
ಚಿಕ್ಕೋಡಿ (ಮಾ. 12): ಆಹಾರ ಸಚಿವ ಉಮೇಶ್ ಕತ್ತಿ (Umesh Katti) ತವರು ಜಿಲ್ಲೆ ಬೆಳಗಾವಿಯ ಚಿಕ್ಕೋಡಿಯಲ್ಲಿ ಊಟಕ್ಕಾಗಿ ಮಕ್ಕಳ ಪರದಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ತಾಲೂಕಿನ ಸರ್ಕಾರಿ ಶಾಲೆಗೆ ಆಹಾರ ಇಲಾಖೆ ಸರಿಯಾಗಿ ಅಕ್ಕಿ ಪೊರೈಸದ ಕಾರಣ ಮಕ್ಕಳು ಪರದಾಟುವ ಪರಿಸ್ಥಿತಿ ಬಂದಿದೆ. ಕಳೆದ 15 ದಿನಗಳಿಂದ ಜೋಡಕುರಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟ (midday meals) ನಿಲ್ಲಿಸಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರ್ಕಾರಿ ಶಾಲೆ ಮಕ್ಕಳು ಪರದಾಡುತ್ತಿದ್ದಾರೆ.
ಸರಿಯಾದ ಸಮಯಕ್ಕೆ ಅಕ್ಕಿ ಬಾರದ ಹಿನ್ನಲೆ ಮಕ್ಕಳ ಭೋಜನಕ್ಕೆ ಬ್ರೇಕ್ ಹಾಕಲಾಗಿದೆ. ಸದ್ಯಕ್ಕೆ ಶಾಲೆಯಲ್ಲಿ ಊಟ ಸಿಗದಿರುವ ಕಾರಣ ಮನೆಯಿಂದಲೇ ವಿದ್ಯಾರ್ಥಿಗಳು ಊಟ ತರುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದ ಶಾಲೆಯಲ್ಲಿ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಗಳಿಗೆ ಅಕ್ಕಿ ಪೊರೈಸಬೇಕಾದ ಅಕ್ಷರ ದಾಸೋಹ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದು, ಶಾಲೆಯಲ್ಲಿ ಊಟ ಸಿಗದೆ ಚಿಕ್ಕ ಮಕ್ಕಳು ಹಸಿವಿನಿಂದ ಪರದಾಡುತ್ತಿದ್ದಾರೆ.
ಇದನ್ನೂ ಓದಿ: Belagavi: ವಿಟಿಯು ಇತಿಹಾಸದಲ್ಲೇ ಬುಷ್ರಾಗೆ ದಾಖಲೆಯ 16 ಚಿನ್ನದ ಪದಕ
ದೂರದ ತೋಟದ ವಸತಿ ಪ್ರದೇಶದಿಂದ ಬರುವವರಿಗೆ ಮನೆಯಿಂದ ಊಟ ತರಲು ಸಾಧ್ಯವಾಗಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಆದರೆ ಕಳೆದ 15 ದಿನಗಳಿಂದ ವಿದ್ಯಾರ್ಥಿಗಳಿಗೆ ಊಟ ಸಿಗದೆ ಇದ್ದರೂ ಅಕ್ಷರ ದಾಸೋಹ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದಂತೆ ಕಾಣುತ್ತಿದೆ. ಶಾಲೆಯ ಮಧ್ಯಾಹ್ನದ ಊಟ ಸ್ಥಗಿತಗೊಂಡಿದ್ದರೂ ಈವರೆಗೆ ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲಾ ಎಂದು ಅಕ್ಷರ ದಾಸೋಹ ಅಧಿಕಾರಿಗಳು ಹೇಳುತ್ತಿದ್ದಾರೆ.
