ಮೋದಿ ಕಾರ್ಯಕ್ರಮದಲ್ಲಿ ಹಿಂದಿ ಹೇರಿಕೆಗೆ ಬ್ರೇಕ್, ಕನ್ನಡದಲ್ಲೇ ನಾಮಫಲಕಗಳು..!

By Suvarna News  |  First Published Jun 20, 2022, 3:13 PM IST

* ಕರ್ನಾಟಕ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ
* ಮೋದಿ ಕಾರ್ಯಕ್ರಮಗಳಲ್ಲಿ ಹಿಂದಿ ಹೇರಿಕೆ ಇಲ್ಲ
* ಪ್ರಧಾನಿ ಉದ್ಘಾಟಿಸಿದ ನಾಮಫಲಕಗಳು ಕನ್ನಡದಲ್ಲೇ


ಬೆಂಗಳೂರು, (ಜೂನ್.20): ಕೇಂದ್ರ ಸರ್ಕಾರದ  ಪ್ರತಿನಿಧಿಗಳು ಭಾಗವಹಿಸುವ ರಾಜ್ಯದ ಕಾರ್ಯಕ್ರಮಗಳಲ್ಲಿ ಪ್ರಾದೇಶಿಕ ಭಾಷಾ ನೀತಿ ಗಾಳಿಗೆ ತೂರಿ ಪದೇ ಪದೇ ಹಿಂದಿ ಹೇರಿಕೆಯಾಗುತ್ತಿರುವ ಬಗ್ಗೆ ಎಂಬ ಆರೋಪ ಕೇಳಿಬಂದಿದ್ದವು.

ಇದರಿಂದ ಎಚ್ಚೆತ್ತುಕೊಂಡ ಬೊಮ್ಮಾಯಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ ಮೊದಲ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಗೆ ಮಾತ್ರ ಆದ್ಯತೆ ನೀಡಿದೆ. ಇದರಿಂದ ಹಿಂದಿ ಹೇರಿಕೆಗೆ ಈ ಬಾರಿ ತೆರೆ‌ ಬಿದ್ದಿದೆ.

Tap to resize

Latest Videos

ಐಐಎಸ್ ಸಿ ಆವರಣದಲ್ಲಿ ಆಯೋಜಿಸಿದ್ದ ಮೊದಲ ಕಾರ್ಯಕ್ರಮ ಮಿದುಳು ಸಂಶೋಧನಾ ಕೇಂದ್ರ ಉದ್ಘಾಟನೆ ಹಾಗೂ ಬಾಗ್ಚಿ- ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿಲಾನ್ಯಾಸ ನೆರವೇರಿಸುವ ಸಂದರ್ಭದಲ್ಲಿ ಫಲಕಗಳನ್ನು ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಮಾತ್ರ ಕೆತ್ತಲಾಗಿತ್ತು.  ಎಲ್ಲಿಯೂ ಹಿಂದಿ ಅವತರಣಿಕೆಗಳು ಇರಲಿಲ್ಲ.

ಹಿಂದಿ ಬಳಸಿದ್ದಕ್ಕೆ ಕರವೇ ಕಾರ್ಯಕರ್ತರು ಬಿಸಿ, ಮೋದಿ ಬ್ಯಾನರ್‌ಗೆ ಮಸಿ
 
ಈ ಕಾರ್ಯಕ್ರಮ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಜತೆಗಿದ್ದರು

ಪ್ರಧಾನಿ ಶ್ರೀ ಅವರು ಬೆಂಗಳೂರಿನ ನಲ್ಲಿ 280 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಿದುಳು ಸಂಶೋಧನಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ, 425 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬಾಗ್ಚಿ ಪಾರ್ಥಸಾರಥಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು. pic.twitter.com/GjZMM9ad9a

— BJP Karnataka (@BJP4Karnataka)

ಹಿಂದೆ ಬ್ಯಾನರ್‌ಗೆ ಮಸಿ
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಪ್ರವಾಸದ ಹಿನ್ನೆಲೆಯಲ್ಲಿ ಮೈಸೂರು ರಸ್ತೆಗಳಲ್ಲಿ ಹಿಂದೆಯಲ್ಲಿ ಸ್ವಾಗತ ಕೋರಲಾಗಿತ್ತು. ಇದಕ್ಕೆ ಕರವೇ ಕಾರ್ಯಕರ್ಯರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ರು.

