ಕೈಕೊಟ್ಟ ಬೇರಿಂಗ್, ಹತ್ತೇ ವರ್ಷದಲ್ಲಿ ನಮ್ಮ ಮೆಟ್ರೋ ನಿಜ ಬಣ್ಣ ಬಯಲು

Published : Jul 10, 2022, 05:48 PM ISTUpdated : Jul 10, 2022, 05:50 PM IST
ಕೈಕೊಟ್ಟ ಬೇರಿಂಗ್,  ಹತ್ತೇ ವರ್ಷದಲ್ಲಿ ನಮ್ಮ ಮೆಟ್ರೋ ನಿಜ ಬಣ್ಣ ಬಯಲು

ಸಾರಾಂಶ

*ಬೆಂಗಳೂರು ಮೆಟ್ರೋ ಮೊದಲ ಹಂತದ ಕಾಮಗಾರಿಯಲ್ಲಿ ಲೋಪ *ನಮ್ಮ ಮೆಟ್ರೋ ಶುರುವಾಗಿ ಹತ್ತೇ ವರ್ಷಕ್ಕೆ ಕೈಕೊಟ್ಟ ಬೇರಿಂಗ್ * ನೂರು ವರ್ಷ ಬಾಳಬೇಕಾದ ಮೆಟ್ರೋ ಸೇಫ್ಟಿ ಬಗ್ಗೆ ನೂರೆಂಟು ಪ್ರಶ್ನೆ ಉದ್ಬವ 

ವರದಿ; ಮಮತಾ ಮರ್ಧಾಳ ಸುವರ್ಣನ್ಯೂಸ್

ಬೆಂಗಳೂರು (ಜು10):
ಸಿಲಿಕಾನ್ ಸಿಟಿ ಅಂದ ತಕ್ಷಣ ನೆನಪಾಗೋದು ಟ್ರಾಫಿಕ್ ಜಂಜಾಟ. ಟ್ರಾಫಿಕ್ ಕಡಿಮೆ ಮಾಡಲೆಂದೇ ನಮ್ಮ ಮೆಟ್ರೋ ಪರಿಚಯಿಸಲಾಯ್ತು. ಆಗಿನಿಂದಲೂ ಜನ ತಮ್ಮ ಸ್ವಂತ ವಾಹನಗಳಿಗೆ ಗುಡ್ ಬೈಹೇಳಿ ಮೆಟ್ರೋ ಅವಲಂಬಿಸಿದ್ರು. ಈಗಲೂ ಜನ  ಬಿಎಂಟಿಸಿ ಬಿಟ್ಟು ಮೆಟ್ರೋದಲ್ಲಿ ತಮ್ಮ ಕೆಲಸಗಳಿಗೆ ತೆರಳ್ತಾರೆ. ಆದ್ರೆ ಮೆಟ್ರೋ ನಂಬಿರೋ ಜನರಿಗೆ ಈಗ ಓಡಾಡಲು ಭಯ ಶುರುವಾಗಿದೆ. 

ನೂರು ವರ್ಷ ಬಾಳಬೇಕಾದ ಮೆಟ್ರೋ ಸೇಫ್ಟಿ ಬಗ್ಗೆ ನೂರೆಂಟು ಪ್ರಶ್ನೆ ಉದ್ಬವ ಆಗಿವೆ. ಹಾಗಿದ್ರೆ ಕೋಟ್ಯಾಂತರ ರೂಪಾಯಿ  ಕಾಮಗಾರಿ ಈಗ ನೀರಲ್ಲಿ ಬಿಟ್ಟ ಹೋದಂತಾಗಿದ್ಯಾ? 42 ಕಿ. ಮೀಟರ್ ಇಡೀ ಮಾರ್ಗಕ್ಕೆ ಗ್ರೀನ್ ಸಿಗ್ನಲ್ ತೋರುವ ಮುನ್ನ ಮೆಟ್ರೋ ಓಡಿಸಲು ಸೇಫಾಗಿದ್ಯಾ ಅನ್ನೋದ್ನ ನೋಡಿಲ್ವ? ಇಂತಹ ಹಲವು ಪ್ರಶ್ನೆಗಳು ಹುಟ್ಟುಹಾಕಿವೆ.

