ಕುರಿಗಳ ರಕ್ಷಣೆಗಾಗಿ ಬಂದೂಕು ತರಬೇತಿ ನೀಡುವಂತೆ ಜಿಲ್ಲೆಯ ಸಂಚಾರಿ ಕುರಿಗಾಹಿಗಳು ಸಿಎಂ ಸಿದ್ದರಾಮಯ್ಯರ ಬಳಿ ಮನವಿ ಮಾಡಿದ್ದಾರೆ.
ರಾಯಚೂರು (ಜೂ.30) ಕುರಿಗಳ ರಕ್ಷಣೆಗಾಗಿ ಬಂದೂಕು ತರಬೇತಿ ನೀಡುವಂತೆ ಜಿಲ್ಲೆಯ ಸಂಚಾರಿ ಕುರಿಗಾಹಿಗಳು ಸಿಎಂ ಸಿದ್ದರಾಮಯ್ಯರ ಬಳಿ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಸಂಚಾರಿ ಕುರಿಗಾಹಿಗಳು ನಿತ್ಯ ಜೀವ ಭಯದಲ್ಲಿ ಓಡಾಟ ಮಾಡುತ್ತಿದ್ದು, ಒಂದು ಕಡೆ ನರಿ ತೋಳಗಳ ಕಾಟ ,ಇನ್ನೊಂದು ಕಡೆ ರಾತ್ರಿವೇಳೆ ಕುರಿಗಳ ಕದ್ದೊಯ್ಯುವ ಕಳ್ಳರು. ಜಮೀನಿನಲ್ಲಿ ಇಡೀ ರಾತ್ರಿ ನಿದ್ದೆಗೆಟ್ಟು ಕುರಿಗಳ ರಕ್ಷಣೆ ಮಾಡಬೇಕಿದೆ. ನಿದ್ರೆಗೆ ಜಾರಿದ್ರೆ ಕಳ್ಳರಿಂದ ಕುರಿಗಾಯಿಗಳ ಮೇಲೆ ಹಲ್ಲೆ ಮಾಡಿ ಮಾಡಿ ಕುರಿಗಳ ಕಳ್ಳತನ ಮಾಡುತ್ತಾರೆ. ಕಳ್ಳತನವಾದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಕುರಿಗಳು ಪತ್ತೆಯೆ ಆಗುವುದಿಲ್ಲ. ಕುರಿಗಾಹಿಗಳು ಅತಂತ್ರ ಸ್ಥಿತಿಯಲ್ಲಿ ನೆರವಿಗೆ ಬರುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.
undefined
ಕುರಿಗಾಹಿಗಳ ಬೇಡಿಕೆ ಏನು?
ಜಿಲ್ಲೆಯ ಕುರಿಗಾಹಿಗಳು ಕುರಿಗಳ ರಕ್ಷಣೆಗೆ ಬಂದೂಕು ತರಬೇತಿ ನೀಡಬೇಕು. ತರಬೇತಿ ಪಡೆದ ಕುರಿಗಾಯಿಗಳಿಗೆ ಬಂದೂಕು ನೀಡಬೇಕು. ಇದರಿಂದ ಕುರಿಗಳ ರಕ್ಷಣೆ ಜತೆಗೆ ಕಳ್ಳರಿಂದ ಕಾಡುಪ್ರಾಣಿಗಳಿಂದ ಕುರಿಗಾಹಿಗಳು ಆತ್ಮರಕ್ಷಣೆಗೆ ಸಹಾಯವಾಗುತ್ತೆ.
ಅಬ್ಬಾ.. ಈ ಕುರಿಗೆ ಹರಾಜಲ್ಲಿ 1 ಕೋಟಿ ರೂ. ಬೆಲೆ: ಆದರೂ ಮಾರಲ್ಲ ಎಂದ ಕುರಿಗಾಹಿ; ಕಾರಣ ಹೀಗಿದೆ..
ರಾಜ್ಯದ ಎಲ್ಲಾ ಕುರಿಗಾಯಿಗಳಿಗೆ ತೆಲಂಗಾಣ ಮಾದರಿ ಸಹಾಯಧನ ನೀಡಲು ಒತ್ತಾಯ ಮಾಡಿದ್ದಾರೆ. ಕುರಿಗಾಯಿಗಳಿಗೆ ಟೆಂಟ್, ಬಲೆ ಇತರೆ ಪರಿಕರಗಳು ನೀಡಲು ಆಗ್ರಹ
ಕೆಎಂಎಫ್ ಮಾದರಿಯ ಮಾಂಸ ಮಾರಾಟ ಮಳಿಗೆ ಮಾಡುವಂತೆ ಆಗ್ರಹ