ಬ್ರಿಗೇಡ್ ರೋಡ್ ಗೆ ಹೊಸ ವರ್ಷ ಸಂಭ್ರಮಾಚರಣೆಗೆ ಹೋಗುವ  ಕಪಲ್ಸ್ ಗಳಿಗೆ  ಸಿಹಿ ಸುದ್ದಿ; ಪ್ರತ್ಯೇಕ ಜಾಗ ವ್ಯವಸ್ಥೆ!

By Ravi Janekal  |  First Published Dec 15, 2023, 10:17 AM IST

ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆ ಕೇಂದ್ರ ವಿಭಾಗ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ನಗರದ ಎಲ್ಲಾ ವಿಭಾಗಗಳಲ್ಲಿ ಅಗತ್ಯ ಭದ್ರತಾ ಕ್ರಮಕ್ಕೆ ಪೊಲೀಸರಿಂದ ಸಿದ್ಧತೆ ನಡೆದಿದೆ. ಕಳೆದ ವರ್ಷ ಸಂಭ್ರಮಾಚರಣೆ ವೇಳೆ ಗಲಾಟೆಯಾಗಿತ್ತು. ಈ ಬಾರಿ ಯಾವುದೇ ಅಹಿತರ ನಡೆಯದಂತೆ ಮುಂಜಾಗ್ರತೆ ಕ್ರಮ ಕೈಗೊಂಡಿರುವ ಪೊಲೀಸರು.


ಬೆಂಗಳೂರು (ಡಿ.15): ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆ ಕೇಂದ್ರ ವಿಭಾಗ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ನಗರದ ಎಲ್ಲಾ ವಿಭಾಗಗಳಲ್ಲಿ ಅಗತ್ಯ ಭದ್ರತಾ ಕ್ರಮಕ್ಕೆ ಪೊಲೀಸರಿಂದ ಸಿದ್ಧತೆ ನಡೆದಿದೆ. ಕಳೆದ ವರ್ಷ ಸಂಭ್ರಮಾಚರಣೆ ವೇಳೆ ಗಲಾಟೆಯಾಗಿತ್ತು. ಈ ಬಾರಿ ಯಾವುದೇ ಅಹಿತರ ನಡೆಯದಂತೆ ಮುಂಜಾಗ್ರತೆ ಕ್ರಮ ಕೈಗೊಂಡಿರುವ ಪೊಲೀಸರು.

ಕಳೆದ ಬ್ರಿಗೇಡ್ ರಸ್ತೆಯಲ್ಲಿ ಕಪಲ್ಸ್‌ಗೆ ಸಮಸ್ಯೆಯಾಗಿತ್ತು. ಯುವಕ ಯುವತಿಯರ ಮೇಲೆ ಹಲ್ಲೆಯಾಗಿತ್ತು. ಈ ಬಾರಿ ಕಪಲ್ಸ್ ಗೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿರುವ ಪೊಲೀಸರು. ಈ ಬಾರಿ ಹೊಸ ವರ್ಷಕ್ಕೆ ಬೆಂಗಳೂರಿನ ಬ್ರಿಗೇಡ್ ರೋಡ್ ನಲ್ಲಿ  ಕಪಲ್ಸ್ ಗಳಿಗೆ  ಪ್ರತ್ಯೇಕವಾದ ಮಾರ್ಗ.  ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿ ಭದ್ರತೆ ವ್ಯವಸ್ಥೆ ನೀಡಲಾಗುತ್ತಿದೆ. ಕಪಲ್ಸ್ ಇರೋ ಕಡೆ ಬೇರೆ ಯಾರಿಗೂ ನಿಲ್ಲಲ್ಲೂ ಅವಕಾಶ ಕೊಡುವುದಿಲ್ಲ. ಬ್ಯಾರಿಕೇಡ್ ಹಾಕಿ ಪ್ರತ್ಯೇಕವಾದ ವ್ಯವಸ್ಥೆಯನ್ನ ಮಾಡಲು ಸಿದ್ಧತೆ;

Tap to resize

Latest Videos

ಹೊಸ ವರ್ಷದಲ್ಲಿ ಈ 5 ವಸ್ತುಗಳನ್ನು ಮನೆಗೆ ತನ್ನಿ, ನಿಮ್ಮ ಅದೃಷ್ಟ ಬದಲಾಗುತ್ತದೆ

ಕಳೆದ ವರ್ಷ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕೆಲ ಪುಂಡರು ಜನರ ಗುಂಪಿನಲ್ಲಿ ಯುವತಿಯರೊಟ್ಟಿಗೆ ಅಸಭ್ಯವಾಗಿ ವರ್ತಿಸಿದ್ದರು. ಅಲ್ಲಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳಿಗೆ ಕಾರಣವಾಗಿತ್ತು. ಹೀಗಾಗಿ ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆಗೆ ಬರುವಂತ ಕಪಲ್ಸ್ ಗಳಿಗೆ ಅಂತ ಪ್ರತ್ಯೇಕ ಮಾರ್ಗ, ಜಾಗದ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. 

ಹೊಸ ವರ್ಷದ ಪಾರ್ಟಿ ಜೋರಾ? ಮನೆಯಲ್ಲೆಷ್ಟು ಮದ್ಯ ಇಟ್ಟುಕೊಳ್ಳಬಹುದು?

click me!