ಯೆಸ್ ಎಂ ಜಿ ರಸ್ತೆ ಟು ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗದಲ್ಲಿ ಸಮಸ್ಯೆಯುಂಟಾಗಿದ್ದು ತಿಂಗಳಿಗೆ ಎರಡರಿಂದ ಮೂರು ಬಾರಿ ದುರಸ್ತಿ ಕಾರ್ಯ ನಡಿತಿದೆ.  ಹೌದು ಮೊದಲ ಹಂತ ಮೆಟ್ರೋ ಕಾಮಗಾರಿಯಲ್ಲಿ ಮಾಡಿದ ತಪ್ಪುಗಳಿಗೆ ಇಂದು ಬೆಲೆತೆರೋ ಸಮಯ ಬಂದಿದೆ. ಬರೋಬ್ಬರಿ  ನೂರು ವರ್ಷ ಬಾಳಬೇಕಾದ ಕಾಮಗಾರಿಯಲ್ಲಿ ಲೋಪಗಳು ಜಾಸ್ತಿಯಾಗ್ತಿದೆ. ಮೆಟ್ರೋ ಪಿಲ್ಲರ್ಗಳಲ್ಲಿ ಕಂಡುಬರುತ್ತಿರುವ ಲೋಪ ಇಡೀ ನಗರ ಮಂದಿಗೆ ಆತಂಕ ಸೃಷ್ಟಿಸಿದೆ. 

ಮೆಟ್ರೋ ಪಿಲ್ಲರ್‌ಗಳಲ್ಲಿ ಬಿರುಕು, ಬೇರಿಂಗ್‌ ಸಮಸ್ಯೆ!

ಹಳಿಗಿಳಿದು 10 ವರ್ಷದಲ್ಲಿ ಮೆಟ್ರೋ ನಿಜ ಬಣ್ಣ ಬಯಲಾಗಿದೆ. ಎಂ.ಜಿ ರಸ್ತೆ ಟು ಬೈಯಪ್ಪನಹಳ್ಳಿ ಮಾರ್ಗದಲ್ಲಿ ನಿತ್ಯ ಸಮಸ್ಯೆ ಕಾಡೋಕೆ ಶುರುವಾಗಿದೆ. 2011 ಅಕ್ಟೋಬರ್ 20 ರಂದು ಆರಂಭವಾದ ಈ ಮಾರ್ಗದ ಪಿಲ್ಲರ್ ಬೇರಿಂಗ್ ಗಳು ತಿಂಗಳಿಗೆ ಎರಡೆರಡು ಬಾರಿ ರಿಪೇರಿ ವರ್ಕ್ಗೆ ಬರುತ್ತಿದೆ. ಹೀಗಾಗಿ ಇದು ಆಗಾಗ ರಿಪೇರಿ ಬರುತ್ತಿರೋದು ಪ್ರಯಾಣಿಕರಿಗೆ ಕಿರಿಕಿರಿ ತರುತ್ತಿದೆ‌. 2019 ಡಿಸೆಂಬರ್ ನಲ್ಲಿ ಟ್ರಿನಿಟಿ ಮೆಟ್ರೋ ಸ್ಟೇಷನ್ ಪಿಲ್ಲರ್  ಬೀಮ್ ನಲ್ಲಿ ಬಿರುಕು ಕಾಣಿಸಿಕೊಂಡಿದ್ದ ವೇಳೆ ಸಂಚಾರಕ್ಕೆ ಯಾವದೇ ತೊಂದರೆ ಇಲ್ಲ ಎಂದು ಸಬೂನು ಹೇಳಿದ್ದ ಅಧಿಕಾರಿಗಳು ಅದನ್ನ ಸರಿಪಡಿಸಲು ನುರಿತ ತಜ್ಙರ ಮೊರೆ ಹೋಗಿದ್ರು‌.

