ಕೇಂದ್ರ ಸರ್ಕಾರದ ಆದೇಶದಂತೆ ಆಗಸ್ಟ್ 1ರಿಂದ ರಾಜ್ಯದಲ್ಲೂ ಅನ್‌ಲಾಕ್-3 ಮಾರ್ಗಸೂಚಿ ಜಾರಿಯಾಗಿದ್ದು, ಇನ್ನುಮುಂದೆ ಭಾನುವಾರದ ಲಾಕ್‌ಡೌನ್ ಇರುವುದಿಲ್ಲ. ಹೀಗಾಗಿ ಆ.2ರಂದು ಭಾನುವಾರ ಎಂದಿನಂತೆ ಚಟುವಟಿಕೆ ನಡೆಯಲಿದೆ.
ಬೆಂಗಳೂರು(ಆ.02): ಕೇಂದ್ರ ಸರ್ಕಾರದ ಆದೇಶದಂತೆ ಆಗಸ್ಟ್ 1ರಿಂದ ರಾಜ್ಯದಲ್ಲೂ ಅನ್‌ಲಾಕ್-3 ಮಾರ್ಗಸೂಚಿ ಜಾರಿಯಾಗಿದ್ದು, ಇನ್ನುಮುಂದೆ ಭಾನುವಾರದ ಲಾಕ್‌ಡೌನ್ ಇರುವುದಿಲ್ಲ. ಹೀಗಾಗಿ ಆ.2ರಂದು ಭಾನುವಾರ ಎಂದಿನಂತೆ ಚಟುವಟಿಕೆ ನಡೆಯಲಿದೆ.
ಅನ್‌ಲಾಕ್ -2 ಮಾರ್ಗಸೂಚಿ ಅನ್ವಯ ಜುಲೈ ತಿಂಗಳು ಪೂರ್ತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಹಾಗೂ ರಾತ್ರಿ ಕಫä್ರ್ಯ ಜಾರಿಯಲ್ಲಿತ್ತು. ಇದೀಗ ಆ.1ರಂದು ರಾತ್ರಿಯಿಂದಲೇ ರಾತ್ರಿ ಕಫä್ರ್ಯ ಸಹ ತೆರವುಗೊಳಿಸಲಾಗಿದೆ.
undefined
ಕೊರೋನಾ ಕಾಲದಲ್ಲಿ ಸುಲಿಗೆಗೆ ನಿಂತ ಖಾಸಗಿ ಆಸ್ಪತ್ರೆಗಳ ಬಣ್ಣ ಬಟಾಬಯಲು
ಅನ್‌ಲಾಕ್-3 ಜಾರಿಯಾದ ಬಳಿಕ ಆ.2ರಂದು ಮೊದಲ ಭಾನುವಾರ ಬರಲಿದ್ದು, ಲಾಕ್‌ಡೌನ್ ಇರುವುದಿಲ್ಲ. ಇನ್ನುಮುಂದೆ ಕಂಟೈನ್‌ಮೆಂಟ್ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಭಾನುವಾರವೂ ಸೇರಿ ಪ್ರತಿ ದಿನ ಯಾವುದೇ ನಿರ್ಬಂಧವಿಲ್ಲದೆ ಎಂದಿನಂತೆ ಚಟುವಟಿಕೆಗಳು ನಡೆಯಲಿವೆ.
ಸಾರ್ವಜನಿಕರ ಮೇಲೆ ಇದ್ದ ನಿರ್ಬಂಧಗಳು ತೆರವಾಗಿರುವುದರಿಂದ ಕಂಟೈನ್‌ಮೆಂಟ್ ಹೊರತುಪಡಿಸಿ ಉಳಿದೆಡೆ ಎಲ್ಲಾ ಆರ್ಥಿಕ ಚಟುವಟಿಕೆಗಳು ಶುರುವಾಗಲಿವೆ. ಇದರಿಂದ ಜನದಟ್ಟಣೆ ಉಂಟಾಗಿ ಸೋಂಕು ಹರಡುವ ಭೀತಿಯೂ ಉಂಟಾಗಿದೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯ ಎಂಬುದೂ ಸೇರಿದಂತೆ ಸೋಂಕು ತಡೆಗೆ ಅನುಸರಿಸಬೇಕಾದ ಕ್ರಮಗಳನ್ನು ಮುಂದುವರೆಸಲಾಗಿದೆ. ತರಬೇತಿ ಸಂಸ್ಥೆಗಳು, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಭೆ-ಸಮಾರಂಭಗಳ ಹೆಸರಿನಲ್ಲಿ ಜನ ಸೇರುವುದನ್ನು ನಿಷೇಧಿಸಲಾಗಿದೆ.
ತರಕಾರಿ ವ್ಯಾಪಾರಕ್ಕಿಳಿದಿದ್ದ ಇಂಜಿನಿಯರ್‌ಗೆ ಸೋನು ಸೂದ್ ಜಾಬ್ ಆಫರ್
ಆ.1ರಿಂದ ಜಾರಿಯಾಗಿರುವ ಅನ್‌ಲಾಕ್-3 ಮಾರ್ಗಸೂಚಿ ಅಡಿ ಆ.15ರಂದು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಅನುವು ಮಾಡಿಕೊಡಲಾಗಿದೆ. ಶಾಲಾ-ಕಾಲೇಜುಗಳನ್ನು ಆ.31ರವರೆಗೆ ಆರಂಭಿಸುವಂತಿಲ್ಲ. ಹಬ್ಬಗಳು, ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ವೇಳೆ ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಘಿಸುವಂತಿಲ್ಲ. ಅಲ್ಲದೆ, ಮೈಟ್ರೋ ರೈಲು, ಚಿತ್ರಮಂದಿರ ಸೇರಿದಂತೆ ಮನರಂಜನಾ ಪಾರ್ಕ್ಗಳ ಮೇಲಿನ ನಿಷೇಧವನ್ನು ಸಹ ಮುಂದುವರಿಸಲಾಗಿದೆ.