ಕರ್ನಾಟಕದ ಇತಿಹಾಸದಲ್ಲೇ ಯಾರಿಗೂ 10 ಲಕ್ಷ ಪರಿಹಾರ ಕೊಟ್ಟಿಲ್ಲ: ಎಚ್‌ಡಿಕೆ ವಿರುದ್ಧ ಸಚಿವ ಮಂಕಾಳು ವೈದ್ಯ ಗರಂ..!

By Girish Goudar  |  First Published Jul 20, 2024, 6:33 PM IST

ಐಆರ್‌ಬಿಯವರು ಸರಿಯಾಗಿ ಕೆಲಸ ಮಾಡಿದಿದ್ರೆ ಈ ರೀತಿ ಆಗ್ತಿರ್ಲಿಲ್ಲ. 150 ಕಿ.ಮೀ. ‌‌ಕಾಮಗಾರಿಗೆ 11 ವರ್ಷ ಬೇಕಾ..? 29 ವರ್ಷ ಅವರಿಗೆ ಸರಕಾರ ಲೀಸ್‌ಗೆ ಕೊಟ್ಟಿದೆ ಏನೂ ಮಾಡೋಕಾಗಲ್ಲ. ನಾವು ಐಆರ್‌ಬಿಯವರ ಟೋಲ್‌ಗೇಟ್ ಬಂದ್ ಮಾಡಿಸಿದ್ವಿ. ಶಾಸಕ ಸತೀಶ್ ಸೈಲ್ ಮಾಡಿದ್ರೆ ನಾನು ಮಾಡಿದಂತೆ, ನಾನು ಮಾಡಿದ್ರೆ ಸೈಲ್ ಮಾಡಿದಂತೆ. ಗುಡ್ಡ ಕುಸಿತವಾದ ಬಳಿಕ ಈಗಾಗಲೇ ಐಆರ್‌ಬಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ: ಸಚಿವ ಮಂಕಾಳು ವೈದ್ಯ  


