ಧರ್ಮಸ್ಥಳ ಕೇಸಲ್ಲಿ ಭಾರೀ ಟ್ವಿಸ್ಟ್: ಬೋಳಿಯಾರ್ ಕಾಡಲ್ಲಿ ಶಾಲಾ ಬಾಲಕಿ ಶವ ತೋರಿಸಿದನಾ ಅನಾಮಿಕ!

Published : Aug 08, 2025, 03:03 PM IST
Dharmasthala Case

ಸಾರಾಂಶ

ಧರ್ಮಸ್ಥಳ ಸೌಜನ್ಯ ಪ್ರಕರಣದ ತನಿಖೆಯಲ್ಲಿ ಹೊಸ ತಿರುವು ಪಡೆದುಕೊಂಡಿದ್ದು, ಅನಾಮಿಕ ದೂರುದಾರ ಬೋಳಿಯಾರ್‌ನಲ್ಲಿ ಶಾಲಾ ಬಾಲಕಿಯ ಶವ ಹೂತಿರುವ ಸ್ಥಳವನ್ನು ಗುರುತಿಸಿದ್ದಾನೆ ಎನ್ನಲಾಗಿದೆ. ಈ ಘಟನೆಯು ಪ್ರಕರಣಕ್ಕೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.

ದಕ್ಷಿಣ ಕನ್ನಡ (ಆ.08): ಧರ್ಮಸ್ಥಳ ಸೌಜನ್ಯ ಪ್ರಕರಣದ ತನಿಖೆ ಹೊಸ ತಿರುವು ಪಡೆದುಕೊಂಡಿದ್ದು, ಸರಣಿ ಕೊಲೆಗಳ ಬಗ್ಗೆ ದೂರು ನೀಡಿದ್ದ ಅನಾಮಿಕ ದೂರುದಾರನೊಬ್ಬ ಬೋಳಿಯಾರ್‌ನಲ್ಲಿ ಶಾಲಾ ಬಾಲಕಿಯೊಬ್ಬಳ ಶವ ಹೂತುಹಾಕಿದ್ದ ಜಾಗವನ್ನು ಗುರುತಿಸಿದ್ದಾನೆ ಎನ್ನಲಾಗಿದೆ. ಈ ಘಟನೆಯು ಪ್ರಕರಣದ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸಿದೆ.

ಜುಲೈ 11ರಂದು ನ್ಯಾಯಾಲಯಕ್ಕೆ ಒಪ್ಪಿಸಲಾದ ಬುರುಡೆಯ ಬಗ್ಗೆ ಮಾಹಿತಿ ನೀಡಿರುವ ಅನಾಮಿಕ ದೂರುದಾರ, ಬೆಳ್ತಂಗಡಿ ಸಮೀಪದ ಬೋಳಿಯಾರ್‌ ಕಾಡಿನೊಳಗೆ ಎಸ್ಐಟಿ ತಂಡದೊಂದಿಗೆ ತೆರಳಿದ್ದಾನೆ. ಕಲ್ಲೇರಿ ಪೆಟ್ರೋಲ್ ಪಂಪ್‌ನಿಂದ 500 ಮೀಟರ್ ದೂರದಲ್ಲಿ ಶಾಲಾ ಬಾಲಕಿಯೊಬ್ಬಳ ಶವವನ್ನು ಹೂತುಹಾಕಲಾಗಿತ್ತು ಎಂದು ದೂರುದಾರ ಈ ಹಿಂದೆ ಹೇಳಿಕೆ ನೀಡಿದ್ದ. ಆದರೆ, ಈಗ ಅವನು ಗುರುತಿಸಿದ ಜಾಗ ಪೆಟ್ರೋಲ್ ಪಂಪ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ.

ಶಾಲಾ ಬಾಲಕಿಯ ಕೊಲೆ ಆರೋಪದ ಬಗ್ಗೆ ದೂರುದಾರನ ಮಾಹಿತಿ:

ದೂರುದಾರನು 2010ರಲ್ಲಿ ನಡೆದ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ನೀಡಿದ ದೂರು ವಿಲಕ್ಷಣವಾಗಿದೆ. ಆತ ಹೇಳುವ ಪ್ರಕಾರ, '2010ರಲ್ಲಿ ಕಲ್ಲೇರಿಯಲ್ಲಿರುವ ಪೆಟ್ರೋಲ್ ಬಂಕ್‌ನಿಂದ ಸುಮಾರು 500 ಮೀಟರ್ ದೂರದಲ್ಲಿರುವ ಸ್ಥಳಕ್ಕೆ ನನ್ನನ್ನು ಮೇಲ್ವಿಚಾರಕರು ಕಳುಹಿಸಿದರು. ಅಲ್ಲಿ ನಾನು ಹದಿಹರೆಯದ ಹುಡುಗಿಯ ದೇಹವನ್ನು ಕಂಡೆನು. ಅವಳ ವಯಸ್ಸು ಅಂದಾಜು 12 ರಿಂದ 15 ವರ್ಷಗಳ ನಡುವೆ ಇರಬಹುದು. ಅವಳು ಶಾಲಾ ಸಮವಸ್ತ್ರದ ಶರ್ಟ್ ಧರಿಸಿದ್ದಳು, ಆದರೆ ಲಂಗ ಮತ್ತು ಒಳಉಡುಪುಗಳು ಇರಲಿಲ್ಲ. ಅವಳ ದೇಹದ ಮೇಲೆ ಲೈಂಗಿಕ ಆಕ್ರಮಣದ ಸ್ಪಷ್ಟ ಲಕ್ಷಣಗಳಿದ್ದವು ಮತ್ತು ಕತ್ತು ಹಿಸುಕಿರುವ ಗುರುತುಗಳಿದ್ದವು. ನನಗೆ ಗುಂಡಿ ಅಗೆದು ಅವಳನ್ನು ಮತ್ತು ಅವಳ ಶಾಲಾ ಬ್ಯಾಗ್‌ ಅನ್ನು ಹೂಳಲು ನಿರ್ದೇಶಿಸಲಾಗಿತ್ತು. ಆ ಸನ್ನಿವೇಶವು ನನಗೆ ಇಂದಿಗೂ ಮಾಸಿಲ್ಲ.

