊಳ್ಳಲು ಈ ರೀತಿ ತಂತ್ರಗಾರಿಕೆ ಮಾಡುತ್ತಾರೆ ಎಂದು ವ್ಯಂಗವಾಡಿದರು.
ಕಾಂಗ್ರೆಸ್ ಗೆದ್ದ ಮೇಲೆ ರಾಜ್ಯದಲ್ಲಿ ಪಾಕ್ ಧ್ವಜಗಳ ಹಾರಾಟ: ಯತ್ನಾಳ್
ಗೃಹಲಕ್ಷ್ಮೀ ಜಾರಿ ಯೋಜನೆ ಸ್ಥಳ ಬದಲಾವಣೆ
ಗೃಹಲಕ್ಷ್ಮೀ ಯೋಜನೆ(Gruhalakshmi scheme) ಜಾರಿ ಕಾರ್ಯಕ್ರಮವನ್ನು ಮೊದಲು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ ನಂತರ ಅದನ್ನು ಮೈಸೂರಿಗೆ ಬದಲಾಯಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ಯಾರೇ ಸಿಎಂ ಆಗಿದ್ದರೂ ಸಹ ಇದೇ ಕೆಲಸವನ್ನು ಮಾಡುತ್ತಿದ್ದರು. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ, ತಮ್ಮ ಜಿಲ್ಲೆಯಿಂದಲೇ ಈ ಕಾರ್ಯಕ್ರಮ ಆರಂಭಿಸಬೇಕು ಎನ್ನುವ ಆಸೆ ಹೊಂದಿರಬೇಕು.ಸಹವಾಗಿ ಅವರ ಪುತ್ರನ ರಾಜಕೀಯ ಭವಿಷ್ಯ ರೂಪಿಸಲು ಬದಲಾವಣೆ ಮಾಡಿರಬಹುದು ಎಂದರು.