
ನವದೆಹಲಿ, (ಸೆ.27): ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Management Authority) 14ನೇ ಸಭೆ ಇಂದು (ಸೆ.27) ನಡೆಯಿತು. ಸಭೆಯ ಅಜೆಂಡಾದಲ್ಲಿ ಮೇಕೆದಾಟು ಜಲಾಶಯದ ವಿಚಾರವಿತ್ತಾದರೂ ಚರ್ಚೆ ನಡೆಯಲಿಲ್ಲ.
ಸಭೆಯಲ್ಲಿ ಕರ್ನಾಟಕ ದ ಅಧಿಕಾರಿಗಳು ವರ್ಚುವಲ್ ಮೂಲಕ ಭಾಗವಹಿಸಿದ್ರು. ಆದ್ರೆ, ಸಭೆಯಲ್ಲಿ ಮೇಕೆದಾಟು ಯೋಜನೆಗೆ ೯Mekedatu Project ) ಮೂರು ರಾಜ್ಯಗಳ ವಿರೋಧ ಹಿನ್ನಲೆ ಚರ್ಚೆ ಮುಂದೂಡಲಾಗಿದೆ.
ಮೇಕೆದಾಟು ಯೋಜನೆಗೆ ಮತ್ತೊಂದು ವಿಘ್ನ
ಸಭೆಯ ನಂತರ ಮಾಧ್ಯಮಳಿಗೆ ಪ್ರತಿಕ್ರಿಯಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ಹಲ್ದರ್, ಮೇಕೆದಾಟು ಡ್ಯಾಂ ವಿಚಾರವಾಗಿ ಚರ್ಚೆ ನಡೆಸಿಲ್ಲ. ನಾಲ್ಕು ರಾಜ್ಯಗಳ ಅಭಿಪ್ರಾಯ ಮತ್ತು ಆದ್ಯತೆ ಆಧರಿಸಿ ಚರ್ಚೆ ಮಾಡಬೇಕು. ಇದಕ್ಕೆ ಮೂರು ರಾಜ್ಯಗಳು ವಿರೋಧಿಸುತ್ತಿವೆ. ಅವರ ವಿರೋಧದ ನಡುವೆ ಚರ್ಚೆ ಮಾಡಲು ಸಾಧ್ಯವಿಲ್ಲ. ರಾಜ್ಯಗಳು ಒಪ್ಪಿದರೆ ಮಾತ್ರ ಸಭೆಯಲ್ಲಿ ಈ ವಿಚಾರ ಚರ್ಚಿಸಲು ಸಾಧ್ಯ ಎಂದರು.
ಅಂತರರಾಜ್ಯ ಜಲಾನಯನ ಪ್ರದೇಶಗಳ ವ್ಯಾಪ್ತಿಯಲ್ಲಿ ಯೋಜನೆ ರೂಪಿಸುತ್ತಿರುವ ಹಿನ್ನೆಲೆಯಲ್ಲಿ ವಿಸ್ತೃತ ಚರ್ಚೆ ಅನಿವಾರ್ಯ. ನಾವು ನೀರು ಹಂಚಿಕೆಯ ಬಗ್ಗೆ ಮಾತ್ರ ಚರ್ಚೆ ಮಾಡುತ್ತೇವೆ. ಬಾಕಿ ವಿಚಾರಗಳ ಬಗ್ಗೆ ಸುಪ್ರೀಂಕೋರ್ಟ್ ನಿರ್ಧರಿಸಲಿದೆ. ಇಂದಿನ ಸಭೆಯಲ್ಲಿ ನೀರು ಬಿಡುಗಡೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಕರ್ನಾಟಕದಿಂದ ನೀರು ಬಿಡುಗಡೆ ಕುರಿತು ತಮಿಳುನಾಡು, ಪುದುಚೇರಿ ಮನವಿ ಸಲ್ಲಿಸಿವೆ ಎಂದು ಹೇಳಿದರು.
ಜೂನ್ ಮತ್ತು ಸೆಪ್ಟೆಂಬರ್‌ವರೆಗಿನ ಬಾಕಿ ನೀರು ಬಿಡುಗಡೆಗೆ ಈ ರಾಜ್ಯಗಳಿಂದ ಮನವಿ ಬಂದಿದೆ. ಅಕ್ಟೋಬರ್ 7ಕ್ಕೆ ಸಭೆ ನಡೆಸಿ ನೀರು ಬಿಡುಗಡೆ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