ಅಂಗನವಾಡಿಗಳಿಗೆ ಹೊಸ ಹೊಸ ಹೊಸ ಸೌಕರ್ಯ : ಸಚಿವ ಜೊಲ್ಲೆ

By Kannadaprabha NewsFirst Published Mar 7, 2020, 8:58 AM IST
Highlights

ಅಂಗನವಾಡಿಗಳಿಗೆ ಹೊಸ ಹೊಸ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ವಿಧಾನ ಪರಿಷತ್‌ [ಮಾ.07]:  ರಾಜ್ಯದ ಅಂಗನವಾಡಿಗಳಲ್ಲಿನ ಮಕ್ಕಳ ಕಲಿಕೆ ಇನ್ನಷ್ಟುಉತ್ತಮವಾಗಿರಲು ಹೊಸ ಬಗೆಯ ಆಟಿಕೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆ ಸದಸ್ಯರಾದ ಜಯಮ್ಮ, ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅಂಗನವಾಡಿಗಳಲ್ಲಿ ಈಗಲೂ ಸಹ ಹಳೆಯ ಮಾದರಿಯ ಆಟಿಕೆಗಳನ್ನು ಬಳಸಲಾಗುತ್ತಿದೆ. ಇ-ಲರ್ನಿಂಗ್‌ ಕಾಲದಲ್ಲಿ ಇರುವ ನಾವು ಈಗಲೂ ಹಳೆಯ ಆಟಿಕೆಗಳನ್ನು ಬಳಸುತ್ತಿದ್ದೇವೆ. ಹಾಗಾಗಿ ಮಕ್ಕಳು ಇಷ್ಟಪಡುವ ರೀತಿಯಲ್ಲಿ ಹೊಸ ಬಗೆಯ ಆಟಿಕೆಗಳನ್ನು ನೀಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದರು. ಮಕ್ಕಳು ಆಟದೊಂದಿಗೆ ಕಲಿಯುವಂತಹ ವಾತಾವರಣ ಸೃಷ್ಟಿಸಬೇಕಾಗಿದೆ ಎಂದರು.

ವೋಲ್ವೋಗೆ ಗುಡ್‌ಬೈ: ಟಾಟಾ, ಲೇಲ್ಯಾಂಡ್‌ ಬಸ್‌ ಖರೀದಿಗೆ ಸರ್ಕಾರ ಸಜ್ಜು!...

ರಾಜ್ಯದಲ್ಲಿ 65911 ಅಂಗನವಾಡಿ ಕೇಂದ್ರಗಳಿಂದ್ದು, ಸ್ವಂತ ಕಟ್ಟಡವನ್ನು 44312 ಅಂಗನವಾಡಿಗಳು ಹೊಂದಿವೆ. ಸ್ವಂತ ಕಟ್ಟಡ ಇಲ್ಲದ ಕಡೆ ಬಾಡಿಗೆ ಕಟ್ಟಡ, ಸಮುದಾಯ ಭವನ, ಮಹಿಳಾ ಮಂಡಳ, ಯುವಕ ಮಂಡಲ ಮುಂತಾದ ಸ್ಥಳಗಳಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಬಾಡಿಗೆ ಕಟ್ಟಡಗಳಿಲ್ಲದ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿದ್ದಲ್ಲಿ ಶೌಚಾಲಯ ಇರುವಂತಹ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಜಯಮ್ಮ ಅವರು, ಶೌಚಾಲಯ ನಿರ್ಮಾಣಕ್ಕೆ ಈಗ 20 ಸಾವಿರ ನೀಡುತ್ತಿದ್ದು, ಈ ಮೊತ್ತವನ್ನು 30 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

click me!