ರಮೇಶ್ ಜಾರಕಿಹೊಳಿ ರಾಸಲೀಲೆ ಕೇಸ್ : ಹೊಸ ಟ್ವಿಸ್ಟ್

By Kannadaprabha NewsFirst Published Mar 3, 2021, 8:13 AM IST
Highlights

ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಿಡುಗಡೆ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಹೊಸ ಅನುಮಾನಗಳು ಮೂಡುತ್ತಿದೆ.? 

ಬೆಂಗಳೂರು (ಮಾ.03):  ಜಲಸಂಪನ್ಮೂಲ ಸಚಿವರ ವಿರುದ್ಧ ಕೇಳಿಬಂದಿರುವ ಲೈಂಗಿಕ ವಿವಾದ ಸಂಬಂಧ ಪೊಲೀಸರಿಗೆ ಸಂತ್ರಸ್ತೆಯ ಬದಲಿಗೆ 3ನೇ ವ್ಯಕ್ತಿಯಾಗಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಎಂಬುವರು ನೀಡಿರುವ ದೂರಿಗೆ ಕಾನೂನಾತ್ಮಕವಾಗಿ ಮಾನ್ಯತೆ ಸಿಗಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ಕಾನೂನು ಪ್ರಕಾರ ಲೈಂಗಿಕ ಕಿರುಕುಳ ಸಂಬಂಧ ದೌರ್ಜನ್ಯಕ್ಕೊಳಗಾದ ಯುವತಿ ದೂರು ನೀಡಿದರೆ ಹೆಚ್ಚಿನ ಮಹತ್ವವಿರುತ್ತದೆ. ಸಂತ್ರಸ್ತೆಯ ಹೊರತುಪಡಿಸಿ ಅನ್ಯರು ದೂರು ನೀಡಿದರೆ ಹೆಚ್ಚಿನ ಪ್ರಾಮುಖ್ಯತೆ ಇರುವುದಿಲ್ಲ. ಅಲ್ಲದೆ, ಪೊಲೀಸರಿಗೆ 3ನೇ ವ್ಯಕ್ತಿ ದೂರು ಸಲ್ಲಿಸಿದರೂ ಕೂಡಾ ಮತ್ತೆ ದೌರ್ಜನ್ಯಕ್ಕೊಳಗಾದ ಯುವತಿಯ ಹೇಳಿಕೆ ಪಡೆಯಬೇಕಾಗುತ್ತದೆ. ಆಗ ಆರೋಪಕ್ಕೆ ಪೂರಕವಾಗಿ ಯುವತಿ ಹೇಳಿಕೆ ಕೊಟ್ಟರೆ ಪ್ರಕರಣಕ್ಕೆ ಮಾನ್ಯತೆ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಹನಿಟ್ರ್ಯಾಪ್‌ ಬಲೆಗೆ ಬಿದ್ದರೇ ಮಂತ್ರಿ?

ಹಣದಾಸೆಗೆ ಯುವತಿಯನ್ನು ಮುಂದಿಟ್ಟು ಜಲ ಸಂಪನ್ಮೂಲ ಸಚಿವರನ್ನು ಕೆಲವರು ತಮ್ಮ ಹನಿಟ್ರ್ಯಾಪ್‌ ಬಲೆಗೆ ಬೀಳಿಸಿದ್ದಾರೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಬಿಜೆಪಿ ಮುಖಂಡರಿಂದಲೇ ಜಾರಕಿಹೊಳಿ ರಾಜೀನಾಮೆಗೆ ತೀವ್ರ ಒತ್ತಡ? ...

ಡಾಕ್ಯುಮೆಂಟರಿ ನಿರ್ಮಾಣದ ನೆಪದಲ್ಲಿ ಸಚಿವರನ್ನು ಭೇಟಿಯಾದ ಯುವತಿ, ಬಳಿಕ ಸಚಿವರೊಂದಿಗೆ ಆಪ್ತತೆ ಬೆಳೆಸಿದ್ದಾಳೆ. ಬಳಿಕ ಸಚಿವರೊಂದಿಗೆ ಖಾಸಗಿ ಕ್ಷಣಗಳನ್ನು ಕಳೆದಿದ್ದಾಳೆ. ಆಕೆಯೊಂದಿಗೆ ಮುಕ್ತವಾಗಿ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯನ್ನು ಸಚಿವರು ವ್ಯಕ್ತಪಡಿಸಿದ್ದಾರೆ. ಇದೆಲ್ಲವೂ ಚಿತ್ರೀಕರಣವಾಗಿದೆ. ಈ ಹಿನ್ನೆಲೆಯಲ್ಲಿ ಇದು ಹನಿಟ್ರ್ಯಾಪ್‌ ಪ್ರಕರಣವೇ ಎಂಬ ಅನುಮಾನ ಕೂಡ ಮೂಡಿದೆ.

click me!