ಆರೆಸ್ಸೆಸ್, ಬಜರಂಗ ದಳ ನಿಷೇಧ ಪ್ರಶ್ನೆಯೇ ಇಲ್ಲ: ಬೊಮ್ಮಾಯಿ| ಎಚ್‌ಡಿಕೆ ಆರೋಪಕ್ಕೆ ಪ್ರಕ್ರಿಯಿಸುವುದಿಲ್ಲ
ದಾವಣಗೆರೆ[ಜ.24]: ಆರ್‌ಎಸ್‌ಎಸ್, ಬಜರಂಗ ದಳ ಸಂಘಟನೆಗಳು ದೇಶಭಕ್ತ ಸಂಘಟನೆಗಳು ಎಂದು ಬಣ್ಣಿಸಿರುವ ರಾಜ್ಯದಲ್ಲಿ ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಆರ್‌ಎಸ್‌ಎಸ್, ಬಜರಂಗ ದಳ ಕಾರಣವಾಗಿದ್ದು ಅದನ್ನು ನಿಷೇಧಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಆಗ್ರಹಕ್ಕೆ ಸಂಬಂಧಿಸಿ ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಈ ರೀತಿಯಾಗಿ ಉತ್ತರಿಸಿದರು. ಆರೆಸ್ಸೆಸ್, ಬಜರಂಗ ದಳ ನೆರೆ, ಪ್ರಕೃತಿ ವಿಕೋಪ, ದುರಂತ ಸೇರಿದಂತೆ ಅನೇಕ ತುರ್ತು ಪರಿಸ್ಥಿತಿ, ಸನ್ನಿವೇಶ, ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಿರುವ ದೇಶಭಕ್ತ ಸಂಘಟನೆ ಎಂದು ಸಮರ್ಥಿಸಿಕೊಂಡರು.
undefined
'ಆರೋಪಿ ಮಾನಸಿಕವಾಗಿ ನೊಂದಿದ್ದ ಅಂತ ವೈದ್ಯರು ಹೇಳ್ಬೇಕು ಬೊಮ್ಮಾಯಿ ಅಲ್ಲ'
ಇದೇವೇಳೆ ವಿಮಾನನಿಲ್ದಾಣದಲ್ಲಿ ಬಾಂಬ್ ಪ್ರಕರಣದ ಆರೋಪಿ ಆದಿತ್ಯ ರಾವ್ ವಿಚಾರಣೆ ನಡೆಯುತ್ತಿದ್ದು, ಮಂಗಳೂರು ಪೊಲೀಸ್ ಕಮೀಷನಕ್ ಹರ್ಷ ಈಗಾಗಲೇ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಎಲ್ಲ ಮಾಹಿತಿ ನೀಡಿದ್ದಾರೆ. ವಿಚಾರಣೆ ಪೂರ್ಣಗೊಂಡ ಪೂರ್ಣಗೊಂಡ ಬಳಿಕವಷ್ಟೇ ಸತ್ಯಾಂಶವೂ ಹೊರ ಬೀಳಲಿದೆ. ಆದಿತ್ಯ ರಾವ್ ಒಬ್ಬ ಮಾನಸಿಕ ಅಸ್ವಸ್ಥ ಎಂಬುದಾಗಿ ನಾನು ಎಲ್ಲಿಯೂ ಹೇಳಿಲ್ಲ ಎಂದು ಪುನರುಚ್ಚರಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗಳಿಗೆ ಸಂಬಂಧಿಸಿ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಕುಮಾರಸ್ವಾಮಿ ಏನು ಹೇಳುತ್ತಾರೆಂಬುದು ಸ್ವತಃ ಕುಮಾರಸ್ವಾಮಿಗೇ ಗೊತ್ತಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದೂ ಇಲ್ಲ ಎಂದರು.
ಅಹಂನಿಂದ ದೂರಾಗಲು ಗುರುವಿನ ದರ್ಶನ, ಆಶೀರ್ವಾದ ಅವಶ್ಯ: ಬೊಮ್ಮಾಯಿ
ಇದೇವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಗಳನ್ನು ತಳ್ಳಿಹಾಕಿದ ಅವರು ಕಾಯ್ದೆ ಜಾರಿ ಕುರಿತಂತೆ ಗೊಂದಲಗಳು ಈಗ ಬಗೆಹರಿದಿವೆ. ಕಾಯ್ದೆಯಲ್ಲಿದ್ದ ಎಲ್ಲಾ ಲೋಪದೋಷಗಳನ್ನೂ ಸರಿಪಡಿಸಲಾಗಿದೆ ಎಂದು ತಿಳಿಸಿದರು.