HD Kumaraswamy ಪಂಚರಾಜ್ಯ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ

By Kannadaprabha News  |  First Published Mar 12, 2022, 5:30 AM IST

ರಾಜ್ಯ ಬಿಜೆಪಿಯವರು ಆ ಭ್ರಮೆಯಲ್ಲಿದ್ದರೆ ಜನರೇ ಇಳಿಸ್ತಾರೆ

ರಾಜ್ಯದ ಚುನಾವಣೆಗೆ ಇದು ದಿಕ್ಸೂಚಿಯಲ್ಲ

ಮೈಷುಗರ್‌ಗೆ .50 ಕೋಟಿ ಬರೀ ಕಣ್ಣೊರೆಸುವ ತಂತ್ರ: ಎಚ್ಡಿಕೆ ಟೀಕೆ


ಮದ್ದೂರು (ಮಾ.12): ಪಂಚರಾಜ್ಯ ಚುನಾವಣಾ ಫಲಿತಾಂಶ (Five State Election Result) ಮುಂದಿನ ವಿಧಾನಸಭೆ ಚುನಾವಣೆ (Karnataka Election) ಮೇಲೆ ಯಾವ ರೀತಿಯ ಪರಿಣಾಮವನ್ನೂ ಬೀರುವುದಿಲ್ಲ. ಒಂದು ವೇಳೆ ರಾಜ್ಯ ಬಿಜೆಪಿಯವರು (State BJP) ಆ ಭ್ರಮೆಯಲ್ಲಿದ್ದರೆ ಜನರೇ ಅದನ್ನು ಇಳಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ( Former Chief minister HD Kumaraswamy ) ಹೇಳಿದರು.

ತಾಲೂಕಿನ ಚಾಮನಹಳ್ಳಿಯ ಎಪಿಎಂಸಿ ಮಾಜಿ ಅಧ್ಯಕ್ಷ ದಿ.ರವಿಯವರ ಪುತ್ರ ವಿಜಯ್‌ಗೌಡ ಹಾಗೂ ಪಕ್ಷದ ಮುಖಂಡರಿಂದ ಅಭಿನಂದನೆ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಉತ್ತರ ಭಾರತದ ರಾಜಕೀಯ ವಾತಾವರಣವೇ ಬೇರೆ. ದಕ್ಷಿಣ ಭಾರತದ ರಾಜಕೀಯ ವಾತಾವರಣವೇ ಬೇರೆ. ಅಲ್ಲಿಗೂ ಇಲ್ಲಿಗೂ ರಾಜಕೀಯ ವಿಚಾರಗಳಲ್ಲಿ ಅಜಗಜಾಂತರ ವ್ಯತ್ಯಾಸಗಳಿವೆ. ಹಾಗಾಗಿ ಪಂಚರಾಜ್ಯ ಚುನಾವಣಾ ಫಲಿತಾಂಶ ರಾಜ್ಯದ ಮುಂದಿನ ಚುನಾವಣಾ ದಿಕ್ಸೂಚಿಯಾಗಲಾರದು ಎಂದು ನೇರವಾಗಿ ಹೇಳಿದರು.

ಉತ್ತರ ಪ್ರದೇಶದಲ್ಲಿ 20 ವರ್ಷಗಳ ಹಿಂದೆಯೇ ಕಾಂಗ್ರೆಸ್‌ (Congress) ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಈಗ ಪ್ರಿಯಾಂಕಾ ಗಾಂಧಿ (Priyanaka Gandhi) ನೇತೃತ್ವದಲ್ಲಿ ಚುನಾವಣೆ ಎದುರಿಸಿದರೂ ಆರಂಭದಲ್ಲಿ ಸೋಲು-ಗೆಲುವು ಸಾಮಾನ್ಯ. ಮುಂದೆ ಯಾವ ರೀತಿ ಬೆಳವಣಿಗೆಗಳಾಗುತ್ತವೆ ಎನ್ನುವುದನ್ನು ಹೇಳಲಾಗುವುದಿಲ್ಲ ಎಂದು ನುಡಿದರು.

