Corona Update ಕರ್ನಾಟಕದಲ್ಲಿ ಒಂದೇ ದಿನ ಅರ್ಧ ಲಕ್ಷ ಕೊರೋನಾ ಕೇಸ್ ಪತ್ತೆ

By Suvarna News  |  First Published Jan 23, 2022, 8:19 PM IST

* ಕರ್ನಾಟಕದಲ್ಲಿ ಒಂದೇ ದಿನ ಅರ್ಧ ಲಕ್ಷ ಕೊರೋನಾ ಕೇಸ್ ಪತ್ತೆ
* ವೀಕೆಂಡ್‌ ಕರ್ಫ್ಯೂ ರದ್ದು ಮಾಡಿದ ಮೊದಲ ಭಾನುವಾರ ಅಬ್ಬರಿಸಿದ ಕೊರೋನಾ
* ಕಳೆದ 24 ಗಂಟೆಗಳಲ್ಲಿ 50,210 ಜನರಿಗೆ  ಕೊರೋನಾ ಸೋಂಕು


ಬೆಂಗಳೂರು, (ಜ.23): ಕರ್ನಾಟಕ ಸರ್ಕಾರ (Karnataka Government) ಹಲವು ಕಠಿಣ ಕ್ರಮಗಳನ್ನ ಕೈಗೊಂಡಿದ್ದರೂ ಸಹ ಕೊರೋನಾ (Coronavirus) ದಿನದಿಂದ ದಿನಕ್ಕೆ ಹೆಚ್ಚಾಗುಲೇ ಇದೆ. ಇಂದು(ಭಾನುವಾರ) ಒಂದೇ ದಿನ ಕರ್ನಾಟಕದಲ್ಲಿ ಅರ್ಧ ಲಕ್ಷಕ್ಕೂ ಹೆಚ್ಚು ಕೊರೋನಾ ಕೇಸ್‌ಗಳು ಪತ್ತೆಯಾಗಿವೆ. 

ಹೌದು.. ಕಳೆದ 24 ಗಂಟೆಗಳಲ್ಲಿ 50,210 ಜನರಿಗೆ  ಕೊರೋನಾ ಸೋಂಕು ತಗುಲಿದ್ದು ದೃಢಪಟ್ಟಿದ್ದು, ಸೋಂಕಿನಿಂದ 19 ಮಂದಿ ಸಾವನ್ನಪ್ಪಿದ್ದಾರೆ. 22,842 ಜನರು ಸೋಂಕುಗಳಿಂದ ಚೇತರಿಸಿಕೊಂಡಿದ್ದು, ವಿವಿಧ ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ದಾರೆ. 

Tap to resize

Latest Videos

undefined

Corona 3rd Wave: ಕೋವಿಡ್‌ ಕಾಣಿಸಿಕೊಂಡ 8ನೇ ದಿನ ನಿರ್ಲಕ್ಷಿಸಿದರೆ ಅಪಾಯ ಫಿಕ್ಸ್

ರಾಜ್ಯದಲ್ಲಿ ಪ್ರಸ್ತುತ 3,57,796 ಸಕ್ರಿಯ ಪ್ರಕರಣಗಳಿದ್ದು (Positive Case), ಕೊವಿಡ್​ನಿಂದ (Covid 19) ಈವರೆಗೆ ಒಟ್ಟು 38,582 ಜನರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ಪ್ರಮಾಣ ಶೇ 22.77 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 35,17,682  ಜನರಲ್ಲಿ ಸೋಂಕು ದೃಢಪಟ್ಟಿದ್ದು, 31,21,274 ಜನರು ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ಸಾಯುವವರ ಪ್ರಮಾಣ ಶೇ 0.03 ಇದೆ.

Daily new cases cross 50k in Karnataka today:
◾New cases in State:50,210
◾New cases in B'lore: 26,299
◾Positivity rate in State: 22.77%
◾Discharges: 22,842
◾Active cases State: 3,57,796 (B'lore- 231k)
◾Deaths:19 (B'lore- 08)
◾Tests: 2,20,459

— Dr Sudhakar K (@mla_sudhakar)

ಇನ್ನು ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಭಾನುವಾರ 26,299 ಜನರಲ್ಲಿ ಸೋಂಕು ದೃಢಪಟ್ಟಿದ್ದು, 8 ಜನರು ಸಾವನ್ನಪ್ಪಿದ್ದಾರೆ. 12,787 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಪ್ರಸ್ತುತ 2,31,833 ಸಕ್ರಿಯ ಪ್ರಕರಣಗಳಿವೆ. ಈವರೆಗೆ 15,85,657 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 13,37,325 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಸೋಂಕಿನಿಂದ 16,498 ಮೃತಪಟ್ಟಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?
ಬೆಂಗಳೂರು ನಗರ 26,299, ಬಾಗಲಕೋಟೆ 331, ಬಳ್ಳಾರಿ 904, ಬೆಳಗಾವಿ 885, ಬೆಂಗಳೂರು ಗ್ರಾಮಾಂತರ 925, ಬೀದರ್ 368, ಚಾಮರಾಜನಗರ 664, ಚಿಕ್ಕಬಳ್ಳಾಪುರ 554, ಚಿಕ್ಕಮಗಳೂರು 144, ಚಿತ್ರದುರ್ಗ 246, ದಕ್ಷಿಣ ಕನ್ನಡ 770, ದಾವಣಗೆರೆ 495, ಧಾರವಾಡ 955, ಗದಗ 274, ಹಾಸನ 1922, ಹಾವೇರಿ 165, ಕಲಬುರ್ಗಿ 853, ಕೊಡಗು 1139, ಕೋಲಾರ 824, ಕೊಪ್ಪಳ 510, ಮಂಡ್ಯ 1455, ಮೈಸೂರು 4539, ರಾಯಚೂರು 410, ರಾಮನಗರ 199, ಶಿವಮೊಗ್ಗ 611, ತುಮಕೂರು 1963, ಉಡುಪಿ 947, ಉತ್ತರ ಕನ್ನಡ 641, ವಿಜಯಪುರ 249, ಯಾದಗಿರಿ 151.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ಬೆಂಗಳೂರು ನಗರ 8, ಶಿವಮೊಗ್ಗ, ತುಮಕೂರು ತಲಾ ಇಬ್ಬರು, ಬಳ್ಳಾರಿ, ಚಾಮರಾಜನಗರ, ದಕ್ಷಿಣ ಕನ್ನಡ, ಧಾರವಾಡ, ಮೈಸೂರು, ರಾಯಚೂರು ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

We made it!
🔹It took us exactly 1 year and 7 days to achieve 1️⃣0️⃣0️⃣% first dose coverage!
🔹Karnataka is the first state in the country (>4 cr adult population) to achieve this feat!
🔹Kudos to all health workers and district administration on this stellar achievement! pic.twitter.com/MsgWl1g4P7

— Dr Sudhakar K (@mla_sudhakar)
click me!