ಕಾರವಾರ(ಜು.20): ಈ ರಾಜ್ಯದ ಇತಿಹಾಸದಲ್ಲಿ ಯಾರಿಗೂ ಪರಿಹಾರವಾಗಿ 10 ಲಕ್ಷ ರೂ. ಕೊಟ್ಟಿಲ್ಲ. ನನಗಿಂತ ಚೆನ್ನಾಗಿ ಮಾಧ್ಯಮದವರಿಗೆ ಗೊತ್ತಿದೆ. ಹಿಂದಿನ ಸರಕಾರದಲ್ಲಿ 5 ಲಕ್ಷ ರೂ. ಕೊಟ್ಟಿದ್ರೂ, ಇನ್ನೂ ಪಾವತಿಯಾಗದೇ ಹಾಗೆಯೇ ಇದೆ. ನಮ್ಮಲ್ಲಿ ಹೊಂದಾಣಿಕೆ ರಾಜಕಾರಣವಿಲ್ಲ. ಆದರೆ, ಬಡವರ ಬಗ್ಗೆ ಹಾಗೂ ಜಿಲ್ಲೆಯ ಬಗ್ಗೆ ನಾನು ಎಲ್ಲರ ಜತೆ ಹೊಂದಾಣಿಕೆ ಮಾಡ್ತಿದ್ದೇನೆ. ರಾಜಕಾರಣದಲ್ಲಿ ಮಾತ್ರ ಯಾವುದೇ ರೀತಿಯ‌ ಹೊಂದಾಣಿಕೆಯಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಎಚ್.ಡಿ.‌ ಕುಮಾರಸ್ವಾಮಿ ಹೇಳಿಕೆಗೆ ಸಚಿವ ಮಂಕಾಳು ವೈದ್ಯ ಟಾಂಗ್ ಕೊಟ್ಟಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಅಂತ ಬೇಧಭಾವ ಮಾಡದೇ ಹೊಂದಾಣಿಕೆ ಮಾಡ್ಕೊಂಡು ಹೋಗಬೇಕು. ಅಲ್ಲದೇ, ನಾನು ಸಿಎಂ ಆಗಿದ್ದಾಗ ಭೂ ಕುಸಿತದಲ್ಲಿ ಮನೆ ಕಳೆದುಕೊಂಡವರಿಗೆ 10 ಲಕ್ಷ ರೂ. ನೀಡಿದ್ದೆ ಎಂದು ಕೇಂದ್ರ ಸಚಿವ ಎಚ್.ಡಿ.‌ ಕುಮಾರಸ್ವಾಮಿ ಹೇಳಿದ್ದರು. ಈ ಹೇಳಿಕೆಗೆ ಇಂದು(ಶನಿವಾರ) ನಗರದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಮಂಕಾಳು ವೈದ್ಯ, ಐಆರ್‌ಬಿಯವರು ಸರಿಯಾಗಿ ಕೆಲಸ ಮಾಡಿದಿದ್ರೆ ಈ ರೀತಿ ಆಗ್ತಿರ್ಲಿಲ್ಲ. 150 ಕಿ.ಮೀ. ‌‌ಕಾಮಗಾರಿಗೆ 11 ವರ್ಷ ಬೇಕಾ..? 29 ವರ್ಷ ಅವರಿಗೆ ಸರಕಾರ ಲೀಸ್‌ಗೆ ಕೊಟ್ಟಿದೆ ಏನೂ ಮಾಡೋಕಾಗಲ್ಲ. ನಾವು ಐಆರ್‌ಬಿಯವರ ಟೋಲ್‌ಗೇಟ್ ಬಂದ್ ಮಾಡಿಸಿದ್ವಿ. ಶಾಸಕ ಸತೀಶ್ ಸೈಲ್ ಮಾಡಿದ್ರೆ ನಾನು ಮಾಡಿದಂತೆ, ನಾನು ಮಾಡಿದ್ರೆ ಸೈಲ್ ಮಾಡಿದಂತೆ. ಗುಡ್ಡ ಕುಸಿತವಾದ ಬಳಿಕ ಈಗಾಗಲೇ ಐಆರ್‌ಬಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಯಾವುದೇ ಕಾರಣಕ್ಕೂ ಟೋಲ್ ಕಲೆಕ್ಷನ್ ಮಾಡ್ಬೇಡಿ ಅಂತಾ ಹೇಳಿದ್ದೀವಿ. ಟೋಲ್ ಕೂಡ ಸೆಂಟ್ರಲ್ ಮಿನಿಸ್ಟರ್‌ದ್ದೇ ಎಂದು ಹೇಳಲಾಗ್ತಿದೆ. ಬಿಜೆಪಿಯವರು ಯೋಚನೆ ಮಾಡಬೇಕು, ಮನುಷ್ಯತ್ವ ಆದ್ರೂ ಇಟ್ಟುಕೊಳ್ಳಬೇಕು. ಇವರಿಗೆ ಜನರೇ ಬುದ್ಧಿ ಕಲಿಸ್ತಾರೆ ಅಂತ ನನ್ನ ಅನಿಸಿಕೆ ಅಂತ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ. 

Tap to resize

Latest Videos

undefined

ಶಿರೂರು ಗುಡ್ಡ ಕುಸಿತ ದುರ್ಘಟನೆ: ತಂದೆಯ ಮೃತದೇಹ ಹುಡುಕಿಕೊಡುವಂತೆ ಹೆಚ್‌ಡಿಕೆಗೆ ಜಗನ್ನಾಥ್ ಪುತ್ರಿಯರ ಮನವಿ..!

ಪರೇಶ್ ಮೇಸ್ತಾ ಒಬ್ಬನಿಗೋಸ್ಕರ ಇಡೀ ಜಿಲ್ಲೆಯನ್ನೇ ಬಂದ್ ಮಾಡಿದ್ರು, ಅವರೆಲ್ಲೋದ್ರು ಈಗ?. ಎಷ್ಟು ಜನ ಸತ್ರು... 7 ಜನ ಅಂತಾ ಲೆಕ್ಕಕ್ಕೆ ಸಿಕ್ಕಿದ್ದು, ಎಷ್ಟು ಜನ ಇದ್ದಾರೆ ಗೊತ್ತಿಲ್ಲ. ನಾವು ಪ್ರಯತ್ನ ನಡೆಸುತ್ತಿದ್ದೇವೆ, ಈ ಸಾವಿಗೆ ಬೆಲೆ‌ ಇಲ್ವಾ?. ಮುಂದಿನ‌‌ ದಿನಗಳಲ್ಲಿ ಜನರು 100% ಬೀದಿಗೆ ಇಳಿದು ಪ್ರತಿಭಟನೆ‌ ಮಾಡ್ತಾರೆ ಎಂದ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. 

click me!