* ಕೆಲವರು ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು
* ಗರ್ಭಿಣಿಯರು ಲಸಿಕೆ ಪಡೆಯುವುದರಿಂದ ಮಗುವಿನ ಮೇಲೆ ಅಡ್ಡ ಪರಿಣಾಮ ಆಗೋದಿಲ್ಲ
* ಎಲ್ಲರೂ ಕಡ್ಡಾಯವಾಗಿ ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು
ಬೆಂಗಳೂರು(ಜು.11): ಕೊರೋನಾ ಲಸಿಕೆಯ ಎರಡನೇ ಡೋಸ್ ಪಡೆಯದಿದ್ದರೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದಿಲ್ಲ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಎರಡನೇ ಡೋಸ್ ಹಾಕಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಹಾಗೂ ಕೊರೋನಾ ಲಸಿಕೆ ವಿಭಾಗದ ರಾಜ್ಯ ಮುಖ್ಯಸ್ಥೆ ಡಾ. ಅರುಂಧತಿ ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಕೆಲವರು ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಕುರಿತು ಸ್ಪಷ್ಟನೆ ನೀಡಿರುವ ಅವರು, ಮೊದಲ ಡೋಸ್ ಲಸಿಕೆ ಪಡೆದವರು 4 ವಾರಗಳ ಬಳಿಕ ಹಾಗೂ ಲಸಿಕೆ ಪಡೆದವರು 12 ವಾರಗಳ ಬಳಿಕ ಎರಡನೇ ಡೋಸ್ ಹಾಕಿಸಿಕೊಳ್ಳಬೇಕು. ಮೊದಲ ಡೋಸ್ ಪಡೆದ ಬಳಿಕ ಸೋಂಕಿತರಾಗಿದ್ದಲ್ಲಿ ಚೇತರಿಸಿಕೊಂಡ ಮೂರು ತಿಂಗಳ ಬಳಿಕ ಎರಡನೇ ಡೋಸ್ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
17 ದಿನದಲ್ಲಿ ಅರ್ಧ ಕೋಟಿ ಜನರಿಗೆ ಲಸಿಕೆ: ಸಚಿವ ಸುಧಾಕರ್
ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು ಲಸಿಕೆ ಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಗರ್ಭಿಣಿಯರು ಲಸಿಕೆ ಪಡೆಯುವುದರಿಂದ ಮಗುವಿನ ಮೇಲೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ ಎಂದೂ ತಿಳಿಸಿದ್ದಾರೆ.