ರಾಜ್ಯದಲ್ಲಿ ನಿನ್ನೆ ಒಂದೇ ದಿನ 54 ಜನರಿಗೆ ಕೊರೋನಾ!

By Kannadaprabha News  |  First Published May 11, 2020, 7:43 AM IST

ರಾಜ್ಯದಲ್ಲಿ ನಿನ್ನೆ ಒಂದೇ ದಿನ 54 ಜನರಿಗೆ ಕೊರೋನಾ| ಶಿವಮೊಗ್ಗದಲ್ಲಿ 8, ಉತ್ತರ ಕನ್ನಡದಲ್ಲಿ 7 ಜನರಿಗೆ ವೈರಸ್‌| ಮೂರೇ ದಿನ​ದಲ್ಲಿ 143 ಜನ​ರಿಗೆ ಸೋಂಕು ದೃಢ


ಬೆಂಗಳೂರು(ಮೇ.11): ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಕೊರೋನಾ ಸೋಂಕು ಉಲ್ಬಣಗೊಡಿದ್ದು, ಭಾನುವಾರ 54 ಜನರಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 848ಕ್ಕೆ ಏರಿಕೆಯಾಗಿದೆ.

ಕಳೆದ ಮೇ 7ರಂದು ಕೇವಲ 20 ಜನರಿಗೆ ಹರಡಿದ್ದ ಸೋಂಕು, ಮೇ 8ರಂದು 48 ಜನರಿಗೆ, ಮೇ 9ರಂದು 41 ಜನರಿಗೆ, ಮೇ 10ರಂದು 54 ಜನರಿಗೆ ದೃಢಪಟ್ಟಿದೆ. ಇದರೊಂದಿಗೆ ಮೂರೇ ದಿನದಲ್ಲಿ 143 ಜನರಲ್ಲಿ ಸೋಂಕು ಪತ್ತೆಯಾದಂತಾಗಿದೆ.

Latest Videos

undefined

ಭಾನುವಾರ ಒಟ್ಟು ಎಂಟು ಜಿಲ್ಲೆಗಳಲ್ಲಿ 54 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 10 ಮಕ್ಕಳು, 29 ಮಹಿಳೆಯರು ಮತ್ತು 25 ಜನ ಪುರುಷರಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು 22 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಬಾಗಲಕೋಟೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ 8, ಉತ್ತರ ಕನ್ನಡ 7, ಕಲಬುರಗಿ 4, ಬೆಂಗಳೂರಲ್ಲಿ 3, ಚಿಕ್ಕಬಳ್ಳಾಪುರ, ದಾವಣಗೆರೆಯಲ್ಲಿ ತಲಾ ಒಂದು ಪ್ರಕರಣಗಳು ದೃಢಪಟ್ಟಿವೆ.

ನಗರದಲ್ಲಿ ಮತ್ತೊಂದು ಆಸ್ಪತ್ರೆ ಸೀಲ್‌ಡೌನ್‌, ಆಸ್ಪತ್ರೆ ಸಿಬ್ಬಂದಿಗೆ ಕ್ವಾರಂಟೈನ್‌!

ತಬ್ಲೀಘಿ ಜೊತೆ ಅಜ್ಮೇರ್‌ ತಲೆನೋವು: ರಾಜಸ್ಥಾನದ ಅಜ್ಮೇರ್‌ ದರ್ಗಾಕ್ಕೆ ಪ್ರವಾಸ ಹೋಗಿ ಬಂದಿದ್ದ ಗಡಿ ಜಿಲ್ಲೆ ಬೆಳಗಾವಿಯ 22 ಮಂದಿ, ಬಾಗಲಕೋಟೆಯ 8 ಜನ ಮತ್ತು ದಾವಣಗೆರೆಯ ಒಬ್ಬ ವ್ಯಕ್ತಿ ಸೇರಿ ಒಟ್ಟು 31 ಜನರಿಗೆ ಭಾನುವಾರ ಸೋಂಕು ದೃಢಪಟ್ಟಿದೆ. ಇದರಿಂದ ಬೆಳಗಾವಿಯ ಒಟ್ಟು ಸೋಂಕಿತರ ಸಂಖ್ಯೆ 113ರಕ್ಕೇರಿದರೆ, ಬಾಗಲಕೋಟೆಯಲ್ಲಿ 51, ದಾವಣಗೆರೆ 68ರಷ್ಟಾಗಿದೆ.

ಹಸಿರು ವಲಯದ ಪಟ್ಟಿಯಲ್ಲಿದ್ದ ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗಕ್ಕೂ ತಬ್ಲೀಘಿಗಳಿಂದ ಸೋಂಕು ವ್ಯಾಪಿಸಿದೆ. ಇತ್ತೀಚೆಗೆ ಗುಜರಾತ್‌ನಿಂದ ಬಂದಿದ್ದ ಜಿಲ್ಲೆಯ ಎಂಟು ಜನ ತಬ್ಲೀಘಿಗಳಿಗೆ ಸೋಂಕು ದೃಢಪಟ್ಟಿದೆ.

