ಗೃಹ ಜ್ಯೋತಿಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್: ನೋಂದಣಿಯಲ್ಲಿ ಹೊಸ ಮೈಲಿಗಲ್ಲು..!

Published : Jun 25, 2023, 08:42 PM IST
ಗೃಹ ಜ್ಯೋತಿಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್: ನೋಂದಣಿಯಲ್ಲಿ ಹೊಸ ಮೈಲಿಗಲ್ಲು..!

ಸಾರಾಂಶ

ಸರ್ವರ್ ಸಮಸ್ಯೆಗೆ ಹೊಸ ಲಿಂಕ್ ಬಿಡುಗಡೆಗೊಳಿಸಲಾಗಿತ್ತು.  ಸಾಕಷ್ಟು ಸರ್ಕಸ್ ನಡೆಸಿದ ಬಳಿಕ ಸರ್ಕಾರ ನಿಗದಿತ ಪ್ರಮಾಣದಲ್ಲಿ ನೋಂದಣಿ ಯೋಜನೆಯ ಟಾರ್ಗೆಟ್ ರೀಚ್ ಆಗಿತ್ತು. ಇದೀಗ ಒಂದೇ ವಾರದಲ್ಲಿ 50 ಲಕ್ಷಕ್ಕೂ ಅಧಿಕ ನೋಂದಣಿ ಮೂಲಕ ಹೊಸ ಮೈಲಿಗಲ್ಲು ತಲುಪಿದೆ.  

ಸ್ವಸ್ತಿಕ್ ಕನ್ಯಾಡಿ
ಬೆಂಗಳೂರು(ಜೂ.25):
 ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹ ಜ್ಯೋತಿಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು, ಯೋಜನೆ ಆರಂಭಗೊಂಡ ಒಂದೇ ವಾರದಲ್ಲಿ ಹೊಸ ಮೈಲಿಗಲ್ಲು ತಲುಪಿದೆ. ಗೃಹ ಜ್ಯೋತಿ ಯೋಜನೆ ಆರಂಭಗೊಂಡ ಮೊದಲೆರಡು ದಿನ ಸರ್ವರ್ ಸಮಸ್ಯೆಯಿಂದಾಗಿ ನೋಂದಣಿ ಪ್ರಕ್ರಿಯೆ ವಿಳಂಬವಾಗಿತ್ತು. ಸಾಕಷ್ಟು ನೋಂದಣಿ ಕೇಂದ್ರಗಳಲ್ಲಿ ಜನ ಕ್ಯೂ ನಿಂತಿದ್ದು ಸರ್ವೇ ಸಾಮಾನ್ಯವಾಗಿತ್ತು. ಆದರೆ ಆ ಬಳಿಕ ಸರ್ವರ್ ಸಮಸ್ಯೆಗೆ ಹೊಸ ಲಿಂಕ್ ಬಿಡುಗಡೆಗೊಳಿಸಲಾಗಿತ್ತು.  ಸಾಕಷ್ಟು ಸರ್ಕಸ್ ನಡೆಸಿದ ಬಳಿಕ ಸರ್ಕಾರ ನಿಗದಿತ ಪ್ರಮಾಣದಲ್ಲಿ ನೋಂದಣಿ ಯೋಜನೆಯ ಟಾರ್ಗೆಟ್ ರೀಚ್ ಆಗಿತ್ತು. ಇದೀಗ ಒಂದೇ ವಾರದಲ್ಲಿ 50 ಲಕ್ಷಕ್ಕೂ ಅಧಿಕ ನೋಂದಣಿ ಮೂಲಕ ಹೊಸ ಮೈಲಿಗಲ್ಲು ತಲುಪಿದೆ.

