ಮೇ 17, 18ಕ್ಕೆ ನಿಖಿಲ್‌ ಕುಮಾರಸ್ವಾಮಿ ಮದುವೆ!

By Kannadaprabha News  |  First Published Jan 27, 2020, 7:53 AM IST

ಮೇ 17, 18ಕ್ಕೆ ನಿಖಿಲ್‌ ಮದುವೆ| ಕಾಂಗ್ರೆಸ್‌ ಶಾಸಕ ಕೃಷ್ಣಪ್ಪ ಅಣ್ಣನ ಮೊಮ್ಮಗಳ ಜೊತೆ ವಿವಾಹ| ಎಂಸಿಎ ಪದವೀಧರೆ ರೇವತಿಯನ್ನು ವರಿಸಲಿರುವ ಎಚ್ಡಿಕೆ ಪುತ್ರ


ಬೆಂಗಳೂರು[ಜ.27]: ಸ್ಯಾಂಡಲ್‌ವುಡ್‌ ನಾಯಕ ನಟ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿಗೆ ಕಂಕಣಭಾಗ್ಯ ಕೂಡಿ ಬಂದಿದ್ದು, ಬರುವ ಮೇ 17 ಮತ್ತು 18ರಂದು ವಿವಾಹಕ್ಕೆ ಮುಹೂರ್ತ ನಿಗದಿಪಡಿಸಲಾಗಿದೆ.

ನಿಖಿಲ್‌ ಕುಮಾರಸ್ವಾಮಿ ಅವರು ವಿಜಯನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಂ.ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳು ರೇವತಿ ಅವರನ್ನು ಬಾಳಸಂಗಾತಿಯಾಗಿ ಸ್ವೀಕರಿಸಲಿದ್ದಾರೆ. ರೇವತಿ ಎಂಸಿಎ ಪದವೀಧರೆಯಾಗಿದ್ದಾರೆ. ಎರಡೂ ಕುಟುಂಬಗಳು ವಿವಾಹದ ಬಗ್ಗೆ ಚರ್ಚೆ ನಡೆಸಿವೆ.

Tap to resize

Latest Videos

undefined

ನಿಖಿಲ್ ಮದುವೆ ಬಗ್ಗೆ ತಡರಾತ್ರಿ HDK ಕೊಟ್ಟ ಬ್ರೇಕಿಂಗ್ ನ್ಯೂಸ್

ವಿವಾಹದ ನಿಶ್ಚಯದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ-ಚನ್ನಮ್ಮ ದಂಪತಿ, ಎಚ್‌.ಡಿ.ಕುಮಾರಸ್ವಾಮಿ-ಅನಿತಾ ಕುಮಾರಸ್ವಾಮಿ ದಂಪತಿ, ನಿಖಿಲ್‌, ದೇವೇಗೌಡ ಪುತ್ರಿಯರಾದ ಅನಸೂಯ, ಶೈಲಜಾ ಸೇರಿದಂತೆ ಕುಟುಂಬದ ಸದಸ್ಯರು ಭಾನುವಾರ ಬೆಂಗಳೂರಿನ ಮಲ್ಲತ್ತಹಳ್ಳಿಯ ವಧುವಿನ ಮನೆಗೆ ಭೇಟಿ ನೀಡಿ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ಹಿಂದೆ ನಿಖಿಲ್‌ ತಾವು ನಾಯಕ ನಟನಾಗಿ ಅಭಿನಯಿಸಿದ್ದ ‘ಸೀತಾರಾಮ ಕಲ್ಯಾಣ’ ಸಿನಿಮಾದ ನಟಿ ರಚಿತಾ ರಾಮ್‌ ಅವರನ್ನು ವರಿಸಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುಚರ್ಚೆಗಳು ನಡೆದಿದ್ದವು. ಈ ಸುದ್ದಿಯನ್ನು ನಿಖಿಲ್‌ ಮತ್ತು ರಚಿತಾ ರಾಮ್‌ ಇಬ್ಬರೂ ತಳ್ಳಿ ಹಾಕಿದ್ದರು. ಕುಟುಂಬದ ಹಿರಿಯರು ನೋಡಿ ಗೊತ್ತುಮಾಡುವ ಹುಡುಗಿಯನ್ನೇ ವಿವಾಹವಾಗಿರುವುದಾಗಿ ಹಲವು ಬಾರಿ ಹೇಳಿದ್ದರು. ಇತ್ತೀಚೆಗಷ್ಟೇ ತಮ್ಮ ಅಭಿಮಾನಗಳಿಗೆ ವಿವಾಹದ ಬಗ್ಗೆ ಸಿಹಿ ಸುದ್ದಿ ನೀಡುವುದಾಗಿ ನಿಖಿಲ್‌ ಹೇಳಿದ್ದರು.

ಕಾಂಗ್ರೆಸ್ ನಾಯಕನ ಸಂಬಂಧಿ ಜೊತೆ ನಿಖಿಲ್ ಕುಮಾರಸ್ವಾಮಿ ಮದುವೆ ನಿಶ್ಚಯ?

ಜನವರಿ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!