'ಕನ್ನಡ ತಾಯಿ ಭಾರತಾಂಬೆ' ಹೆಸರಿನ ಕಾರ್ಯಕ್ರಮದಲ್ಲಿ ಅಶ್ಲೀಲ ಕುಣಿತ; ಕನ್ನಡ ಸಂಘಟನೆ ವಿರುದ್ಧ ಸಾರ್ವಜನಿಕರ ಆಕ್ರೋಶ!

Published : Nov 28, 2023, 02:25 PM ISTUpdated : Nov 28, 2023, 02:41 PM IST
'ಕನ್ನಡ ತಾಯಿ ಭಾರತಾಂಬೆ' ಹೆಸರಿನ ಕಾರ್ಯಕ್ರಮದಲ್ಲಿ ಅಶ್ಲೀಲ ಕುಣಿತ; ಕನ್ನಡ ಸಂಘಟನೆ ವಿರುದ್ಧ ಸಾರ್ವಜನಿಕರ ಆಕ್ರೋಶ!

ಸಾರಾಂಶ

ಕನ್ನಡಪರ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿಕ್ಕ ಬಾಲಕನನ್ನು ಬಳಸಿಕೊಂಡು ಆರ್ಕೆಸ್ಟ್ರಾ ಯುವತಿಯೊಬ್ಬಳು ಅಶ್ಲೀಲ ನೃತ್ಯ ಮಾಡಿದ ಘಟನೆ  ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ನಡೆದಿದ್ದು, ಅಶ್ಲೀಲ ನೃತ್ಯ ಮಾಡಿಸಿದ ಕನ್ನಡ ಪರ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಛೇ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇದೆಂಥ ಅಶ್ಲೀಲತೆ!

ಶಿವಮೊಗ್ಗ (ನ.28): ಶಿವಮೊಗ್ಗ (ನ.28): 'ಕನ್ನಡ ತಾಯಿ ಭಾರತಾಂಬೆ' ಹೆಸರಿನಲ್ಲಿ ಕನ್ನಡಪರ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿಕ್ಕ ಬಾಲಕನನ್ನು ವಯಸ್ಕ ಪುರುಷನಂತೆ ಬಳಸಿಕೊಂಡು ಆರ್ಕೆಸ್ಟ್ರಾ ಯುವತಿಯೊಬ್ಬಳು ಅಶ್ಲೀಲ ನೃತ್ಯ ಮಾಡಿದ ಘಟನೆ ನಡೆದಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ನಡೆದಿದ್ದು, ಕನ್ನಡ ಕಾರ್ಯಕ್ರಮದಲ್ಲಿ ಇಂಥ ಅಶ್ಲೀಲ ನೃತ್ಯ ಮಾಡಿಸಿದ ಕನ್ನಡ ಪರ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಕನ್ನಡ ರಾಜ್ಯೋತ್ಸವ ನಿಮಿತ್ತ ನಡೆದಿದ್ದ ಕಾರ್ಯಕ್ರಮದಲ್ಲಿ ನಡೆದಿರುವ ಘಟನೆ. ಅಶ್ಲೀಲ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕನ್ನಡ ಕಾರ್ಯಕ್ರಮದಲ್ಲಿ ಕನ್ನಡಪರ ಸಂಘಟನೆಗಳೇ ನಂಗಾನಾಚ್ ನೃತ್ಯ ಮಾಡಿಸಿರುವುದು ಖಂಡನೀಯವಾಗಿ ಇದು ಕನ್ನಡ ತಾಯಿ ಮತು ಭಾರತಾಂಬೆಗೆ ಮಾಡಿರುವ ಅವಮಾನವಾಗಿದೆ. ಉತ್ತರ ಪ್ರದೇಶ, ಪಂಜಾಬ್‌ಗಳಲ್ಲಿ ನಡೆಯುತ್ತಿದ್ದ ರಾತ್ರಿ ನಂಗಾನಾಚ್ ನೃತ್ಯಗಳು ರಾಜ್ಯಕ್ಕೆ ಕಾಲಿಟ್ಟಿರುವುದು ಅದೂ ಕನ್ನಡ ಸಂಘಟನೆಯೇ ಕಾರ್ಯಕ್ರಮದಲ್ಲಿ  ಕರೆಸಿ ನೃತ್ಯ ಮಾಡಿಸಿರುವುದು ನಾಚಿಕೆಗೇಡು. ಅಲ್ಲದೇ ಕನ್ನಡ ಚಲನಚಿತ್ರದ ಸುಂದರ ಹಾಡೊಂದಕ್ಕೆ ಅಶ್ಲೀಲತೆಯ ನೃತ್ಯ(Vulgar Dance) ಮಾಡಿರುವುದಕ್ಕೆ ಇದಕ್ಕೆ ಅವಕಾಶ ಕೊಟ್ಟ ಕನ್ನಡ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಿಗರು.

ಬಿಹಾರ ಬಿಡಿಓ ಬೀಳ್ಕೊಡುಗೆ ಪಾರ್ಟಿಯಲ್ಲಿ ನಂಗಾನಾಚ್‌, ತನಿಖೆಗೆ ಆದೇಶಿಸಿದ ಜಿಲ್ಲಾಧಿಕಾರಿ!

ವಿಡಿಯೋದಲ್ಲಿ ಏನಿದೆ?