"ನಾನು ಹೊಸದಾಗಿ ಇಲ್ಲಿಗೆ ಬಂದಿದ್ದಿನಿ. ನಾನು ಬಂದ ಬಳಿಕ ನಾಲ್ಕನೇ ತೃಯಮಾಸಿಕದ ಅಕ್ಕಿ ಬಂದಿಲ್ಲಾ, ಬಳಿಕ ನನಗೆ ಶಾಲಾ ಸಿಬ್ಬಂದಿ ನನ್ನ ಗಮನಕ್ಕೆ ತಂದಿದ್ದಾರೆ. ಶಾಲೆಯಲ್ಲಿ ಮಕ್ಕಳು ಜಾಸ್ತಿ ಇರುವ ಕಾರಣ ರೇಶನ್ ಸೊಸೈಟಿ ಅಕ್ಕಿ ಕೂಡ ಅಲ್ಲಿ ಸಾಕಾಗಿಲ್ಲಾ. ಅಕ್ಕಿ ಬಂದ ತಕ್ಷಣ 15 ದಿನಗಳ ಅಕ್ಕಿಯನ್ನ ವಿದ್ಯಾರ್ಥಿಗಳ ಮನೆಗೆ ನೀಡುತ್ತೇವೆ" ಎಂದು ಅಧಿಕಾರಿ ಹೇಳಿದ್ದಾರೆ.
ರಾಜ್ಯದಲ್ಲಿ ಮನೆಮನೆಗೆ ಪಡಿತರ ವಿತರಣೆ ಇಲ್ಲ: ಮನೆ ಮನೆಗೆ ಪಡಿತರ ಒದಗಿಸುವ ತನ್ನ ಮಹತ್ವಾಕಾಂಕ್ಷಿ ಯೋಜನೆಯಿಂದ ರಾಜ್ಯ ಸರ್ಕಾರ(Government of Karnataka) ಹಿಂದೆ ಸರಿದಿದೆ. ಈ ಯೋಜನೆ ಕೈಬಿಡಲಾಗಿದೆ ಎಂದು ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ ಕತ್ತಿ(Umesh Katti) ತಿಳಿಸಿದ್ದಾರೆ.
ಹುಕ್ಕೇರಿಯಲ್ಲಿ(Hukkeri) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶ(Andhra Pradesh) ಹಾಗೂ ತಮಿಳುನಾಡಿನಲ್ಲಿ(Tamil Nadu) ಮನೆಮನೆಗೆ ಪಡಿತರ ತಲುಪಿಸುವ ಯೋಜನೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ(Karnataka) ಈ ಯೋಜನೆ ಕೈಬಿಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Covid Crisis: ಮಾಸ್ಕ್ ಧರಿಸುವುದು ಅವರವರಿಗೆ ಬಿಟ್ಟದ್ದು, ನಾನು ಧರಿಸುತ್ತಿಲ್ಲ: ಸಚಿವ ಕತ್ತಿ
ಈಗಿರುವ ಪಡಿತರ ಅಂಗಡಿಗಳ ಮೂಲಕವೇ ರೇಷನ್(Ration) ವಿತರಿಸಲಾಗುತ್ತದೆ. ಬಡ ಕುಟುಂಬಗಳಿಗೆ ಏ.1ರಿಂದ ಪೊರ್ಟಿಫೈಡ್ ರೈಸ್ ವಿತರಣೆ ಮಾಡಲಾಗುವುದು ಎಂದೂ ಕತ್ತಿ ತಿಳಿಸಿದರು. ರಾಜ್ಯದಲ್ಲಿ ಶೀಘ್ರ ಪಡಿತರ ಸೇರಿದಂತೆ ಅನೇಕ ಸವಲತ್ತುಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೇ ತಲುಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಇತ್ತೀಚೆಗೆ ಘೋಷಿಸಿದ್ದರು. ಆದರೆ ಈ ಯೋಜನೆ ಕೈಬಿಡಲಾಗಿದೆ ಎಂದು ಸಚಿವ ಉಮೇಶ್ ಈಗ ಕತ್ತಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