
ಬೆಂಗಳೂರು (ಜ.12): ರೇಸ್ ಕೋರ್ಸ್ ಬುಕ್ಕಿಂಗ್ ಕೌಂಟರ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಒಂದು ಕೋಟಿಗೂ ಅಧಿಕ ಹಣ ವಶಕ್ಕೆ ಪಡೆದಿದ್ದಾರೆ. ಜಿಎಸ್ ಟಿ ಕಟ್ಟದೆ ವಂಚನೆ, ನಿಗಧಿ ದರಗಳಿಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಹಿನ್ನೆಲೆ ರೇಸ್ ಕೋರ್ಸ್ ಬುಕ್ಕಿ ಕೌಂಟರ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಗ್ರಾಹಕನಿಂದ ಅಧಿಕ ಹಣ ಪಡೆದು ಕಡಿಮೆ ಮೊತ್ತದ ಟಿಕೆಟ್ ನೀಡಿ ಸರ್ಕಾರಕ್ಕೆ ವಂಚನೆ ಮಾಡಿರುವ ಆರೋಪದ ಬೆನ್ನಲ್ಲೇ ಈ ದಾಳಿ ನಡೆದಿದೆ. ಜಿಎಸ್ ಟಿ ಕಟ್ಟದೆ ವಂಚನೆ ಮಾಡಿದ ಆರೋಪ ಹಿನ್ನೆಲೆ ದಾಳಿ ನಡೆದಿದ್ದು, ಬುಕ್ಕಿಂಗ್ ಕೌಂಟರ್ ಗಳನ್ನು ಸಿಸಿಬಿ ಪೊಲೀಸರು ಲಾಕ್ ಮಾಡಿದ್ದಾರೆ. ಜೊತೆಗೆ ಒಂದೊಂದು ಕೌಂಟರ್ ಗೂ ಸಿಬ್ಬಂದಿಗಳಿಂದ ಭದ್ರತೆ ಒದಗಿಸಲಾಗಿದೆ. ಬರೋಬ್ಬರಿ 3 ಕೋಟಿ 47 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ.
ಅಯೋಧ್ಯಾ ರಾಮ ಮಂದಿರಕ್ಕೆ ಸೂರ್ಯ ತಿಲಕ ಯಂತ್ರ ದಾನವಾಗಿ ನೀಡಿದ ಬೆಂಗಳೂರು ಕಂಪನಿ!
ಈ ಪಟ್ಟಿಯಲ್ಲಿರುವ ಕೌಂಟರ್‌ಗಳಿಗೆ ದಾಳಿ ನಡೆದಿದೆ.
ಎಎ ಅಸ್ಸೋಸಿಯೇಟ್ಸ್,ಸಾಮ್ರಾಟ್ ಅಂಡ್ ಕೋ.
ನೀಲಕಂಠ,ಮೆಟ್ರೊ ಅಸ್ಸೋಸಿಯೇಟ್ಸ್,ಶೆಟ್ಟಿ ಅಸ್ಸೋಸಿಯೇಟ್ಸ್
ಮೇಘನ ಎಂಟರ್ ಪ್ರೈಸಸ್,ಮಂಜು ಅಸ್ಸೋಸಿಯೇಟ್ಸ್
ಮಾರುತಿ ಎಂಟರ್ ಪ್ರೈಸಸ್,ಆದಿತ್ಯ ಎಂಟರ್ ಪ್ರೈಸಸ್,
ಪರಸ್ ಅಂಡ್ ಕೋ,ಬನಶಂಕರಿ ಎಂಟರ್ ಪ್ರೈಸಸ್
ಶ್ರೀಹರಿ ಎಂಟರ್ ಪ್ರೈಸಸ್,ತೇಜಸ್ವಿನಿ ಎಂಟರ್ ಪ್ರೈಸಸ್
ಸೂರ್ಯ ಅಂಡ್ ಕೋ, ಹೆಚ್ಎನ್ಎಸ್ ಅಂಡ್ ಕೋ,ಸಾಯಿ ರತನ್,ವಿಕ್ರಾಂತ್ ಎಂಟರ್ ಪ್ರೈಸಸ್,
ನಿರ್ಮಲ್ ಅಂಡ್ ಕೋ,ಶ್ರೀರಾಮ ಎಂಟರ್ ಪ್ರೈಸಸ್,
ಚಮುಂಡೇಶ್ವರಿ ಎಂಟರ್ ಪ್ರೈಸಸ್,ಆರ್.ಆರ್ ಎಂಟರ್ ಪ್ರೈಸಸ್
ರಾಯಲ್ ಇಎನ್ ಟಿಪಿ,ಆರ್.ಕೆ.ಎಂಟರ್ ಪ್ರೈಸಸ್
ಶ್ರೀವಾರಿ ಅಂಡ್ ಕಂಪನಿ,ಕಾರ್ತಿಕ್ ಅಂಡ್ ಕಂಪನಿ
ಅಮೃತಾಯ ಕೌಂಟರ್ ಗಳಲ್ಲಿ ಪರಿಶೀಲನೆ ನಡೆಸ್ತಿರುವ ಸಿಸಿಬಿ ಪೊಲೀಸರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