ಭಟ್ಕಳದಲ್ಲಿ ಮತ್ತೆ ಏಳು ಪ್ರಕರಣ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮತ್ತೆ ಏಳು ಜನರಿಗೆ ಸೋಂಕು ದೃಢಪಟ್ಟಿದ್ದು, ಇವೆಲ್ಲವೂ ಪಿ.659 ಸಂಖ್ಯೆಯ ರೋಗಿಯ ಸಂಪರ್ಕದಿಂದಲೇ ಹರಡಿವೆ. ಇನ್ನು, ಕಲಬುರಗಿಯಲ್ಲಿ ಮಹಾರಾಷ್ಟ್ರದ ಪ್ರವಾಸದ ಹಿನ್ನೆಲೆಯ ಒಬ್ಬ ವ್ಯಕ್ತಿ, ಉಸಿರಾಟ ತೊಂದರೆ ಮತ್ತು ಇನ್‌ಫ್ಲುಯೆಂಜಾ ಜ್ವರದಿಂದ ಇಬ್ಬರಿಗೆ ಮತ್ತು ಪಿ.604ನೇ ಸೋಂಕಿತನಿಂದ ಒಬ್ಬರು ಸೇರಿ ಒಟ್ಟು 4 ಜನರಿಗೆ ಸೋಂಕು ತಗಲಿದೆ. ಉಳಿದಂತೆ ಬೆಂಗಳೂರಿನಲ್ಲಿ ಪಾದರಾಯನಪುರದ ಕಂಟೈನ್ಮೆಂಟ್‌ ವಲಯದ ಒಬ್ಬ ವ್ಯಕ್ತಿಗೆ, ಉಸಿರಾಟ ತೊಂದರೆ ಮತ್ತು ಜ್ವರದಿಂದ ಪರೀಕ್ಷೆಗೊಳಪಟ್ಟಇಬ್ಬರಿಗೆ ಸೋಂಕು ಹರಡಿದೆ. ಚಿಕ್ಕಬಳ್ಳಾಪುರ ಸೋಂಕಿತನಿಂದಲೇ ಮತ್ತೊಬ್ಬ ವ್ಯಕ್ತಿಗೆ ಕೋವಿಡ್‌-19 ದೃಢಪಟ್ಟಿದೆ.

ತಬ್ಲೀಘಿ ಆಯ್ತು, ಈಗ ಅಜ್ಮೇರ್‌ ಕಂಟಕ: 31 ಜನಕ್ಕೆ ಸೋಂಕು ದೃಢ!

ದಾಖಲೆಯ 36 ಮಂದಿ ಡಿಸ್ಚಾಜ್‌ರ್‍

ರಾಜ್ಯದಲ್ಲಿ ಭಾನುವಾರ ಒಂದೇ ದಿನ ಸೋಂಕಿನಿಂದ ಗುಣಮುಖರಾದ ಒಟ್ಟು 36 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ಸೇರಿದ್ದಾರೆ. ಇದರೊಂದಿಗೆ ಒಟ್ಟು ಬಿಡುಗಡೆಯಾದವರ ಸಂಖ್ಯೆ 422ಕ್ಕೆ ಏರಿಕೆಯಾಗಿದೆ. ಗುಣಮುಖರಾದ 36 ಜನರ ಬಿಡುಗಡೆ ರಾಜ್ಯದಲ್ಲಿ ಇರುವರೆಗೂ ಒಂದೇ ದಿನದಲ್ಲಿ ಬಿಡುಗಡೆಯಾದ ಅತಿ ಹೆಚ್ಚಿನ ಸಂಖ್ಯೆಯಾಗಿದೆ.

ಕೊರೋನಾಗೆ ಮತ್ತೊಂದು ಬಲಿ

ಕೊರೋನಾ ಸೋಂಕಿಗೆ ಬೆಂಗಳೂರಿನಲ್ಲಿ ಮತ್ತೊಬ್ಬ ಮಹಿಳೆ ಸಾವನ್ನಪ್ಪಿದ್ದು, ಇದರಿಂದ ರಾಜ್ಯದಲ್ಲಿ ಮೃತಪಟ್ಟಒಟ್ಟು ಸೋಂಕಿತರ ಸಂಖ್ಯೆ 31ಕ್ಕೆ (ಆತ್ಮಹತ್ಯೆಗೊಳಗಾದ ಓರ್ವ ಸೋಂಕಿತನ ಹೊರತುಪಡಿಸಿ) ಏರಿಕೆಯಾಗಿದೆ.

ಮೇ 4ರಂದು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಹೆಣ್ಣೂರು ಮೂಲದ 56 ವರ್ಷದ ಮಹಿಳೆಯನ್ನು ಮೇ 6ರಂದ ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ನಾಥ್‌ರ್‍ ಆಸ್ಪತ್ರೆ ಎಂಬ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಫಲಿಸದೆ ಮೇ 7ರಂದೇ ಮೃತಪಟ್ಟಿದ್ದು, ಮೇ 6ರಂದು ಮಹಿಳೆಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಮೇ 9ರಂದು ಬಂದ ವರದಿಯಲ್ಲಿ ಸೋಂಕು ದೃಢಪಟ್ಟಿದೆ.

click me!