ಮಲ್ಲೇಶ್ವರದಲ್ಲಿ ಯಶಸ್ವಿಯಾಗಿ ಜರುಗಿದ ರಾಷ್ಟ್ರೀಯ ಯುವ ದಿನ

Published : Jan 12, 2024, 08:00 PM IST
ಮಲ್ಲೇಶ್ವರದಲ್ಲಿ ಯಶಸ್ವಿಯಾಗಿ ಜರುಗಿದ ರಾಷ್ಟ್ರೀಯ ಯುವ ದಿನ

ಸಾರಾಂಶ

ಸ್ವಾಮಿ ವಿವೇಕಾನಂದರ 161ನೇ ಜಯಂತಿ ಅಂಗವಾಗಿ ಶುಕ್ರವಾರ ಮಲ್ಲೇಶ್ವರದಲ್ಲಿ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.

ಬೆಂಗಳೂರು (ಜ.12): ಸ್ವಾಮಿ ವಿವೇಕಾನಂದರ 161ನೇ ಜಯಂತಿ ಅಂಗವಾಗಿ ಮಲ್ಲೇಶ್ವರದಲ್ಲಿ ಇಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಯಶವಂತಪುರ ಬಳಿ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಪುಷ್ಪಾರ್ಚನೆ ಹಾಗೂ ಮಲ್ಲೇಶ್ವರ 18ನೇ ಅಡ್ಡ ರಸ್ತೆ ಬಳಿ ಇರುವ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಹಾಗೂ ಮೈಸೂರು ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಉಪಸ್ಥಿತಿಯಲ್ಲಿ ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದ ಬಳಿಕ ಚೌಡಯ್ಯ ಸ್ಮಾರಕ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಡಾ. ಸಿಎನ್ ಅಶ್ವಥ್ ನಾರಾಯಣ್ ಅವರು "ಯುವ ಸಮುದಾಯಕ್ಕೆ ಸ್ವಾಮಿ ವಿವೇಕಾನಂದರು ಸದಾ ಪ್ರೇರಣೆ. ನಮ್ಮ ಮಲ್ಲೇಶ್ವರಕ್ಕೂ ಹಾಗೂ ಸ್ವಾಮಿ ವಿವೇಕಾನಂದರ ಸಂಬಂಧ ಅನನ್ಯವಾದದ್ದು, IISC ಸ್ಥಾಪನೆಯಲ್ಲಿ ಮೈಸೂರು ರಾಜಮನೆತನ ಹಾಗೂ ವಿವೇಕಾನಂದರ ಕೊಡುಗೆ ಅಪಾರವಾಗಿದೆ." ಎಂದು ಹೇಳಿದರು.

"ದೇಶದ ಶಿಕ್ಷಣ, ತಂತ್ರಜ್ಞಾನ, ಆರೋಗ್ಯ ಸಹಿತ ಎಲ್ಲಾ ವಲಯಗಳಿಗೂ ಮೈಸೂರು ಸಂಸ್ಥಾನದ ಕೊಡುಗೆ ಅಪಾರವಾಗಿದೆ. ಇಂದಿನ ಮಹಾರಾಜರಾದ ಯದುವೀರ್ ಒಡೆಯರ್ ಅವರು ಸಹ ಶಿಕ್ಷಣ ಕ್ಷೇತ್ರದ ರಾಯಭಾರಿಗಳಾಗಿ ಹಾಗೂ ಸೈಬರ್ ಕ್ಷೇತ್ರದ ಸುಧಾರಣೆಗಾಗಿ ಕೊಡುಗೆ ನೀಡುತ್ತಿದ್ದಾರೆ" ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೈಸೂರು ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಮೈಸೂರು ರಾಜಮನೆತನ ಹಾಗೂ ಸ್ವಾಮಿ ವಿವೇಕಾನಂದರ ನಡುವಿನ ನಂಟಿನ ಕುರಿತು ಮಾಹಿತಿ ಹಂಚಿಕೊಂಡರು. ಹಾಗೆಯೇ, ಭಾರತೀಯ ವಿಜ್ಞಾನ ಸಂಸ್ಥೆ(IISC) ಸ್ಥಾಪನೆಗೆ ಸ್ವಾಮಿ ವಿವೇಕಾನಂದರು,  ಜೆ.ಆರ್.ಡಿ. ಟಾಟಾ ಅವರು ಹಾಗೂ ಮೈಸೂರು ಮಹಾರಾಣಿ ಕೆಂಪನಂಜಮ್ಮಣಿ ವಾಣಿ ವಿಲಾಸ ಸನ್ನಿಧಾನ ಅವರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಕಾರ್ಯಕ್ರಮದ ವಿಶೇಷ ಆಹ್ವಾನಿತ ಭಾಷಣಕಾರರಾಗಿ ಆಗಮಿಸಿದ ಮೈಂಡ್ ಕೋಚ್ ಇಯಾನ್ ಫರಿಯಾ ಅವರು ಯುವಜನತೆಗೆ ಜ್ಞಾನ ಹಾಗೂ ಕೌಶಲ್ಯದ ಜತೆ ಆತ್ಮವಿಶ್ವಾಸದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. "ವೈಫಲ್ಯ ಕಂಡಿರುವವರು ಯಶಸ್ಸಿನ ಮಾರ್ಗ ಹುಡುಕಿಕೊಳ್ಳಲು ಮನಸ್ಸಿನಲ್ಲೇ ಮಾರ್ಗವಿದೆ" ಎಂದು ಅವರು ಹೇಳಿದರು. ಶ್ರೇಷ್ಠ ಭಾರತ ನಿರ್ಮಾಣಕ್ಕೆ ಯುವಜನತೆಯ ಕೊಡುಗೆ ಬಹುಮುಖ್ಯವಾಗಿದ್ದು ಈ ದಿಶೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಕರೆ ನೀಡಿದರು.