ಈಗ ಇದೇ ಜಾಗದಲ್ಲಿ ಉತ್ಖನನ ನಡೆಸುವ ಬಗ್ಗೆ ಎಸ್ಐಟಿ ತಂಡವು ಯೋಜಿಸಿದೆ. ಅನಾಮಿಕ ದೂರುದಾರನು ಶವ ಹೂತಿದ್ದ ಜಾಗವನ್ನೇ ತೋರಿಸಿದ್ದಾನೋ ಅಥವಾ ಈ ಹಿಂದೆ ನ್ಯಾಯಾಲಯಕ್ಕೆ ಒಪ್ಪಿಸಲಾದ ಬುರುಡೆಯನ್ನು ಅಗೆದು ತಂದ ಜಾಗವನ್ನೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪದ್ಮಲತಾ ಪ್ರಕರಣದ ಪ್ರಸ್ತಾಪ:

ಇದೇ ಸಂದರ್ಭದಲ್ಲಿ, 1986ರಲ್ಲಿ ಕೊಲೆಯಾದ ಪದ್ಮಲತಾ ಪ್ರಕರಣದ ಪ್ರಸ್ತಾಪವೂ ಬಂದಿದೆ. ಆಕೆಯ ಮನೆ ಸಮೀಪವೇ 'ಪಾಯಿಂಟ್ ನಂ 15' ಎಂದು ಗುರುತಿಸಲಾದ ಸ್ಥಳವಿದ್ದು, ಪದ್ಮಲತಾ ಅವರ ಸಂಬಂಧಿ ಮತ್ತು ಎರಡನೇ ದೂರುದಾರರಾದ ಜಯಂತ್ ಟಿ. ಅವರು ಈ ಬಗ್ಗೆ ಎಸ್ಐಟಿ ತಂಡಕ್ಕೆ ದೂರು ನೀಡಿದ್ದರು. ಆದರೆ, ಪದ್ಮಲತಾ ಮೃತದೇಹ ನದಿಯಲ್ಲಿ ಪತ್ತೆಯಾಗಿತ್ತು ಎಂಬುದು ಗಮನಾರ್ಹ.

ಅನಾಮಿಕ ದೂರುದಾರನು ಬಹಳ ನಿಖರವಾಗಿ ಬೋಳಿಯಾರ್ ಕಾಡಿಗೆ ತೆರಳಿದ್ದು, ಬುರುಡೆ ಅವಶೇಷಗಳ ಸ್ಥಳವನ್ನೋ ಅಥವಾ ಶಾಲಾ ಬಾಲಕಿಯ ಮೃತದೇಹದ ಸ್ಥಳವನ್ನೋ ತೋರಿಸಿದ್ದಾನೋ ಎಂಬುದು ಮತ್ತಷ್ಟು ನಿಗೂಢವಾಗಿಯೇ ಉಳಿದಿದೆ. ಸತ್ಯ ಹೊರಬರಲು ಎಸ್ಐಟಿ ತಂಡದ ಮುಂದಿನ ಕ್ರಮಗಳು ನಿರ್ಣಾಯಕವಾಗಿವೆ. ಭಾರೀ ಭದ್ರತೆಯೊಂದಿಗೆ ಉಪ್ಲು ಮತ್ತು ಎವಿಡೆನ್ಸ್ ಬಾಕ್ಸ್ ಜೊತೆಗೆ ತೆರಳಿರುವ ಎಸ್ಐಟಿ ತಂಡ, ಶೀಘ್ರದಲ್ಲೇ ಈ ನಿಗೂಢವನ್ನು ಭೇದಿಸುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೊಸ ವರ್ಷಕ್ಕೆ ಎಲೆಕ್ಟ್ರಾನಿಕ್ ಸಿಟಿ ಹೈ ಅಲರ್ಟ್; ಮಹಿಳೆಯರ ಸುರಕ್ಷತೆಗೆ 'ರಾಣಿ ಚೆನ್ನಮ್ಮ ಪಡೆ ಸಜ್ಜು, ಪಬ್-ಬಾರ್‌ಗಳಿಗೆ ಪೊಲೀಸರ ಬಿಗಿ ರೂಲ್ಸ್!
ಡಿ.25ಕ್ಕೆ ಸಾಲು ಸಾಲು ದುರಂತ, ಲಾರಿ ಬೈಕ್ ಭೀಕರ ಅಪಘಾತದಲ್ಲಿ ನಾಲ್ವರು ಸಾವು