* ಶಾಲಾ ಮಕ್ಕಳ ಜತೆ ಬೆರೆತ ಡಿಕೆಶಿವಕುಮಾರ್‌ಗೆ ಬಿಗ್ ಶಾಕ್
* ಪಾದಯಾತ್ರೆ ವೇಳೆ ಶಾಲಾ ಮಕ್ಕಳ ಗುಂಪಿನ ಮಧ್ಯೆ ನಿಂತು ಫೋಟೋ ತೆಗೆಸಿಕೊಂಡಿದ್ದ ಡಿಕೆಶಿ
* ಈ ಬಗ್ಗೆ ಡಿಜೆ ಐಜಿಪಿ ವರೆಗೂ ಹೋದ ದೂರು
ಬೆಂಗಳೂರು, (ಜ.10): ಮೇಕೆದಾಟು ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಬೆಂಗಳೂರಿಗೆ ಮಾದಯಾತ್ರೆ ಮಾಡುತ್ತಿದೆ. ಪಾದಯಾತ್ರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶಾಲೆಗೆ ಭೇಟಿ ನೀಡಿದ್ದು, ಇದೀಗ ಅವರಿಗೆ ಅದು ಮುಳುವಾಗಿದೆ.
ಹೌದು... ಪಾದಯಾತ್ರೆ ವೇಳೆ ಶಾಲೆಗೆ ಭೇಟಿ ನೀಡಿದ್ದಕ್ಕೆ ಡಿ.ಕೆ.ಶಿವಕುಮಾರ್ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದು, ಈ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಅಧ್ಯಕ್ಷ ಡಿಜಿ ಪ್ರವೀಣ್ ಸೂದ್ಗೆ ಪತ್ರ ಬರೆದಿದೆ.
undefined
Mekedatu Padayatre: ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಸೇರಿ 30 ಜನರ ವಿರುದ್ಧ ಎಫ್‍ಐಆರ್
ಡಿಜಿ, ಐಜಿಪಿ ಪ್ರವೀಣ್ ಸೂದ್ ಅವರಿಗೆ ಆಯೋಗ ಬರೆದ ಪತ್ರ ಏಷ್ಯಾನೆಟ್ ಸುವರ್ಣನ್ಯೂಸ್ಗೆ ಲಭ್ಯವಾಗಿದ್ದು, ಡಿಕೆ ಶಿವಕುಮಾರ್ ಕೋವಿಡ್ ನಿಯಮ ಪಾಲಿಸದೇ ಮಕ್ಕಳ ಜತೆ ಬೆರೆತಿದ್ದಾರೆ. ಶಾಲಾ ಮಕ್ಕಳ ಜತೆ ಕುಳಿತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮಾಸ್ಕ್ ಧರಿಸಿದೇ ಶಾಲಾಮಕ್ಕಳ ಜತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಡಿಜಿ ಪ್ರವೀಣ್ ಸೂದ್ಗೆ ಪತ್ರದಲ್ಲಿ ಹೇಳಿದೆ.
ಈ ಬಗ್ಗೆ ಡಿಕೆಶಿಗೆ ಪ್ರಶ್ನಿಸಿದ ಬಿಜೆಪಿ
ಶಾಲೆ ಮಕ್ಕಳ ಜೊತೆ ಬೆರೆತಿರುವ ಬಗ್ಗೆ ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿ, ಡಿಕೆ ಶಿವಕುಮಾರ್ ನಡೆಯನ್ನು ಟೀಕಿಸಿದ್ದು, ಮಾನ್ಯ ಡಿಕೆಶಿ ಅವರೇ, ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು ಜ್ವರದಿಂದ ಬಳಲುತ್ತಿದ್ದಾರೆ. ಕೋವಿಡ್ ಸೋಂಕಿನ ಪ್ರಾಥಮಿಕ ಲಕ್ಷಣವಾದ ಕೆಮ್ಮು ನಿಮ್ಮನ್ನು ನಿನ್ನೆ ಬಾಧಿಸಿತ್ತು. ಇಂದು ನೀವು ಯಾವುದೇ ಮುಂಜಾಗ್ರತೆ ಇಲ್ಲದೆ ಮುಗ್ಧ ಮಕ್ಕಳೊಂದಿಗೆ ಬೆರೆತಿದ್ದೀರಿ. ಇದು ಕೋವಿಡ್ ಸೋಂಕಿಗೆ ಕಾರಣವಾದರೆ ನೀವು ಹೊಣೆ ಹೊರುತ್ತೀರಾ? ಎಂದು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದೆ.
ಮಾನ್ಯ ಡಿಕೆಶಿ ಅವರೇ,
ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು ಜ್ವರದಿಂದ ಬಳಲುತ್ತಿದ್ದಾರೆ.
