ಕಳೆದ ಸಾಲಿನಲ್ಲಿ ನೇಮಕ ಮಾಡಿಕೊಂಡಿದ್ದ ಅತಿಥಿ ಶಿಕ್ಷಕರು ಮಾ.30ರವರೆಗೆ ಕೆಲಸ ಮಾಡಿದ್ದಾರೆ. ಅಲ್ಲಿಯವರೆಗೆ ಅವರ ವೇತನ ಪೂರ್ಣಗೊಳಿಸಿದ್ದೇವೆ. ಈ ವರ್ಷ ಶಾಲೆ, ಕಾಲೇಜುಗಳ ಆರಂಭ ಆಗಿಲ್ಲ. ಹಾಗಾಗಿ ನೇಮಕಾತಿ ನಡೆದಿಲ್ಲ. ವೇತನ ನೀಡುವ ಪ್ರಶ್ನೆ ಬರುವುದಿಲ್ಲ ಎಂದ ಸುರೇಶ್ ಕುಮಾರ್
ಬೆಂಗಳೂರು(ಡಿ.11): ಪ್ರಸಕ್ತ ಸಾಲಿನಲ್ಲಿ ಇನ್ನೂ ಯಾವುದೇ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳು ಆರಂಭವಾಗದ ಕಾರಣ ಅತಿಥಿ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿಲ್ಲ. ಹಾಗಾಗಿ ಕಳೆದ ವರ್ಷ ಸೇವೆ ಸಲ್ಲಿಸಿದವರಿಗೆ ಕೋವಿಡ್ ಸಮಯದಲ್ಲಿ ವೇತನ ನೀಡುವ ಪ್ರಸ್ತಾವ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಹರೀಶ್ ಪೂಂಜಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಇಲಾಖೆಯಲ್ಲಿ ಪದವಿ ಪೂರ್ವ ಕಾಲೇಜು ಇರಬಹುದು, ಪ್ರೌಢ ಶಾಲೆಗಳಿರಬಹುದು ಪ್ರತಿವರ್ಷ ಶೈಕ್ಷಣಿಕ ವರ್ಷ ಪ್ರಾರಂಭವಾದ ಮೇಲೆ ಅತಿಥಿ ಶಿಕ್ಷಕರು, ಉಪನ್ಯಾಸಕರ ನೇಮಕ ನಡೆಯುತ್ತದೆ ಎಂದು ಹೇಳಿದ್ದಾರೆ.
undefined
ಕೊಪ್ಪಳ: ಬಾರದ ಗೌರವಧನ, ಕುಟುಂಬ ನಿರ್ವಹಣೆಗೆ ಅತಿಥಿ ಶಿಕ್ಷಕರ ಪರದಾಟ
ಕಳೆದ ಸಾಲಿನಲ್ಲಿ ನೇಮಕ ಮಾಡಿಕೊಂಡಿದ್ದ ಅತಿಥಿ ಶಿಕ್ಷಕರು ಮಾ.30ರವರೆಗೆ ಕೆಲಸ ಮಾಡಿದ್ದಾರೆ. ಅಲ್ಲಿಯವರೆಗೆ ಅವರ ವೇತನ ಪೂರ್ಣಗೊಳಿಸಿದ್ದೇವೆ. ಈ ವರ್ಷ ಶಾಲೆ, ಕಾಲೇಜುಗಳ ಆರಂಭ ಆಗಿಲ್ಲ. ಹಾಗಾಗಿ ನೇಮಕಾತಿ ನಡೆದಿಲ್ಲ. ವೇತನ ನೀಡುವ ಪ್ರಶ್ನೆ ಬರುವುದಿಲ್ಲ ಎಂದರು.