ಮೈಸೂರು ರಸ್ತೆಯಲ್ಲಿ ಮೋದಿ ಸ್ವಾಗತಕ್ಕೆ ಹಿಂದಿ ಬ್ಯಾನರ್ ಹಾಕಲಾಗಿದ್ದು, ಇದಕ್ಕೆ ರಕ್ಷಣಾ ವೇದಿಕೆ ಆಕ್ಷೇಪಿಸಿದೆ. ಅಲ್ಲದೇ ಟಿ.ಎ ನಾರಾಯಣಗೌಡ ಬಣದ ಕರವೇ ಕಾರ್ಯಕರ್ತರು ಹಿಂದಿ ಭಾಷೆಯಲ್ಲಿ ಬ್ಯಾನರ್ ಹಾಕಿದ ಹಿನ್ನಲೆಯಲ್ಲಿ ಮಸಿ ಬಳಿದು ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ಪೊಲೀಸ್ ಮತ್ತು ರಕ್ಷಣಾ ವೇದಿಕೆಯ ಯುವ ಘಟಕದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿತ್ತು.

Koo App
ಪ್ರಧಾನಮಂತ್ರಿ Narendra Modi ಅವರು ಇಂದು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 280 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಮಿದುಳು ಸಂಶೋಧನಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ, 425 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಬಾಗ್ಚಿ - ಪಾರ್ಥಸಾರಥಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯ ಮಂತ್ರಿ @bsbommai ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ದಾನಿಗಳಾದ ಕ್ರಿಸ್ ಗೋಪಾಲಕೃಷ್ಣನ್ ದಂಪತಿ ಹಾಗೂ ಬಾಗ್ಚಿ ಮತ್ತು ಪಾರ್ಥಸಾರಥಿ ಕುಟುಂಬದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. - CM of Karnataka (@CMOKarnataka) 20 June 2022

ಕಳೆದ ವರ್ಷ  ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ 7.5 ಕಿ.ಮೀ. ಮೆಟ್ರೋ ನೇರಳೆ ಮಾರ್ಗವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹಾಗೂ ಕೇಂದ್ರ ವಸತಿ, ನಗರ ವ್ಯವಹಾರ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದ್ದರು. ಆದ್ರೆ, ಈ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಲಾಗಿತ್ತು. ಕಾರ್ಯಕ್ರಮದ ತುಂಬೆಲ್ಲ ಹಿಂದೆಯಲ್ಲೇ ಇತ್ತು. ಇದು ಭಾರೀ ಆಕ್ರೊಶಕ್ಕೆ ಕಾರಣವಾಗಿತ್ತು.

ಕೆಂಗೇರಿ ನೇರಳೆ ಮಾರ್ಗದ ನಮ್ಮ ಮೆಟ್ರೋ ಉದ್ಘಾಟನೆ‌ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಕರ್ನಾಟಕಕ್ಕೆ ಮಾಡಿದ ಅವಮಾನ. ಸರ್ಕಾರಿ ಕಾರ್ಯಕ್ರಮದಲ್ಲೇ ಕನ್ನಡ ಕಡೆಗಣಿಸಿರುವ ಉದ್ದಟತನ ಸಹಿಸಲು ಸಾಧ್ಯವಿಲ್ಲ. ನಮ್ಮ ಮೆಟ್ರೋ ಯೋಜನೆ ಕೇಂದ್ರ ಹಾಗೂ ರಾಜ್ಯದ ಸಹಭಾಗಿತ್ವದ ಯೋಜನೆ. ಹೀಗಿರುವಾಗ ಕನ್ನಡಕ್ಕೂ ಆದ್ಯತೆ ಇರಬೇಕಲ್ಲವೆ.? ಅಂತೆಲ್ಲ ಪ್ರಶ್ನಿಸಿದ್ದರು.

click me!