ಇನ್ನೋರ್ವ ವಿಶೇಷ ಆಹ್ವಾನಿತ ಭಾಷಣಕಾರರಾಗಿ ಆಗಮಿಸಿದ ಅನ್ ಅಕಾಡೆಮಿಯ ಸಹ ಸಂಸ್ಥಾಪಕರು ಹಾಗೂ ಸಿಟಿಓ ಹಿಮೇಶ್‌ ಸಿಂಗ್‌ ಅವರು ಶಿಕ್ಷಣದಲ್ಲಿ ತಂತ್ರಜ್ಞಾನದ ಮಹತ್ವದ ಕುರಿತು ಮಾಹಿತಿ ಹಂಚಿಕೊಂಡರು. ಕೃತಕ ಬುದ್ಧಿಮತ್ತೆ(AI) ಮೂಲಕ ನಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಸಾಧ್ಯ ಹಾಗೂ ಚಾಟ್ ಜಿಪಿಟಿಯಂತಹ ತಂತ್ರಜ್ಞಾನದ ಮೂಲಕ ಯಾವುದೇ ವಿಷಯದ ಕುರಿತು ಕ್ಷಣ ಮಾತ್ರದಲ್ಲಿ ತಿಳಿಯಲು ಸಾಧ್ಯ ಎಂದು ಅವರು ಹೇಳಿದರು.

'ವಿವೇಕಾನಂದರು ಸಮಾನತಾವಾದಿಯಲ್ಲ, ಅವರು ನಮ್ಮವರಲ್ಲ..' ಚೇತನ್‌ ಅಹಿಂಸಾ ಟ್ವೀಟ್‌!

ಕ್ಯೂರ್ ಫುಡ್ಸ್ ಸಂಸ್ಥಾಪಕರು ಹಾಗೂ ಕ್ಯೂರ್ ಫಿಟ್ ಸಹ ಸಂಸ್ಥಾಪಕಾರದ ಅಂಕಿತ್ ನಗೋರಿ ಅವರು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ದೈನಂದಿನ ಜೀವನದಲ್ಲಿ ಆಹಾರ ಪದ್ಧತಿ ಹಾಗೂ ನಿತ್ಯ ಯೋಗದ ಬಗ್ಗೆ ಮಾಹಿತಿ ಹಂಚಿಕೊಂಡರು. ಮಲ್ಲೇಶ್ವರ ವ್ಯಾಪ್ತಿಯ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಉಪನ್ಯಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

National Youth Day 2024: ರಾಷ್ಟ್ರಕಾರ್ಯದ ಮಹಾ ಪ್ರೇರಣೆ ಸ್ವಾಮಿ ವಿವೇಕಾನಂದರು..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್