
ಬೆಂಗಳೂರು (ನ.28): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ, ಶಾಪ್, ಬೈಕ್ ಯಾವುದಕ್ಕೂ ಸುರಕ್ಷತೆ ಇಲ್ಲದಂತಾಗಿದೆ. ಇಲ್ಲಿ ದಿನನಿತ್ಯ ಕಳ್ಳತನ ಸಾಮಾನ್ಯ ಎಂಬಂತಾಗಿದೆ. ಬೆಂಗಳೂರಿನ ಪೊಲೀಸರು ಎಷ್ಟೇ ಕಠಿಣ ಕ್ರಮ, ಎಚ್ಚರಿಕೆಗೂ ಕೊಟ್ಟರೂ ಹೆದರದ ಖದೀಮರು ಇವರು. ಇತ್ತ ಬಿಬಿಎಂಪಿ ಅಧಿಕಾರಿಗಳಿಗೂ ಬಗ್ಗುತ್ತಿಲ್ಲ. ಕಳೆದ ತಿಂಗಳು ಕನ್ನಿಂಗ್‌ಹ್ಯಾಂ ರಸ್ತೆಯ ಬಸ್ ನಿಲ್ದಾಣವನ್ನೇ ಕದ್ದಿದ್ದ ಕಳ್ಳರು, ಇಂದು ನೋಡಿದ್ರೆ ಎಂಎಸ್ ರಾಮಯ್ಯ ಬಳಿ ಇದ್ದ ಬಸ್ ನಿಲ್ದಾಣವೇ ಮಂಗಮಾಯ! ಬಸ್ ನಿಲ್ದಾಣವೇ ನಾಪತ್ತೆಯಾಗಿದ್ದನ್ನು ಕಂಡು ಶಾಕ್ ಆದ ಬಿಬಿಎಂಪಿ ಅಧಿಕಾರಿಗಳು.
ಖಾಸಗಿ ವ್ಯಕ್ತಿಗಳಿಂದ ಬಸ್ ನಿಲ್ದಾಣ ಮಂಗಮಾಯ:
ರಸ್ತೆಯಲ್ಲಿ ಬಸ್ ನಿಲ್ಲಿಸಲು ಜಾಗವಿಲ್ಲ ಅಂತಾ ಇಡೀ ಬಸ್ ನಿಲ್ದಾಣವನ್ನೇ ಬೇರುಸಮೇತ ಕಿತ್ತು 60 ಮೀಟರ್ ದೂರಕ್ಕೆ ಶಿಫ್ಟ್ ಮಾಡಿದ ಭೂಪರು. ಎಂ ಎಸ್ ರಾಮಯ್ಯ ಸಿಗ್ನಲ್ ಬಳಿ ಇದ್ದ ಬಸ್ ನಿಲ್ದಾಣ. ಸಾಮಾನ್ಯವಾಗಿ ಬಿಬಿಎಂಪಿ ಅಧಿಕಾರಿಗಳಿಂದ, ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು. ಆದರೆ ಯಾವುದೇ ಅನುಮತಿ ಪಡೆಯದೇ ಕೇವಲ ಮೌಖಿಕವಾಗಿ ಅಧಿಕಾರಿಗಳ ಗಮನಕ್ಕೆ ತಂದು ಬಳಿಕ ಮರಗಳನ್ನ ಕಟ್ ಮಾಡಿ ಬಸ್ ನಿಲ್ದಾಣವನ್ನ ಶಿಫ್ಟ್ ಮಾಡಿರುವ ಖಾಸಗಿ ವ್ಯಕ್ತಿಗಳು.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಸಮೀಪ ಕಾಣೆಯಾಗಿದ್ದ ಬಸ್ ತಂಗುದಾಣ ಕೊನೆಗೂ ಪತ್ತೆ!
ಮೊನ್ನೆ ರಾತ್ರಿ ಬಸ್ ನಿಲ್ದಾಣ ತೆರವು. ಆಸ್ಪತ್ರೆ, ಕಾಲೇಜುಗೆ ಹತ್ತಿರವಾಗುತ್ತೆ ಅಂತಾ ಬಿಬಿಎಂಪಿಯಿಂದ ನಿರ್ಮಾಣವಾಗಿ ಬಸ್ ನಿಲ್ದಾಣ. ಆದರೆ ಇದ್ದಕ್ಕಿದ್ದಂತೆ ನಿಲ್ದಾಣ ತೆರವು ಮಾಡಿದ ಹಿನ್ನಲೆ. ಇತ್ತ ಬಸ್ ನಿಲ್ದಾಣ ಇಲ್ಲದೇ ಬಸ್ ನಿಲ್ಲದೇ ಮುಂದೆ ಸಾಗುತ್ತಿರುವ ಬಸ್ ಚಾಲಕರು. ಇತ್ತ ಸಾರ್ವಜನಿಕರು ಸಹ ನಿನ್ನೆ ಇದ್ದುದ್ದು ಇವತ್ತು ಕಾಣುತ್ತಿಲ್ಲವಲ್ಲ ಹುಡುಕಾಡ್ತಿದ್ದಾರೆ.
ಬೆಂಗಳೂರು ಬಿಎಂಟಿಸಿ ಬಸ್ ನಿಲ್ದಾಣವನ್ನೇ ಕದ್ದೊಯ್ದ ಕಳ್ಳರು: ಬೆಚ್ಚಿಬಿದ್ದ ಬಿಬಿಎಂಪಿ ಅಧಿಕಾರಿಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