ಕೋವಿಡ್ ಸೋಂಕಿನ ಪ್ರಾಥಮಿಕ ಲಕ್ಷಣವಾದ ಕೆಮ್ಮು ನಿಮ್ಮನ್ನು ನಿನ್ನೆ ಬಾಧಿಸಿತ್ತು.
ಇಂದು ನೀವು ಯಾವುದೇ ಮುಂಜಾಗ್ರತೆ ಇಲ್ಲದೆ ಮುಗ್ಧ ಮಕ್ಕಳೊಂದಿಗೆ ಬೆರೆತಿದ್ದೀರಿ.
ಇದು ಕೋವಿಡ್ ಸೋಂಕಿಗೆ ಕಾರಣವಾದರೆ ನೀವು ಹೊಣೆ ಹೊರುತ್ತೀರಾ? pic.twitter.com/vk0lf66SxB
ಖರ್ಗೆ, ಸಿದ್ದು, ಡಿಕೆಶಿ ಸೇರಿ 30 ಜನರ ವಿರುದ್ಧ ಎಫ್‍ಐಆರ್
ಕಾಂಗ್ರೆಸ್ ಪಕ್ಷದ ವತಿಯಿಂದ ಜ.9ರ ಭಾನುವಾರ ಪ್ರಾರಂಭವಾದ ಮೇಕೆದಾಟು ಅಣೆಕಟ್ಟು ಯೋಜನೆಯ ತ್ವರಿತ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಪ್ರಾರಂಭವಾದ ಸ್ಥಳ ಸಂಗಮದಲ್ಲಿ ಪಾಲ್ಗೊಂಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅದ್ಯಕ್ಷ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್ ಸೇರಿದಂತೆ 30 ಜನರ ಮೇಲೆ ರಾಮನಗರ ಪೊಲೀಸರು ಸೋಮವಾರ ಎಫ್‍ಐಆರ್ ದಾಖಲಿಸಿದ್ದಾರೆ.
ಮೇಕೆದಾಟು ಅಣೆಕಟ್ಟು ಯೋಜನೆಯ ತ್ವರಿತ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ರವಿವಾರದಿಂದ ಹಮ್ಮಿಕೊಂಡಿರುವ ಪಾದಯಾತ್ರೆ ವೇಳೆ ವಾರಾಂತ್ಯ ಕರ್ಫ್ಯೂ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದಲ್ಲಿ ಈ ಎಫ್‍ಐಆರ್ ದಾಖಲಾಗಿದೆ.
ವೇದಿಕೆ ಕಾರ್ಯಕ್ರಮದಲ್ಲಿ ಆಸೀನರಾಗಿದ್ದವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸರ್ಕಾರದ ಆದೇಶದಂತೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕನಕಪುರ ತಾಲ್ಲೂಕಿನ ಸಂಗಮ ಪ್ರದೇಶದ ಸುತ್ತಮುತ್ತ ವಾರಾಂತ್ಯದಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿತ್ತು. ಇದನ್ನು ಉಲ್ಲಂಘಿಸಿ, ಜನರನ್ನು ಸೇರಿಸಿ ಪಾದಯಾತ್ರೆ ಮಾಡಿದ ಕಾರಣ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಸಾತನೂರು ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏನೇ ಬಂದರೂ ಹೋರಾಟ ನಿಲ್ಲಿಸಬೇಡಿ ಎಂದ ಖರ್ಗೆ
ಮೇಕೆದಾಟು ಯೋಜನೆಯ (Mekedatu Project) ಶ್ರೇಯಸ್ಸು ಕಾಂಗ್ರೆಸ್‌ಗೆ (Congress) ಹೋಗಬಾರದು ಎಂಬ ಕಾರಣಕ್ಕೆ ಪಾದಯಾತ್ರೆ ತಡೆಯಲು ಬಿಜೆಪಿ (BJP), ಜೆಡಿಎಸ್(JDS) ಪ್ರಯತ್ನಿಸುತ್ತಿವೆ. ಎಷ್ಟೇ ಅಡ್ಡಿ ಉಂಟಾದರೂ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸಬೇಡಿ ಎಂದು ರಾಜ್ಯಸಭೆ ವಿರೋಧಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಕರೆ ನೀಡಿದ್ದಾರೆ. ಈ ಯೋಜನೆಯಿಂದ ತಮಿಳುನಾಡು(Tamil Nadu) ಸೇರಿದಂತೆ ಯಾರೊಬ್ಬರಿಗೂ ತೊಂದರೆ ಆಗುವುದಿಲ್ಲ. ಎರಡೂ ರಾಜ್ಯಗಳ ಜನರಿಗೆ ಈ ಯೋಜನೆ ನೆರವಾಗಲಿದೆ. ಹೀಗಾಗಿ ಈ ಯೋಜನೆಗೆ ಯಾವುದೇ ಅಡೆತಡೆ ಎದುರಾಗಬಾರದು ಎಂದಿದ್ದಾರೆ.