ದಿನಾಂಕ 25.06.2023ರ ಭಾನುವಾರ ಸಂಜೆ 6 ಗಂಟೆಯವರೆಗೆ 51,17,693 ಗ್ರಾಹಕರು ನೋಂದಾಯಿಸಿಕೊಂಡಿದ್ದು ಗೃಹಜ್ಯೋತಿ ಯೋಜನೆಗೆ ರಾಜ್ಯಾದ್ಯಂತ ಉತ್ತಮ ರೆಸ್ಪಾನ್ಸ್ ದೊರೆತಿದ್ದನ್ನು ಸಾರಿ ಹೇಳಿದೆ. ನೋಂದಣಿ ವಿಧಾನವನ್ನು ಅತ್ಯಂತ ಸುಲಭಗೊಳಿಸಿರುವುದರಿಂದ, ಗ್ರಾಹಕರು ಅತ್ಯಂತ ಉತ್ಸುಕತೆಯನ್ನು ತೋರುತ್ತಿದ್ದು, ಪ್ರತಿದಿನವೂ ಲಕ್ಷದೋಪಾದಿಯಲ್ಲಿ ನೋಂದಣಿಯ ಪ್ರಮಾಣ ಹೆಚ್ಚುತ್ತಿದೆ.

ಗೃಹ ಜ್ಯೋತಿಗೆ 20 ಲಕ್ಷಕ್ಕೂ ಹೆಚ್ಚು ಗ್ರಾಹಕರ ಅರ್ಜಿ ಸಲ್ಲಿಕೆ: ನಿನ್ನೆ ಒಂದೇ ದಿನ 5 ಲಕ್ಷಕ್ಕೂ ನೋಂದಣಿ

ಗೃಹ ಜ್ಯೋತಿ ಯೋಜನೆಗೆ ಯಾವುದೇ ವಿದ್ಯುತ್ ಕಛೇರಿ, ನಾಡಕಛೇರಿ ಹಾಗೂ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನ್ ನಲ್ಲಿ ಅಧಿಕೃತ ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಸಂಪೂರ್ಣ ಉಚಿತವಾಗಿದ್ದು, ಗ್ರಾಹಕರು ಮೇಲ್ಕಂಡ ವೆಬ್’ಸೈಟ್ ಹೊರತುಪಡಿಸಿ, ನೋಂದಣಿಗೆ ಯಾವುದೇ ಖಾಸಗಿ/ನಕಲಿ ವೆಬ್’ಸೈಟ್ ಬಳಸದೇ ಇರುವುದು ಸೂಕ್ತ. ಇದಲ್ಲದೇ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಪಂಚಾಯಿತಿ ಕಛೇರಿಗಳಲ್ಲಿ ನೋಂದಣಿಗೆ ನಿಗದಿತ ಸೇವಾ ಶುಲ್ಕವನ್ನಷ್ಟೇ ಪಾವತಿಸಿ ನೋಂದಾಯಿಸಿಕೊಳ್ಳಬಹುದು. ಹೆಚ್ಚುವರಿ ಹಣಕ್ಕೆ ಯಾರಾದರೂ ಬೇಡಿಕೆಯಿಟ್ಟಲ್ಲಿ, ಗ್ರಾಹಕರು ಕೂಡಲೇ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ ತಿಳಿಸಬಹುದು. ಅಂತಹ ಪ್ರಯತ್ನಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇ - ಆಡಳಿತ ಇಲಾಖೆ ಪ್ರತ್ಯೇಕ ನೋಂದಣಿ ಲಿಂಕ್ ಅನ್ನು ರಾಜ್ಯದ 2,000 ವಿದ್ಯುತ್ ಕಚೇರಿಗಳಿಗೆ ನೀಡಿದ ನಂತರ ನೋಂದಣಿ ಪ್ರಕ್ರಿಯೆಗೆ ವೇಗ ದೊರೆತಿದೆ. ಗೃಹ ಜ್ಯೋತಿ ಯೋಜನೆಗೆ ನೋಂದಣಿ ಆರಂಭವಾದಾಗಿನಿಂದ ಪ್ರತಿದಿನದ

ಎಸ್ಕಾಂವಾರು ನೋಂದಣಿಯ ವಿವರ ಇಲ್ಲಿದೆ.

ಬೆಸ್ಕಾಂ - 20,55,522
CESC - 7,90,894
ಜೆಸ್ಕಾಂ - 5,66,289
ಹೆಸ್ಕಾಂ - 10,82,336
HRECS - 23,670
ಮೆಸ್ಕಾಂ - 5,98,981

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