
ಅಹಮದಾಬಾದ್[ನ.22]: ಬಿಡದಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಅಪಹರಿಸಿ, ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು ಕಿರುಕುಳ ನೀಡುತ್ತಿದ್ದಾನೆ ಎಂದು ಬೆಂಗಳೂರು ನಿವಾಸಿ ಜನಾರ್ದನ ಶರ್ಮಾ ಅವರು ಮಾಡಿರುವ ಆರೋಪ ಸಂಬಂಧ ನಿತ್ಯಾನಂದ ಮೊದಲ ಪ್ರತಿಕ್ರಿಯೆ ನೀಡಿದ್ದಾನೆ. ತಾನು ಯಾರನ್ನೂ ಬಂಧನದಲ್ಲಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.
ನಿತ್ಯಾನಂದ ಪರಾರಿ!: ಗುಜರಾತ್ ಪೊಲೀಸರಿಂದ ಸ್ಫೋಟಕ ಮಾಹಿತಿ
ಎರಡು ದಿನಗಳ ಹಿಂದೆ ಯುಟ್ಯೂಬ್‌ನಲ್ಲಿ 1.39 ಗಂಟೆಯ ವಿಡಿಯೋ ಬಿಡುಗಡೆ ಮಾಡಿರುವ ನಿತ್ಯಾನಂದ, ‘ಯಾವುದೇ ಮಕ್ಕಳು ಅಥವಾ ಸನ್ಯಾಸಿನಿಯರನ್ನು ಅವರ ಕುಟುಂಬ ವರ್ಗ ಭೇಟಿ ಮಾಡದಂತೆ ತಡೆಯೊಡ್ಡಲಾಗಿಲ್ಲ. ಎಲ್ಲ ಗೊಂದಲಗಳನ್ನೂ ನಾನು ಬಗೆಹರಿಸುತ್ತಿದ್ದೇನೆ. ನಾನಾಗಲೀ ಅಥವಾ ನನ್ನ ಆಡಳಿತ ವರ್ಗವಾಗಲೀ ಯಾರನ್ನೂ ತಡೆದಿಲ್ಲ. ಇದು ಅವರ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ನಿರ್ಧಾರವಾಗಿದೆ’ ಎನ್ನುವ ಮೂಲಕ ಸನ್ಯಾಸಿನಿಯರೇ ಅವರ ಬಂಧುಗಳನ್ನು ಭೇಟಿ ಮಾಡುತ್ತಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾನೆ.
ಮಕ್ಕಳಿಗೆ ನಿತ್ಯಾ ಏನ್ಮಾಡ್ತಾನೆ? ವಿಡಿಯೋದಲ್ಲಿ ಕರ್ಮಕಾಂಡ ಬಿಚ್ಚಿಟ್ಟ ಮಾಜಿ ಶಿಷ್ಯೆ
ರಬೇತುದಾರರಲ್ಲಿ ಏನಾದರೂ ತೊಡಕುಗಳು ಇದ್ದರೆ ಇಡೀ ಸಂಘದ ಮೇಲೆಯೇ ದಾಳಿ ಮಾಡಲಾಗುತ್ತದೆ. ಹಿಂದು ವಿರೋಧಿ ಗುಂಪಿನ ಜತೆಗೂಡಿ ಹಿಂದುತ್ವವನ್ನೇ ಪತನ ಮಾಡಲು ಯತ್ನಿಸುತ್ತಾರೆ ಎಂದೂ ಹೇಳಿದ್ದಾನೆ. ಇದೇ ವೇಳೆ, ಪೊಲೀಸರು ನನ್ನ ಆಶ್ರಮದ ವಿರುದ್ಧ ಬೇಟೆಯಾಡುತ್ತಿದ್ದಾರೆ. ಆದರೆ ನನ್ನ ಗುಜರಾತಿ ಭಕ್ತರು ಅತ್ಯುತ್ತಮ. ನಿಷ್ಠರು. ಅವರ ನಿಷ್ಠೆ ಅಸಾಧಾರಣ ಹಾಗೂ ಪರಿಪೂರ್ಣ ಎಂದೂ ತಿಳಿಸಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