ಚಿಕ್ಕ ಬಾಲಕನೊಬ್ಬನನ್ನು ಬಳಸಿಕೊಂಡು ಅಶ್ಲೀಲವಾಗಿ ಕುಣಿದಿರುವ ಯುವತಿ ತಡರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗಿಯಾಗಿದ್ದರು. ಸಾರ್ವಜನಿಕರ ಮುಂದೆಯೇ ಬಾಲಕನನ್ನು ಖುರ್ಚಿಯ ಮೇಲೆ ಕುಳ್ಳಿಸಿ ಬಾಲಕ ಮೇಲೆ ಕುಳಿತು ಅಶ್ಲೀಲ ಭಂಗಿಯ ನೃತ್ಯ ಮಾಡಿರುವ ಯುವತಿ. ಬಾಲಕನನ್ನ ಒಬ್ಬ ವಯಸ್ಕ ಪುರುಷನ ರೀತಿಯಲ್ಲಿ ಬಳಸಿಕೊಂಡು ಆತನ ಜೊತೆಗೆ ಸೆಕ್ಸ್​​ ಓರಿಯೆಂಟೆಡ್​ ಸ್ಟೆಪ್​ಗಳನ್ನು ಹಾಕಿರುವ ಯುವತಿ. ಚಿಕ್ಕ ಬಾಲಕನೊಬ್ಬನನ್ನು ಪುರುಷನಂತೆ ಬಳಸಿಕೊಂಡು ತಬ್ಬಿ ಸೊಂಟ ಬಳುಕಿಸಿರುವ ಅಶ್ಲೀಲವಾಗಿ ಸೊಂಟ ಬಳುಕಿಸಿರುವ ಯುವತಿ. ತಡರಾತ್ರಿ ನಡೆದಿರುವ ಕಾರ್ಯಕ್ರಮದಲ್ಲಿ ನೂರಾರು ಮುಂದೆಯೇ ಬಾಲಕನನ್ನು ಖುರ್ಚಿಯ ಮೇಲೆ ಕುಳ್ಳಿಸಿ ಬಾಲಕನ ಮೇಲೆ ಕುಳಿತು ಅಶ್ಲೀಲ ಭಂಗಿಯ ನೃತ್ಯ ಮಾಡಿರುವ ಯುವತಿ. ಬಾಲಕನನ್ನ ಜೊತೆಗೆ ಸೆಕ್ಸ್​​ ಓರಿಯೆಂಟೆಡ್​ ಸ್ಟೆಪ್​ಗಳನ್ನು ಹಾಕಿರುವ ಯುವತಿ. 

ವಿಡಿಯೋದದಲ್ಲಿ ಕಾರ್ಯಕ್ರಮದ ಬ್ಯಾನರ್ ಶಿವಮೊಗ್ಗ ಜಿಲ್ಲೆ ಭದ್ರಾವತಿ  ಮೂಲದ ಆರ್ಕೆಸ್ಟ್ರಾ ಎಂಬ ಬರಹ ಎದ್ದು ಕಾಣುತ್ತಿದೆ. ಬ್ಯಾನರ್ ನಲ್ಲಿ ಕಾಣುವಂತೆ ಇದು ಕನ್ನಡ ರಕ್ಷಣಾ ವೇದಿಕೆ ಅಪ್ಪುಸೇನೆ (ರಿ) ಎಂದಿದೆ. ಈ ಸಂಘಟನೆ ಆನಂದಪುರದಲ್ಲಿ 'ಕನ್ನಡ ತಾಯಿ ಭಾರತಾಂಬೆ' ಹೆಸರಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಂಥ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ ಕುಣಿದ ಯುವತಿ ಮತ್ತು ಇದಕ್ಕೆ ಅವಕಾಶ ಮಾಡಿಕೊಟ್ಟ ಕನ್ನಡ ಸಂಘಟನೆ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬಂದಿದೆ. ಒಟ್ಟು ಮೂರು ನಿಮಿಷ 38 ಸೆಕೆಂಡ್ ಮೊಬೈಲ್ ವಿಡಿಯೋದಲ್ಲಿ ಅತಿರೇಕದ ಅಶ್ಲೀಲತೆಯಿಂದ ಕೂಡಿದೆ.

ಬಸವ ಜಾತ್ರೆಯಲ್ಲಿ ಅಶ್ಲೀಲ ನೃತ್ಯ! ವಿಡಿಯೋ ವೈರಲ್, ಭಕ್ತರು ಗರಂ

ಇದೀಗ ಆರ್ಕೆಸ್ಟ್ರಾ ನೆಪದಲ್ಲಿ ಸಾರ್ವಜನಿಕರ ಎದುರು ಸ್ಥಳೀಯ ಚಿಕ್ಕ ಮಗುವಿನೊಂದಿಗೆ ಅಸಭ್ಯ ನೃತ್ಯ ಮಾಡಿರುವ ಹಿನ್ನೆಲೆ ಸ್ಥಳೀಯ ಆಡಳಿತ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುವುದೇ? ಇಷ್ಟೆಲ್ಲ ನಡೆಯುವಾಗ ಪೋಲಿಸ್ ಇಲಾಖೆ ಎನು ಮಾಡುತ್ತಿತ್ತು ಎಂಬ ಪ್ರಶ್ನೆ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