ಆದರೂ ಪಂಚರಾಜ್ಯ ಚುನಾವಣಾ ಫಲಿತಾಂಶವನ್ನು ಎಲ್ಲರೂ ಒಪ್ಪಲೇಬೇಕು. ಅಲ್ಲಿನ ಜನರು ಕೊಟ್ಟತೀರ್ಪುನ್ನು ಅಲ್ಲಗೆಳೆಯಲಾಗುವುದಿಲ್ಲ. ಅಲ್ಲಿನ ಫಲಿತಾಂಶವನ್ನು ನೋಡಿ ಇಲ್ಲಿಯೂ ಅದೇ ಫಲಿತಾಂಶ ಬರಲಿದೆ ಎಂಬ ಭ್ರಮೆಯಲ್ಲಿ ರಾಜ್ಯ ಬಿಜೆಪಿನಾಯಕರಿದ್ದರೆ ಅದನ್ನು ಜನರೇ ಇಳಿಸಲಿದ್ದಾರೆ ಎಂದು ಹೇಳಿದರು. ರೈತರೇ ಪಕ್ಷವನ್ನು ಮೇಲೆತ್ತುವರು ರಾಜ್ಯದಲ್ಲಿ ಜೆಡಿಎಸ್‌ ಪರಿಸ್ಥಿತಿ ಚೆನ್ನಾಗಿಯೇ ಇದೆ. ಕೆಲವರು ಪಕ್ಷವನ್ನು ಮುಗಿಸುವುದಕ್ಕೆ ಹೊರಟಿದ್ದಾರೆ. ಅದು ಸಾಧ್ಯವಾಗದ ಮಾತು. ಜನರು ಮತ್ತೆ ಮೇಲೆತ್ತುವರೆಂಬ ವಿಶ್ವಾಸವಿದೆ. ಜೆಡಿಎಸ್‌ ಪಕ್ಷವನ್ನು ಹಿಂದಿನಿಂದ ಉಳಿಸಿಕೊಂಡು ಬಂದಿರುವವರೇ ಹಳ್ಳಿ ರೈತರು. ಅವರೇ ಪಕ್ಷವನ್ನು ಮತ್ತೆ ಮೇಲೆತ್ತುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಣ್ಣೊರೆಸುವ ತಂತ್ರ: ಮೈಷುಗರ್‌ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ 400 ಕೋಟಿ ರು. ಹಣವನ್ನು ಬಜೆಟ್‌ನಲ್ಲಿ ಘೋಷಿಸಿ 100 ಕೋಟಿ ರು. ಹಣ ಬಿಡುಗಡೆ ಮಾಡಿದ್ದೆ. ಆ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ. ಈಗ 50 ಕೋಟಿ ರು. ಜನರ ಕಣ್ಣೊರೆಸುವತಂತ್ರವಷ್ಟೇ. ಬಿಜೆಪಿ ನಾಯಕರನ್ನು ಮಂಡ್ಯದ ಜನರು ನಂಬಿದರೆ ಬೀದಿಗೆ ತರುವುದು ನಿಶ್ಚಿತ ಎಂದರು. ಈ ವೇಳೆ ಶಾಸಕರಾದ ಡಿ.ಸಿ.ತಮ್ಮಣ್ಣ, ಸುರೇಶ್‌ಗೌಡ, ಗ್ರಾಪಂ ಅಧ್ಯಕ್ಷೆ ಸೌಮ್ಯ ಪ್ರಕಾಶ್‌, ಉಪಾಧ್ಯಕ್ಷ ಅರುಣ, ಸದಸ್ಯರಾದ ಸಿದ್ದರಾಜು, ದೇಶಹಳ್ಳಿ ಶಂಕರ್‌, ಕೃಷ್ಣೇಗೌಡ, ಮಾಜಿ ಸದಸ್ಯ ದಾಸಪ್ಪ, ಎಂಪಿಎಂಸಿ ಮಾಜಿ ಅಧ್ಯಕ್ಷ ಎಸ್‌.ಎಂ.ಗೌಡ, ತಾಲೂಕು ಜೆಡಿಎಸ್‌ ಅಧ್ಯಕ್ಷ ಚಿಕ್ಕತಿಮ್ಮೇಗೌಡ ಇದ್ದರು.

Tap to resize

Latest Videos

HD Kumaraswamy: ಅವಧಿಗೂ ಮುನ್ನ ವಿಧಾನಸಭೆ ಚುನಾವಣೆ ಸಾಧ್ಯತೆ
ನಾಳೆ, ನಾಡಿದ್ದು ಜಾನಪದ ಲೋಕೋತ್ಸವ ಸಂಭ್ರಮ
ಬೆಂಗಳೂರು:
ಕರ್ನಾಟಕ ಜಾನಪದ ಪರಿಷತ್‌ ವತಿಯಿಂದ ಮಾ.12 ಹಾಗೂ 13ರಂದು ರಾಮನಗರದ ಜಾನಪದ ಲೋಕದಲ್ಲಿ ಪ್ರವಾಸಿ ಜಾನಪದ ಲೋಕೋತ್ಸವ ಹಮ್ಮಿಕೊಳ್ಳಲಾಗಿದ್ದು, 27 ಮಂದಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪರಿಷತ್‌ ಅಧ್ಯಕ್ಷ ಟಿ.ತಿಮ್ಮೇಗೌಡ ತಿಳಿಸಿದರು.

ಮೇಕೆದಾಟು ಯೋಜನೆಗೆ ಕೇಂದ್ರದಿಂದಲೇ 'ವಿವಾದ' ಪದ ಬಳಕೆ, ಕುಮಾರಸ್ವಾಮಿ ಆಕ್ರೋಶ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.12ರ ಬೆಳಗ್ಗೆ 10.30ಕ್ಕೆ ಲೋಕೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ಉದ್ಘಾಟಿಸಲಿದ್ದಾರೆ. ಪದ್ಮಶ್ರೀ ಮಾತಾ ಬಿ.ಮಂಜಮ್ಮ ಜೋಗತಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾ.13ರ ಸಂಜೆ 5 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್‌್ಥ ನಾರಾಯಣ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕಿ ಅನಿತಾ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವೇಳೆ ರಾಮನಗರ ಮತ್ತು ಚಿಕ್ಕಮಗಳೂರು ಜಿಲ್ಲೆಯ ಜನಪದ ಕಲಾ ಸಾಧಕರ ಪುಸಕ್ತ ಬಿಡುಗಡೆ ಮಾಡಲಾಗುವುದು. ಲೋಕೋತ್ಸವದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದರು.

click me!