Road patholes: ವರ್ಷದ ಮೊದಲ ದಿನಕ್ಕೆ ‘ಗುಂಡಿ ಮುಕ್ತ ರಸ್ತೆ’ ಪಾಲಿಕೆ ಟಾಸ್ಕ್ ಠುಸ್

By Kannadaprabha News  |  First Published Jan 2, 2023, 10:25 AM IST

: ಹೊಸ ವರ್ಷಕ್ಕೆ ಬೆಂಗಳೂರಿನ ಮುಖ್ಯರಸ್ತೆ ವಾರು ಹಾಗೂ ವಲಯವಾರು ರಸ್ತೆಗಳ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಿ ‘ರಸ್ತೆ ಗುಂಡಿ ಮುಕ್ತ’ ಎಂದು ಘೋಷಣೆಗೆ ಮಾಡುವುದಾಗಿ ಹೇಳಿದ ಬಿಬಿಎಂಪಿಯು ಒಂದೇ ಒಂದು ರಸ್ತೆಯನ್ನು ಗುಂಡಿ ಮುಕ್ತಗೊಳಿಸಿ ಘೋಷಿಸಿಲ್ಲ.


ಬೆಂಗಳೂರು (ಜ.2) : ಹೊಸ ವರ್ಷಕ್ಕೆ ಬೆಂಗಳೂರಿನ ಮುಖ್ಯರಸ್ತೆ ವಾರು ಹಾಗೂ ವಲಯವಾರು ರಸ್ತೆಗಳ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಿ ‘ರಸ್ತೆ ಗುಂಡಿ ಮುಕ್ತ’ ಎಂದು ಘೋಷಣೆಗೆ ಮಾಡುವುದಾಗಿ ಹೇಳಿದ ಬಿಬಿಎಂಪಿಯು ಒಂದೇ ಒಂದು ರಸ್ತೆಯನ್ನು ಗುಂಡಿ ಮುಕ್ತಗೊಳಿಸಿ ಘೋಷಿಸಿಲ್ಲ.

ಕಳೆದ ವರ್ಷ ಮೇ ತಿಂಗಳಿನಿಂದ ನವೆಂಬರ್‌ವರೆಗೆ ನಗರದ ರಸ್ತೆಗಳಲ್ಲಿ 32 ಸಾವಿರ ಗುಂಡಿಗಳು(Road patholes) ಸೃಷ್ಟಿಯಾಗಿ ನವೆಂಬರ್‌ ಅಂತ್ಯದ ವೇಳೆಗೆ ಎಲ್ಲ ಗುಂಡಿಗಳನ್ನು ಮುಚ್ಚಲಾಗಿತ್ತು. ಕೆಲವು ಕಡೆಗಳಲ್ಲಿ ಇಡೀ ರಸ್ತೆಯನ್ನೇ ಮರು ಡಾಂಬರೀಕರಣ ಮಾಡಲಾಗಿತ್ತು. ದುರಸ್ತಿ ಮಾಡಿದ ರಸ್ತೆಗಳಲ್ಲಿ ಮತ್ತೆ ಗುಂಡಿಗಳು ಸೃಷ್ಟಿಯಾಗಿದ್ದವು. ಎಲ್ಲ ಗುಂಡಿಗಳನ್ನು ಮುಚ್ಚಿ ಹೊಸ ವರ್ಷಕ್ಕೆ ಮುಖ್ಯ ರಸ್ತೆವಾರು ಹಾಗೂ ವಲಯವಾರು ‘ರಸ್ತೆ ಗುಂಡಿ ಮುಕ್ತ’ ಎಂದು ಘೋಷಣೆ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಗಡುವು ನೀಡಿದ್ದರು. ಆದರೆ, ಗುಂಡಿ ಮುಚ್ಚುವ ಕಾರ್ಯದಲ್ಲಿ ಅಧಿಕಾರಿಗಳು ವಿಫಲವಾದ ಹಿನ್ನೆಲೆಯಲ್ಲಿ ಯಾವುದೇ ರಸ್ತೆ ಮತ್ತು ವಲಯವನ್ನು ಗುಂಡಿ ಮುಕ್ತ ಎಂದು ಘೋಷಿಣೆ ಮಾಡಲು ಸಾಧ್ಯವಾಗಿಲ್ಲ.

Tap to resize

Latest Videos

Bengaluru: ಬಳ್ಳಾರಿ ರಸ್ತೆಗಾಗಿ 54 ಮರಕ್ಕೆ ಕೊಡಲಿ: ನಾಗರಿಕರು ಬೇಸರ

ಆ್ಯಪ್‌ ಜನರ ಬಳಕೆಗೆ ಇಲ್ಲ

undefined

ಜತೆಗೆ ರಸ್ತೆ ಗುಂಡಿ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕರಿಸುವುದಕ್ಕೆ ಸಿದ್ಧಪಡಿಸಲಾಗಿರುವ ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪನ್ನು ಜನವರಿ 1ರಂದು ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಲಾಗಿತ್ತು. ನಗರದ ಮೆಜೆಸ್ಟಿಕ್‌, ಯಶವಂತಪುರ, ರಾಜಾಜಿನಗರ, ಮೈಸೂರು ರಸ್ತೆ, ಚಾಮರಾಜಪೇಟೆಯ ಸಿಸಿಬಿ ಜಂಕ್ಷನ್‌, ಗವಿಪುರ ಸೇರಿದಂತೆ ಮೊದಲಾದ ಕಡೆ ಇನ್ನೂ ರಸ್ತೆಗಳು ಬಾಯ್ದೆರೆದಿವೆ. ಹೀಗಾಗಿ, ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪನ್ನು ಸಾರ್ವಜನಿಕರ ಬಳಕೆಗೆ ಬಿಬಿಎಂಪಿ ನೀಡಿಲ್ಲ.

Bengaluru News: ಹೆಬ್ಬಾಳ ಫ್ಲೈಓವರ್‌ ವಿಸ್ತರಣೆ ಕೊನೆಗೂ ಶುರು

click me!