ಏಪ್ರಿಲ್ 30 ರಿಂದ ರಾಜ್ಯದಲ್ಲಿ 100 ರು.ಗೆ ಒಂದು ಟನ್ ಮರಳು

By Kannadaprabha NewsFirst Published Apr 11, 2021, 11:47 AM IST
Highlights

ಭಾರೀ ಪ್ರಮಾಣದಲ್ಲಿ ಮರಳು ದಂಧೆ ನಡೆಯುತ್ತಿದ್ದು ಇದಕ್ಕೆಲ್ಲಾ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯಲದಲ್ಲಿ ಏಪ್ರಿಲ್ 30 ರೊಳಗೆ ಹೊಸ ಮರಳು ನೀತಿ ಜಾರಿ ಮಾಡಲಾಗುತ್ತದೆ. ಈ ಬಗ್ಗೆ ಸಚಿವ ಮುರುಗೇಶ್ ನಿರಾಣಿ ಮಾಹಿತಿ ನೀಡಿದ್ದಾರೆ. 

ಕಲಬರುಗಿ (ಏ.11): ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮರಳು ದಂಧೆ ನಡೆಯುತ್ತಿದ್ದು ಇದಕ್ಕೆಲ್ಲಾ ಕಡಿವಾಣ ಹಾಕುವ ನಿಟ್ಟಿನಲ್ಲಿ ಏಪ್ರಿಲ್ 30 ರೊಳಗೆ ಹೊಸ ಮರಳು ನೀತಿ ಜಾರಿ ಮಾಡಲಾಗುತ್ತಿದೆ. 

ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿ ಮಾಡುತ್ತಿರುವುದಾಗಿ ಕಲಬುರಗಿಯಲ್ಲಿಂದು ಗಣಿ ಸಚಿವ ಮುರಗೇಶ ನಿರಾಣಿ ತಿಳಿಸಿದ್ದಾರೆ. 

ಈ ಮರಳು ಪೂರೈಕೆ ಮಾಡುವವರಿಗೆ ಸಚಿವ ನಿರಾಣಿ ಖಡಕ್ ಎಚ್ಚರಿಕೆ ..

ಫ್ರೀ ಸ್ಯಾಂಡ್ ಪಾಲಿಸಿ ಇದೇ 30 ರಿಂದ ರಾಜ್ಯಾದ್ಯಂತ ಜಾರಿ ಮಾಡಲಾಗುತ್ತದೆ.   10 ಲಕ್ಷ ರು. ಒಳಗಿನ ಮನೆ ನಿರ್ಮಾಣಕ್ಕೆ 100 ರೂಪಾಯಿಗೆ ಒಂದು ಟನ್ ಮರಳು ನೀಡಲಾಗುತ್ತದೆ.

ರಾಜ್ಯಲದಲ್ಲಿ ನಡೆಯುತ್ತಿರುವ  ಮರಳು ಅಕ್ರಮ ತಡೆಗಟ್ಟುವ ಉದ್ದೇಶದಿಂದ ನೂತನ ಮರಳು ನೀತಿ ಜಾರಿ ಮಾಡಲಾಗುತ್ತದೆ ಎಂದು ಸಚಿವ ಮುರಗೇಶ ನಿರಾಣಿ ತಿಳಿಸಿದರು.

click me!