BMRCL ಎಂಡಿ ಏನಂತಾರೆ?: ಸಂಪೂರ್ಣ ಮಾರ್ಗ ರಿಪೇರಿ ಮಾಡ್ಬೇಕಂದ್ರೆ ತಿಂಗಳ ಕಾಲ ಮೆಟ್ರೋ ಸ್ಥಗಿತಗೊಳಿಸಬೇಕು. ಹೀಗಾಗಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ರಿಪೇರಿ ಕಾರ್ಯ ಮಾಡ್ತೀವಿ ಅಂತ ಹೇಳಿ ಮೆಟ್ರೋದಲ್ಲಿ ಆಗ್ತಿರೋ ಸಮಸ್ಯೆಯನ್ನ ಬಿಎಂಆರ್ಸಿಎಲ್ ಕೂಡ ಒಪ್ಪಿಕೊಂಡಿದೆ. ಮೆಟ್ರೋ ಸಂಚರಿಸುವಾಗ ಹೆಚ್ಚಿನ ಒತ್ತಡ ಬೀಳುವ ಕಾರಣ ಬೇರಿಂಗ್ ನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಬೇರಿಂಗ್ ಅವಧಿ 12 ವರ್ಷವಷ್ಟೆ. ಹೀಗಾಗಿ ರಿಪೇರಿ ಮಾಡ್ಬೇಕಾಗಿದೆ. ಪ್ರಯಾಣಿಕರಿಗೆ ಆತಂಕ ಬೇಡ ಅಂತಿದ್ದಾರೆ ಮೆಟ್ರೋ ಎಂ.ಡಿ  ಅಂಜುಂ ಪರ್ವೇಜ್.

ಮೆಟ್ರೋ ಪಿಲ್ಲರ್ ನ ಬೇರಿಂಗ್ ನಲ್ಲಿ ಉಂಟಾಗಿರುವ ಡ್ಯಾಮೇಜ್ ನಿಂದಾಗಿ ಹಸಿರು ಮಾರ್ಗದಲ್ಲಿ ಓಡಾಡೋಕೆ ಜನ ಆತಂಕ  ಪಡುತ್ತಿದ್ದಾರೆ. ಬೆಂಗಳೂರು ಮೆಟ್ರೋ ಎಷ್ಟು ಸೇಫ್ ಅನ್ನೋ ಪ್ರಶ್ನೆ ಎಂದಿದೆ. ನಗರದದಲ್ಲಿ ನೂರು ವರ್ಷ ಬಾಳಬೇಕಾದ ಮೆಟ್ರೋ ಕಾಮಗಾರಿ  ಹತ್ತೇ ವರ್ಷಕ್ಕೆ ರಿಪೇರಿ ವರ್ಕ್ ಬರುತ್ತಿರೋ ಇಲ್ಲಿ ಎಷ್ಟರ ಮಟ್ಟಿಗೆ ಕಾಮಗಾರಿ ನಡೆದಿದೆ ಅನ್ನೋದು ಹಲವು ಅನುಮಾನಗಳು ಹುಟ್ಟು ಹಾಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದು 20,000 ರೈತರ ಜತೆ ಬಿಜೆಪಿ ಸುವರ್ಣಸೌಧ ಮುತ್ತಿಗೆ
ಡ್ರಗ್‌ ಪೆಡ್ಲರ್‌ಗಳಿಗೆ ಬೆಂಗಳೂರೇ ದೊಡ್ಡ ಟಾರ್ಗೆಟ್‌: ಚಾಕೋಲೆಟ್‌, ಕಾಫಿ ಪುಡಿ ಹೆಸರಲ್ಲಿ ಡ್ರಗ್ಸ್‌ ಸಾಗಾಟ