
ಬೆಂಗಳೂರು (ನ.2): ನಗರದಲ್ಲಿ ಇತ್ತೀಚೆಗೆ ನಡೆದ ಅತ್ತಿಬೆಲೆ ಪಟಾಕಿ ದುರಂತ, ಸಾಲು ಸಾಲು ಅಗ್ನಿ ಅವಘಡಗಳಿಂದ ಎಚ್ಚೆತ್ತಿರುವ ಬಿಬಿಎಂಪಿ ಈ ಬಾರಿ ಬೆಳಕಿನ ಹಬ್ಬ ದೀಪಾವಳಿಗೆ ಪಟಾಕಿ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಬಿಬಿಎಂಪಿ.
ಈ ಬಾರಿ ದೀಪಾವಳಿಗೆ ಎಲ್ಲೆಂದರಲ್ಲೇ ಮಳಿಗೆ ತೆರೆಯುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ. ಬೆಂಕಿ ಅವಘಡ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ ಆಯುಕ್ತರು.
ಬೆಂಗಳೂರು: ಪಾಲಿಕೆಯಿಂದ ತ್ಯಾಜ್ಯ ವಿಲೇವಾರಿಗೆ ಲ್ಯಾಂಡ್ ಬ್ಯಾಂಕ್
ನಗರದಲ್ಲಿ ದೀಪಾವಳಿಗೆ ಗುರುತಿಸಿರುವ ಜಾಗದಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಮಳಿಗೆ ಓಪನ್ ಮಾಡಲು ಸೂಚಿಸಲಾಗಿದೆ. ಅದರಂತೆ ವಲಯಗಳಲ್ಲಿ ಪಟಾಕಿ ಮಳಿಗೆ ತಯಾರಿಕೆಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನ ಸಹ ಹಾಕಲಾಗಿದೆ. ಇದರ ಜೊತೆಗೆ ವಲಯದಲ್ಲಿ ಕೆಲವು ಮೈದಾನದಲ್ಲಿ ಮಾತ್ರ ಮಳಿಗೆ ತೆರೆಯಲು ಅವಕಾಶ ಕೊಡಬೇಕು, ಎಲ್ಲೆಂದರಲ್ಲೇ, ಜನವಸತಿ ಪ್ರದೇಶಗಳಲ್ಲಿ ಪಟಾಕಿ ಸಿಡಿಸಲು ಅವಕಾಶವಿಲ್ಲ ಆ ಬಗ್ಗೆ ಜಂಟಿ ಆಯುಕ್ತರು ವರದಿ ಸಿದ್ಧಪಡಿಸಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಜಾಗೃತಿ ಕ್ರಮಗಳನ್ನ ಜಾರಿಗೊಳಿಸಿದೆ. ಎಲ್ಲೆಲ್ಲೆ ಪಟಾಕಿ ಮಾರಾಟಕ್ಕೆ ಅನುಮತಿ ಇಲ್ಲ. ಹಾಗಾದರೆ ಪಟಾಕಿ ಮಳಿಗೆ ಎಲ್ಲೆಲ್ಲಿ ತೆರೆಯಬೇಕು, ಮಾರ್ಗಸೂಚಿಗಳೇನು?
ಇಲ್ಲಿ ಅನುಮತಿ ಇಲ್ಲ:
ಇಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ:
ದೀಪಾವಳಿಗೂ ಮೊದಲೇ ವಿಷಮಿಸಿದ ದಿಲ್ಲಿ ವಾಯು ಗುಣಮಟ್ಟ
ಇದೆಲ್ಲ ಮಾರ್ಗಸೂಚಿ ಹೊರತು ಪಟಾಕಿ ಸಿಡಿಸಲು ಸರ್ಕಾರ ಒಂದಿಷ್ಟು ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳಿಗೆ ತೆರೆಯಲು ಸಾಕಷ್ಟು ಮಾರ್ಗಸೂಚಿ ನಿಯಮಗಳನ್ನು ಸೂಚಿಸಿದೆ. ಬೆಳಕಿನ ಹಬ್ಬ ದೀಪಾವಳಿ ಹೊತ್ತಲ್ಲಿ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ ನಿರ್ಧಾರದಿಂದ ಜನರು ಈ ಬಾರಿ ಪಟಾಕಿ ಸಿಡಿಸದೇ ದೀಪಾವಳಿ ಆಚರಿಸಬೇಕಾಗುತ್ತೇನೋ ಅಂತಾ ಬೇಸರಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