Corona In Karnataka ಕರ್ನಾಟಕದಲ್ಲಿ ಒಂದೇ ದಿನ 41 ಸಾವಿರಕ್ಕೂ ಹೆಚ್ಚು ಕೊರೋನಾ ಕೇಸ್ ಪತ್ತೆ

By Suvarna News  |  First Published Jan 18, 2022, 9:52 PM IST

* ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳ
* 24 ಗಂಟೆಗಳಲ್ಲಿ 41,457  ಕೊರೋನಾ ಪ್ರಕರಣಗಳು ಪತ್ತೆ 
* ಕರ್ನಾಟಕ ಆರೋಗ್ಯ ಇಲಾಖಯಿಂದ ಮಾಹಿತಿ


ಬೆಂಗಳೂರು, (ಜ.18): ಕರ್ನಾಟಕದಲ್ಲಿ(Karnataka) ಕೊರೋನಾ ಸೋಂಕು (Coronavirus) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು(ಮಂಗಳವಾರ) ಒಂದೇ ದಿನ 41,457  ಪ್ರಕರಣಗಳು ಪತ್ತೆಯಾಗಿವೆ.

ಈ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 32,88,700 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 29,99,825 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 38,465 ಜನರು ಮೃತಪಟ್ಟಿದ್ದಾರೆ.

Tap to resize

Latest Videos

undefined

Corinavirus: ಬೊಮ್ಮಾಯಿ ಸಭೆಯ ಪ್ರಮುಖ ನಿರ್ಧಾರಗಳು, ವೀಕೆಂಡ್ ಕರ್ಫ್ಯೂ ಕತೆ ಏನು?

ರಾಜ್ಯದಲ್ಲಿ ಪ್ರಸ್ತುತ 2,50,381 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 22.30, ಸೋಂಕಿನಿಂದ ಸಾವನ್ನಪ್ಪುವವರ ಪ್ರಮಾಣ ಶೇ 0.04 ಇದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರದಲ್ಲಿ 25,595 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 4514 ಮಂದಿ ಚೇತರಿಸಿಕೊಂಡಿದ್ದಾರೆ, ಏಳು ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ ನಗರದಲ್ಲಿ 1,78,328 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 16,465 ಜನರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಈವರೆಗೆ 14,58,349 ಜನರಲ್ಲಿ ಸೋಂಕು ದೃಢಪಟ್ಟಿದ್ದು, 12,63,555 ಜನರು ಚೇತರಿಸಿಕೊಂಡಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?
ಬಾಗಲಕೋಟೆ 58, ಬಳ್ಳಾರಿ 714, ಬೆಳಗಾವಿ 418, ಬೆಂಗಳೂರು ಗ್ರಾಮಾಂತರ 1116, ಬೆಂಗಳೂರು ನಗರ 25,595, ಬೀದರ್ 235, ಚಾಮರಾಜನಗರ 198, ಚಿಕ್ಕಬಳ್ಳಾಪುರ 358, ಚಿಕ್ಕಮಗಳೂರು 362, ಚಿತ್ರದುರ್ಗ 402, ದಕ್ಇಣ ಕನ್ನಡ 1058, ದಾವಣಗೆರೆ 257, ಧಾರವಾಡ 726, ಗದಗ 150, ಹಾಸನ 1739, ಹಾವೇರಿ 44, ಕಲಬುರಗಿ 514, ಕೊಡಗು 89, ಕೋಲಾರ 481, ಕೊಪ್ಪಳ 83, ಮಂಡ್ಯ 895, ಮೈಸೂರು 1848, ರಾಯಚೂರು 205, ರಾಮನಗರ 379, ಶಿವಮೊಗ್ಗ 306, ತುಮಕೂರು 1731, ಉಡುಪಿ 801, ಉತ್ತರ ಕನ್ನಡ 587, ವಿಜಯಪುರ 53, ಯಾದಗಿರಿ 55.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ಬೆಂಗಳೂರು ನಗರ 7, ತುಮಕೂರು 2, ಮೈಸೂರು 3, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಹಾಸನ, ರಾಮನಗರ, ಉತ್ತರ ಕನ್ನಡ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಸಿಎಂ ಸಭೆಯ ನಿರ್ಧಾರಗಳು
ಕೊರೋನಾ (Coronavirus) ಆತಂಕ ಮತ್ತು ಸದ್ಯದ ಪರಿಸ್ಥಿತಿ ನಿಯಂತ್ರಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai)  ಕರೆದಿದ್ದ ಹೈವೋಲ್ಟೇಜ್ ಮೀಟಿಂಗ್ ಮುಕ್ತಾಯವಾಗಿದ್ದು ಮಹತ್ವದ  ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ಪಾಸಿಟಿವ್ ಬಂದು ಹೋಮ್ ಐಸೋಲೆಷನ್ (Home isolation) ನಲ್ಲಿರುವರ ಮೇಲೆ ಹೆಚ್ಚಿನ‌ ನಿಗಾವಹಿಸಲು ಸೂಚನೆ ನೀಡಲಾಗಿದೆ ಎರಡನೇ ಡೋಸ್ ಕಡಿಮೆಯಾಗಿರುವ ಜಿಲ್ಲೆಗಳ ಜೊತೆ ವಿಡಿಯೋ ಸಂವಾದ ಮಾಡಿ ಲಸಿಕಾರಣ ಮಾಡಲು ಸೂಚಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳನ್ನ ಬಳಿಸಿಕೊಂಡು ಜನರಿಗೆ ಮಾರ್ಗದರ್ಶನ ಮಾಡಲು ಸಿಎಂ ಸೂಚಿಸಿದ್ದಾರೆ ಎಂದು ತಿಳಿಸಿದರು.

