ಕೊರೋನಾ ಮತ್ತೊಂದು ರೌಂಡ್ ಬರುವ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದು, ಸಚಿವ ಆರ್.ಅಶೋಕ್ ಈ ಬಗ್ಗೆ ವಿವರಿಸಿದ್ದಾರೆ.
ಬೆಂಗಳೂರು, (ಡಿ.11): ರಾಜ್ಯದಲ್ಲಿ 2ನೇ ಕೋವಿಡ್ ಅಲೆ ಭೀತಿ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ಸೇರಿದಂತೆ ರಾಜ್ಯ ಸರ್ಕಾರ ಎಲ್ಲ ಮನರಂಜನಾ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿದೆ.
ಎರಡುಮೂರು ದಿನಗಳಲ್ಲಿ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಲಿದ್ದು, ಇದೇ ತಿಂಗಳ 20ರಿಂದ ಜ.2ರವರೆಗೆ ಸಂಭ್ರಮಾಚರಣೆ, ಹೆಚ್ಚು ಜನರು ಸೇರುವುದು, ಔತಣಕೂಟಗಳು, ಸೇರಿದಂತೆ ಯಾವುದೇ ರೀತಿಯ ಮನರಂಜನಾ ಕಾರ್ಯಕ್ರಮಗಳನ್ನ ನಡೆಸುವಂತಿಲ್ಲ.
undefined
ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಪ್ರಾಥಮಿಕ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಸಚಿವ ಈ ಮಾಹಿತಿಯನ್ನು ನೀಡಿದ್ದು, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಜನತೆ ಹೊಸ ವರ್ಷಾಚರಣೆಯನ್ನು ಆಚೆ ಬಂದು ಆಚರಿಸುವ ಬದಲು ನಿಮ್ಮ ನಿಮ್ಮ ಮನೆಗಳಲ್ಲೇ ಕುಟುಂಬದ ಸದಸ್ಯರ ಜೊತೆ ಆಚರಿಸಬೇಕೆಂದು ಮನವಿ ಮಾಡಿದರು.
ಹೊಸ ವರ್ಷಾಚರಣೆಗೆ ಬ್ರೇಕ್: ಸಾರ್ವಜನಿಕ ಸಂಭ್ರಮಕ್ಕೆ ನಿರ್ಬಂಧ!
ನ್ಯೂಇಯರ್ ರಸ್ತೆಗಳಲ್ಲಿ ಮಾಡುವಂತಿಲ್ಲ
ಈ ಬಾರಿ ಹೊಸವರ್ಷವನ್ನ ರಸ್ತೆಗಳಲ್ಲಿ ಆಚರಣೆ ಮಾಡುವಂತಿಲ್ಲ. ರಾಜಧಾನಿ ಬೆಂಗಳೂರಿನ ಎಂಜಿರಸ್ತೆ, ಬ್ರಿಗೇಡ್ ರಸ್ತೆ, ಅದೇ ರೀತಿ ರಾಜ್ಯದ ಇತರೆ ಭಾಗಗಳಲ್ಲೂ ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್ ಮತ್ತಿತರ ಕಡೆಯೂ ವರ್ಷಾಚರಣೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅಂಥವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಲಾಗುತ್ತದೆ ಎಂದು ಅಶೋಕ್ ಖಡಕ್ ಎಚ್ಚರಿಕೆ ಕೊಟ್ಟರು.
ಮಾರ್ಗಸೂಚಿ ಸಿದ್ದ
ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಡಿಸೆಂಬರ್‌ನಿಂದ ರಾಜ್ಯದಲ್ಲಿ 2ನೇ ಅಲೆ ಬರಬಹುದೆಂದು ಆತಂಕ ವ್ಯಕ್ತಪಡಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೊಸ ವರ್ಷಾಚರಣೆಯನ್ನು ನಿಷೇಸಲಾಗುವುದು. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಚರ್ಚೆ ಮಾಡಲಾಗಿದ್ದು, ವಿಪತ್ತು ನಿರ್ವಹಣಾ ಕಾಯ್ದೆಯಡಿ ಯಾವ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಸಂಪೂರ್ಣ ವಿವರಗಳನ್ನೊಳಗೊಂಡ ಮಾರ್ಗಸೂಚಿ ಸಿದ್ದಪಡಿಸಲಾಗಿದೆ. ಮುಖ್ಯಮಂತ್ರಿಗಳ ಅನುಮತಿ ಸಿಕ್ಕ ತಕ್ಷಣ ಅಕೃತವಾಗಿ ಆದೇಶ ಹೊರಡಿಸಲಿದ್ದೇವೆ ಎಂದು ಹೇಳಿದರು.
ರಾಜ್ಯಾದ್ಯಂತ ಎಲ್ಲ ಕಡೆ ವರ್ಷಾಚರಣೆಗೆ ನಿರ್ಬಂಧ ಹಾಕುವಂತೆ ಸಂಬಂಧಪಟ್ಟ ಅಕಾರಿಗಳಿಗೆ ಸೂಚಿಸಿದ್ದೇವೆ. ಬೆಂಗಳೂರಿನ ಎಂಜಿರಸ್ತೆ, ಬ್ರಿಗೇಡ್ ರಸ್ತೆ ಮತ್ತಿತರ ಕಡೆ ನಿರ್ಬಂಧವಿಸಲಾಗುವುದು. ಅಲ್ಲಿ ಯಾರಿಗೂ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.ಯಾರಾದರೂ ನಿಯಮ ಉಲ್ಲಂಘಿಸಿ ಆಚರಣೆ ಮಾಡಿದರೆ ಬಂಸಲು ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ಕೊಡುತ್ತೇವೆ. ಪಬ್, ರೆಸ್ಟೋರೆಂಟ್, ಹೋಟೆಲ್ ಸೇರಿದಂತೆ ಮತ್ತಿತರ ಕಡೆ ಹೊಸ ವರ್ಷಕ್ಕಾಗಿ ಯಾವುದೇ ರೀತಿಯ ಸಿದ್ದತೆಗಳನ್ನು ನಡೆಸಬಾರದು. ಈಗಿರುವ ಯತಾಸ್ಥಿತಿಯೇ ಮುಂದುವರೆಯಬೇಕು. ಈ ಸಂಬಂಧ ಬಿಬಿಎಂಪಿ ಆಯುಕ್ತರು ನೋಟಿಸ್ ಜಾರಿ ಮಾಡಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರು ಸೇರಿದಂತೆ ರಾಜ್ಯದ ಜನತೆಗೆ ನನ್ನ ಮನವಿ ಎಂದರೆ ಇದು ವಿಶೇಷವಾದ ಪ್ರಕರಣವಾಗಿರುವುದರಿಂದ ಈಬಾರಿ ನಿಮ್ಮ ಕುಟುಂಬದವರ ಜತೆ ಆಚರಿಸಿಕೊಳ್ಳಲು ಅಭ್ಯಂತರವಿಲ್ಲ. ಕೋವಿಡ್ ಸೋಂಕು ತಗುಲಿದರೆ ಒಬ್ಬರಿಂದ ಒಬ್ಬರಿಗೆ ಹರಡಬಹುದು. ಹೀಗಾಗಿ ವಿ ಇಲ್ಲದೆ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ ಎಂದು ಎಂದರು.