ಡೀಸೆಲ್ ದರ ಏರಿಕೆ: ಬಸ್ ಟಿಕೇಟ್ ದರ ಹೆಚ್ಚಳ ಬಗ್ಗೆ ಸ್ಪಷ್ಟನೆ ಕೊಟ್ಟ ಸವದಿ

By Suvarna News  |  First Published Feb 18, 2021, 5:05 PM IST

ಡೀಸೆಲ್ ದರ ಹೆಚ್ಚಳವಾಗುತ್ತಿದ್ದರಿಂದ ಬಸ್ ಪ್ರಯಾಣ ಏರಿಕೆಯಾಗುತ್ತಾ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದೀಗ ಅದಕ್ಕೆ ಸ್ವತಃ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ.


ಬೆಂಗಳೂರು, (ಫೆ.18): ದಿನೇ-ದಿನೇ ಇಂಧನ ದರ ಏರಿಕೆಯಾಗುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಇನ್ನು ಡೀಸೆಲ್ ಬೆಲೆ ಹೆಚ್ಚಳವಾಗಿದ್ದರೂ ಬಸ್ ಪ್ರಯಾಣ ದರದ ಬಗ್ಗೆ ಸಾರಿಗೆ ಸಚಿವರು ಆದ ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ ಕೊಟ್ಟಿದ್ದಾರೆ.

ಕಲಬುರಗಿಯಲ್ಲಿ ಇಂದು (ಗುರುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಡೀಸೆಲ್ ದರ ಹೆಚ್ಚಳ ಅವಲೋಕಿಸಿದರೆ ದರ ಹೆಚ್ಚಿಸಬೇಕು. ಆದರೆ ಸಂಸ್ಥೆಯ ಬಸ್ ಗಳಲ್ಲಿ‌ ಸಂಚರಿಸುವರು ಬಡ ಹಾಗೂ ಮಧ್ಯಮ ವರ್ಗದವರಿರುತ್ತಾರೆ. ಕೊರೋನಾದಿಂದ ಅವರಿಗೂ ಹೊಡೆತ ಬಿದ್ದಿದೆ. ಹೀಗಾಗಿ ಸದ್ಯಕ್ಕಂತು ಬಸ್ ದರ ಹೆಚ್ಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Tap to resize

Latest Videos

ಪೆಟ್ರೋಲ್ ದರ ಏರಿಕೆಗೆ ಹಿಂದಿನ ಸರ್ಕಾರ ಕಾರಣ: ಕಾಂಗ್ರೆಸ್‌ ವಿರುದ್ಧ ಮೋದಿ ಕಿಡಿ!

ಎಪ್ರಿಲ್ ಹೊತ್ತಿಗೆ ಬಸ್ ಸಂಚಾರ ಮೊದಲಿನ ಸ್ಥಿತಿಗೆ ಬರಲಿದೆ ಎಂಬುದಾಗಿ ದೃಢ ವಿಶ್ವಾಸ ಹೊಂದಲಾಗಿದೆ. ಎನ್‌ಇಕೆಎಸ್‌ಆರ್ ಟಿಸಿ ಯಲ್ಲಿ ಶೇ. 90ರಷ್ಟು, ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಶೇ. 80ರಷ್ಟು, ಕೆಎಸ್‌ಆರ್ಟಿಸಿಯಲ್ಲಿ ಶೇ. 75ರಷ್ಟು ಹಾಗೂ ಬಿಎಂಟಿಸಿಯಲ್ಲಿ ಶೇ. 60ರಷ್ಟು ಬಸ್ ಸಂಚಾರ ಮೊದಲಿನ ಸ್ಥಿತಿಗೆ ಬಂದಿದೆ. ಬಿಎಂಟಿಸಿಯಲ್ಲೇ ದಿನಕ್ಕೆ 1.50 ಕೋ. ರೂ ನಷ್ಟವಾಗುತ್ತಿದೆ ಎಂದು ತಿಳಿಸಿದರು.

click me!