ಕರ್ನಾಟಕ ಗಡಿಯ ಕಣ್ಣೂರಲ್ಲಿ ನಕ್ಸಲರು ಪ್ರತ್ಯಕ್ಷ, ಕೂಂಬಿಂಗ್‌ ಆಪರೇಷನ್‌

By Suvarna NewsFirst Published Jul 24, 2022, 4:49 PM IST
Highlights

ಕರ್ನಾಟಕದ ಗಡಿಯ ಕಣ್ಣೂರು ಭಾಗದಲ್ಲಿರುವ ಅಯ್ಯನಕುನ್ನು ಪ್ರದೇಶದಲ್ಲಿ ಒಬ್ಬ ಮಹಿಳೆ ಸೇರಿ ಮೂವರು ನಕ್ಸಲರು ಕಂಡುಬಂದ ಆತಂಕಕಾರಿ ಮಾಹಿತಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ನಕ್ಸಲರಿಗಾಗಿ ಕೂಂಬಿಂಗ್‌ ಆಪರೇಶನ್‌ ಆರಂಭಿಸಿದ್ದಾರೆ.

ಕಣ್ಣೂರು (ಜು.24): ಕರ್ನಾಟಕದ ಗಡಿಯ ಕಣ್ಣೂರು ಭಾಗದಲ್ಲಿರುವ ಅಯ್ಯನಕುನ್ನು ಪ್ರದೇಶದಲ್ಲಿ ಒಬ್ಬ ಮಹಿಳೆ ಸೇರಿ ಮೂವರು ನಕ್ಸಲರು ಕಂಡು ಬಂದ ಆತಂಕಕಾರಿ ಮಾಹಿತಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ನಕ್ಸಲರಿಗಾಗಿ ಕೂಂಬಿಂಗ್‌ ಆಪರೇಶನ್‌ ಆರಂಭಿಸಿದ್ದಾರೆ. ಜು.15ರಂದು ಮೂವರು ಶಸ್ತ್ರಸಜ್ಜಿತ ನಕ್ಸಲರು ಮನೆಗೆ ಬಂದು ಆಹಾರ ಸಾಮಗ್ರಿಯನ್ನು ಒಯ್ದಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ರಾತ್ರಿ ವೇಳೆ ಅವರು ಮನೆಗಳಿಗೆ ಭೇಟಿ ನೀಡಿದ್ದ ಕಾರಣದಿಂದಾಗಿ ಅವರ ಬಳಿ ಯಾವ ಶಸ್ತ್ರಾಸ್ತ್ರಗಳಿವೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇನ್ನು ಲಭ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಉಗ್ರರ ವಿರುದ್ಧ ಹೋರಾಟ ನಡೆಸಲು ವಿಶೇಷ ಪರಿಣಿತಿ ಹೊಂದಿರುವ ರಾಜ್ಯ ಪೊಲೀಸ್‌ ಕಮಾಂಡೋ ಪಡೆ ಥಂಡರ್‌ಬೋಲ್ಟ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಕೂಂಬಿಂಗ್‌ ಕಾರ್ಯಾಚರಣೆಗೆ ತಂಡಗಳನ್ನು ರಚಿಸಲಾಗಿದ್ದು, ನಕ್ಸಲರ ಚಲನವಲಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು  ವರದಿ ತಿಳಿಸಿದೆ.

ನಕ್ಸಲರ ಸಂಪೂರ್ಣ ನಿರ್ಮೂಲನೆವರೆಗೆ ನಕ್ಸಲ್‌ ನಿಗ್ರಹ ಪಡೆ ವಾಪಸಿಲ್ಲ:  ರಾಜ್ಯದಲ್ಲಿ ನಕ್ಸಲರಿಗೆ ಬೆಂಬಲ ನೀಡುವವರ ಮೇಲೆ ಕಟ್ಟೆಚ್ಚರ ವಹಿಸಿ ನಿಗಾ ಇಡಲಾಗಿದೆ. ಹೆಚ್ಚು ಕಮ್ಮಿ ಯಾದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮವಾಗುತ್ತದೆ ನಕ್ಸಲ್‌ ಚಟುವಟಿಕೆಯನ್ನು ಸಂಪೂರ್ಣ ಹತ್ತಿಕ್ಕಲು ನಕ್ಸಲ್‌ ನಿಗ್ರಹ ಪಡೆಯನ್ನು ನಿಯೋಜಿಸಿದ್ದೇವೆ. ಇತ್ತೀಚೆಗೂ ಕೆಲವರು ಶರಣಾಗತಿ, ಮತ್ತೆ ಕೆಲವರು ಬಂಧನ ಆಗಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆ ಇಲ್ಲ. ಬೇರೆ ರಾಜ್ಯದಲ್ಲಿ ಕ್ರಮ ಕೈಗೊಂಡಾಗ ಇಲ್ಲಿಗೆ ಬರುತ್ತಾರೆ, ಇಲ್ಲಿ ಕ್ರಮ ಕೈಗೊಂಡರೆ ಬೇರೆ ರಾಜ್ಯಕ್ಕೆ ತೆರಳುವ ಕೊಂಚ ಚಲನವಲನ ಇದೆ. ಸಂಪೂರ್ಣ ನಿಗ್ರಹ ಆಗುವವರೆಗೂ ನಕ್ಸಲ್‌ ನಿಗ್ರಹ ಪಡೆ ಅಲ್ಲೇ ಇಡೋದು ಒಳಿತು ಎಂದು ಭಾವಿಸಿದ್ದೇವೆ. ಈ ಬಗ್ಗೆ ಚರ್ಚೆಯಾಗಿದೆ.

Chikkamagaluru Naxalism ಮಲೆನಾಡಿನಲ್ಲಿ ನಕ್ಸಲ್ ಯುಗಾಂತ್ಯವಾಯ್ತಾ?

 ನಕ್ಸಲ್‌ ಚಟುವಟಿಕೆಯನ್ನು ಸಂಪೂರ್ಣ ಹತ್ತಿಕ್ಕಲು ನಕ್ಸಲ್‌ ನಿಗ್ರಹ ಪಡೆಯನ್ನು ಮಲೆನಾಡು ಭಾಗದಲ್ಲಿ ನಿಯೋಜಿಸಿದ್ದೇವೆ. ಇತ್ತೀಚೆಗೆ ಕೆಲ ನಕ್ಸಲರು ಶರಣಾಗತಿ, ಮತ್ತೆ ಕೆಲವರು ಬಂಧನ ಆಗಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆ ಇಲ್ಲ. ಬೇರೆ ರಾಜ್ಯದಲ್ಲಿ ಕ್ರಮ ಕೈಗೊಂಡಾಗ ಕೆಲ ನಕ್ಸಲರು ಇಲ್ಲಿಗೆ ಬರುತ್ತಾರೆ, ಇಲ್ಲಿ ಕ್ರಮ ಕೈಗೊಂಡರೆ ಬೇರೆ ರಾಜ್ಯಕ್ಕೆ ತೆರಳುತ್ತಾರೆ. ನಕ್ಸಲರ ಸಂಪೂರ್ಣ ನಿಗ್ರಹ ಆಗುವವರೆಗೂ ನಕ್ಸಲ್‌ ನಿಗ್ರಹ ಪಡೆಯನ್ನು ಉಳಿಸಿಕೊಳ್ಳುವುದು ಒಳಿತು ಎಂದು ಭಾವಿಸಿದ್ದೇವೆ. ಈ ಬಗ್ಗೆ ಚರ್ಚೆಯಾಗಿದೆ  ಎಂದು ಕಳೆದ ಜೂನ್‌ ನಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದರು.

click me!