ನೌಕಾಪಡೆ ಉಪ ಅಡ್ಮಿರಲ್ ಶ್ರೀಕಾಂತ್ ನಿಧನ| ಕಾರವಾರದ ಸೀಬರ್ಡ್ ಯೋಜನೆಯ ಪ್ರಧಾನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದ ಶ್ರೀಕಾಂತ್| ಶ್ರೀಕಾಂತ್ ನಿಧನಕ್ಕೆ ಸಂತಾಪ ಸೂಚಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್|
ನವದೆಹಲಿ(ಡಿ.16): ನೌಕಾ ಪಡೆಯ ಅತ್ಯಂತ ಹಿರಿಯ ಸಬ್‌ಮರೀನರ್ ಹಾಗೂ ಉಪ ಅಡ್ಮಿರಲ್ ಶ್ರೀಕಾಂತ್ ಕೊರೋನಾ ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.
ಕಾರವಾರದ ಸೀಬರ್ಡ್ ಯೋಜನೆಯ ಪ್ರಧಾನ ನಿರ್ದೇಶಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಡಿ.31ರಂದು ಅವರು ಸೇವೆಯಿಂದ ನಿವೃತ್ತಿ ಆಗಬೇಕಿತ್ತು. ಕೊರೋನಾ ಸೋಂಕು ತಗುಲಿದ್ದ ಕಾರಣ ಅವರನ್ನು ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
undefined
Deeply pained at the untimely and sudden demise of DG Seabird, Vice Admiral Srikant.
The MoD and the Indian Navy will always remember his stellar contributions and remarkable service to the nation.
My deepest condolences to his bereaved family and friends. Om Shanti!
ಭಾರತೀಯ ಸೇನೆ, ವಾಯು, ನೌಕಾಪಡೆ; 3ರಲ್ಲೂ ಸೇವೆ ಸಲ್ಲಿಸಿದ ಏಕೈಕ ಯೋಧನಿಗೆ ಹುಟ್ಟು ಹಬ್ಬದ ಸಂಭ್ರಮ!
ಭಾನುವಾರದಂದು ಅವರಿಗೆ ಕೊರೋನಾ ನೆಗೆಟಿವ್ ಆಗಿತ್ತು. ಆದರೆ, ಬಳಿಕ ಕಾಣಿಸಿಕೊಂಡ ಆರೋಗ್ಯ ಸಮಸ್ಯೆಯಿಂದಾಗಿ ಶ್ರೀಕಾಂತ್ ಅಸುನೀಗಿದ್ದಾರೆ. ಶ್ರೀಕಾಂತ್ ಅವರ ನಿಧನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.