1.      ಬೆಂಗಳೂರಿನಲ್ಲಿ ಒಪಿಡಿಗಳಿಗೆ ಹೆಚ್ಚಿನ ಗಮನ ಕೊಡಲು ಸೂಚಿಸಲಾಯಿತು.. ಹೆಚ್ಚು ಸಿಬ್ಬಂದಿ ನಿಯೋಜಿಸಲು ಸೂಚನೆ

2.     ಮುನ್ನೆಚ್ಚರಿಕೆ ಕ್ರಮಗಳಿಗೆ ಮೊದಲ ಆದ್ಯತೆ

3.     ಹೋಮ್ ಐಸೊಲೇಷನ್ ಕಾಲ್ಸ್ ಹೆಚ್ಚಿಸಲು ಸೂಚಿಸಲಾಯಿತು. ಕೊ-ಮಾರ್ಬಿಡಿಟಿ ಇರುವವರಿಗೆ ದಿನಕ್ಕೆ ಒಂದು ಬಾರಿ ಕರೆ ಮಾಡಿ ಅವರ ಆರೋಗ್ಯ ಸ್ಥಿತಿ ಅವಲೋಕಿಸಬೇಕು ಹಾಗೂ ವಿಶ್ವಾಸ ಮೂಡಿಸಬೇಕು.

4.     ಅಂತೆಯೆ ಮನೆಯವರಿಗೆ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸಿದರು.

5.     ಔಷಧಿ ಕಿಟ್ ಗಳನ್ನು ಮನೆಗಳಿಗೆ ಪರಿಣಾಮಕಾರಿಯಾಗಿ ತಲುಪಿಸಲು ಸೂಚಿಸಿದರು.

6.     ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಜನರಲ್ಲಿರುವ ನಕಾರಾತ್ಮಕ ಮನೋಭಾವವನ್ನು ತೊಡೆಯಲು ಸಲಹೆ ನೀಡಿದರು.

7.      ಸ್ಥಳೀಯ ವೈದ್ಯರು ಕನ್ಸಲ್ಟೇಷನ್ ಮಾಡುವಂತಾಗಬೇಕು. 

click me!