
ಬೀದರ್ (ಜು.21): ಮದ್ಯವನ್ನು ಆನ್‌ಲೈನ್ ಮೂಲಕ ಮಾರಾಟ ಯಾವತ್ತೂ ಮಾಡಿಲ್ಲ, ಅದರ ಸಾಧ್ಯತೆನೂ ಇಲ್ಲ. ಮುಂದೆಯೂ ಮಾಡುವುದಿಲ್ಲ, ನಮ್ಮ ಯೋಚನೆಯಲ್ಲಿ ಆನ್‌ಲೈನ್ ಮಾರಾಟವಿಲ್ಲ.
ನೋ ಸ್ವಿಗ್ಗಿ, ನೋ ಜೋಮ್ಯಾಟೋ ಯಾವುದೂ ಇಲ್ಲ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪೂರ ತಿಳಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮದ್ಯದ ದರ ಏರಿಕೆ ಹಾಗೂ ಆನ್‌ಲೈನ್ ಮಾರಾಟ ವಿಚಾರವಾಗಿ ಸ್ಪಷ್ಟನೆ ನೀಡಿ, ಮದ್ಯದ ದರ ಏರಿಕೆ ಆಗಿಲ್ಲ.
ಪತ್ನಿಯ ನಾಲ್ಕೇ ನಾಲ್ಕು ಪೆಗ್‌ಗೆ ಗಿರಗಿರ ತಿರುಗಿದ ಗಂಡ, ಡಿವೋರ್ಸ್ ಕೇಳಿದವನಿಗೆ ನೆಟ್ಟಿಗರ ಸಲಹೆ!
ಅಕ್ಕಪಕ್ಕದ ರಾಜ್ಯಕ್ಕೆ ಹೋಲಿಸಿದರೆ ನಾವು ಮದ್ಯ ದರದಲ್ಲಿ ಕಡಿಮೆ ಇದ್ದೇವೆ ಎಂದರು. ಬೇರೆ ರಾಜ್ಯದಿಂದ ಪ್ರಿಮಿಯಮ್ ಬ್ರ‍್ಯಾಂಡ್ ದರದಲ್ಲಿ ಸ್ವಲ್ಪ ಹೆಚ್ಚಿರುವದರಿಂದ ನಮಗೆ ಆದಾಯದ ಹೊಡೆತ ಬೀಳುತ್ತಿದೆ. ಬೇರೆ ರಾಜ್ಯದಲ್ಲಿ ಪ್ರೀಮಿಯಮ್ ಬ್ರ‍್ಯಾಂಡ್ ದರ ಕಡಿಮೆ ಇರುವುದರಿಂದ ಇಲ್ಲಿಗೆ ಆಮದು ಆಗುತ್ತಿದ್ದು, ಇದನ್ನು ತಡೆಗಟ್ಟುತ್ತೇವೆ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