ಭಾರತೀಯ ವೈದ್ಯಕೀಯ ಪದ್ಧತಿಗಳ ವೈದ್ಯರ ಮೇಲಿನ ದಾಳಿ ಖಂಡಿಸಿದ NIMA

Published : Jan 17, 2024, 07:21 PM IST
ಭಾರತೀಯ ವೈದ್ಯಕೀಯ ಪದ್ಧತಿಗಳ ವೈದ್ಯರ ಮೇಲಿನ ದಾಳಿ ಖಂಡಿಸಿದ NIMA

ಸಾರಾಂಶ

ಭಾರತೀಯ ವೈದ್ಯಕೀಯ ಪದ್ಧತಿಗಳ ವೈದ್ಯರನ್ನು ನಕಲಿ ವೈದ್ಯರು ಎಂದು ಬಿಂಬಿಸುತ್ತಿರುವ ವಿಚಾರ ದುಃಖದ ಸಂಗತಿ ಎಂದು ನ್ಯಾಷನಲ್‌ ಇಂಟಿಗ್ರೇಟೆಡ್‌ ಮೆಡಿಕಲ್‌ ಅಸೋಸಿಯೇಷನ್‌ ಖಂಡಿಸಿದೆ.  

ಬೆಂಗಳೂರು (ಜ.17): ಭಾರತೀಯ ವೈದ್ಯಕೀಯ ಪದ್ಧತಿಗಳ ವೈದ್ಯರನ್ನು ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳಲ್ಲಿ ನಕಲಿ ವೈದ್ಯರು ಎಂದು ಬಿಂಬಿಸುತ್ತಿರುವುದು ದುಃಖದ ವಿಚಾರ ಎಂದು ನ್ಯಾಷನಲ್‌ ಇಂಟಿಗ್ರೇಟೆಡ್‌ ಮೆಡಿಕಲ್‌ ಅಸೋಸಿಯೇಷನ್‌ ಹೇಳಿದೆ. ಕೆಲವು ಸತ್ಯ ಸಂಗತಿಗಳನ್ನು ನಿಮ್ಮೆಲ್ಲರ ಗಮನಕ್ಕೆ ತರಲು ನಾವು ಬಯಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಕೆಪಿಎಂಸಿ ಅಡಿಯಲ್ಲಿ ವೈದ್ಯಕೀಯ ಸಂಸ್ಥೆಗಳ ತಪಾಸಣೆ ಮಾಡಿ ಕೆಲವು ನ್ಯೂನ್ಯತೆಗಳಿಗೆ ವೈದ್ಯರಿಗೆ ನೋಟಿಸ್ ನೀಡಿರುವ ವಿಚಾರದಲ್ಲಿ ಕೆಲವು ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳು ನಕಲಿ ವೈದ್ಯರ ಕ್ಲಿನಿಕ್ ಮೇಲೆ ದಾಳಿ ಎನ್ನುವ ಶೀರ್ಷಿಕೆಯಲ್ಲಿ ಸುದ್ದಿ ಪ್ರಸಾರ ಮಾಡಿದ್ದರು. ಆದರೆ, ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಅಸೋಸಿಯೇಷನ್‌ ಹೇಳಿದೆ.

ಬುಧವಾರ ಬೆಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ NIMA ಅಧ್ಯಕ್ಷರಾದ ಡಾ. ಸಿದ್ದಪ್ಪ ಮಾಗರಿ, ಕಾನೂನು ಅಲಹೆಗಾರರಾದ ಗುರುರಾಜ್ ಎಂ.ಬಿ, ನಿಮಾ ಪ್ರಧಾನ ಕಾರ್ಯದರ್ಶಿ ಡಾ. ನಾನು ಮೆನನ್‌, ನಿಮಾ ಬೆಂಗಳೂರು ಅಧ್ಯಕ್ಷರಾದ ಶಿವಕುಮಾರ್‌ ಪಾಲಭಾಮಟ್, ಭಾರತೀಯ ವೈದ್ಯಕೀಯ ಪದ್ಧತಿಗಳ ವೈದ್ಯರು ಅಂಗೀಕೃತ ವಿಶ್ವವಿದ್ಯಾಲಯದಿಂದ 5 ವರ್ಷದ ಪದವಿ ಪಡೆದಿರುತ್ತಾರೆ ಮತ್ತು ಕೆಪಿಎಂಇ ಅಡಿಯಲ್ಲಿ ನೋಂದಾವಣಿ ಹೊಂದಿದ್ದು ತಮ್ಮ ವೈದ್ಯ ವೃತ್ತಿಯನ್ನು ನಡೆಸುತ್ತಿರುತ್ತಾರೆ. ಭಾರತೀಯ ವೈದ್ಯಕೀಯ ಪದ್ಧತಿಗಳ ವೈದ್ಯಕೀಯ ಪದವಿಗಳಾದ ಬಿಎ ಎಂಎಸ್ ಬಿ ಯು,  ಎಂ ಎಸ್ ಬಿ ಎಸ್ ಎಂ ಎಸ್ ಎಲ್ಲಾ ಪದವಿಗಳ ಪಠ್ಯಕ್ರಮ ಮತ್ತು ಪದವಿಗಳ ರೂಪುರೇಷೆ ನಿರ್ಧಾರ ಮಾಡುತ್ತದೆ.

ಎನ್‌ಸಿಐಎಂಸಿಎಮ್ ದೆಹಲಿ ಅದನ್ನು ಭಾರತಾದ್ಯಂತ ಎಲ್ಲಾ ವಿಶ್ವವಿದ್ಯಾನಿಲಯಗಳನ್ನು ಮಾನ್ಯ ಮಾಡಿ ಪದವಿ ಪ್ರದಾನ ಮಾಡುತ್ತದೆ ಎಂದು ಹೇಳಿದ್ದಾರೆ. ಒಂದು ಭಾರತೀಯ ರಾಜ್ಯ ಈ ಕುರಿತಾಗಿ ಅಧಿಕೃತ ಪತ್ರವನ್ನು ಹೊರಡಿಸಿದ್ದು,  ಅದರಲ್ಲಿ ಭಾರತೀಯ ವೈದ್ಯ ಪದ್ಧತಿಗಳ ವೈದ್ಯರು ಏನು ಮತ್ತು ಹೇಗೆ ತಮ್ಮ ವೈದ್ಯ ವೃತ್ತಿಯನ್ನು ನಡೆಸಬೇಕು ಎಂದು ಮಾಹಿತಿ ನೀಡಿದ್ದಾರೆ. ಈ ವೈದ್ಯರುಗಳು ಅವರ ಪದವಿಗಳ ಅಡಿಯಲ್ಲಿ ಮಾತ್ರ ಕಲಿತ ಪಠ್ಯಕ್ರಮ ಮತ್ತು ತಮಗೆ ದೊರೆತಂತಹ ತರಬೇತಿ ಆಧರಿಸಿ ಚಿಕಿತ್ಸೆ ಮಾಡುವುದಕ್ಕೆ ಮಾನ್ಯತೆ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಕೊಲ್ಕತ್ತಾ ಡ್ಲೂಪಿಕೇಟ್ ಡಾಕ್ಟರ್ಸ್ ಹಾವಳಿ..! ಕವರ್ ಸ್ಟೋರಿಯಲ್ಲಿ ನಕಲಿ ವೈದ್ಯರ ಬಣ್ಣಬಯಲು..!

ಈಗಾಗಲೇ NIMA( National intigreted medical association) ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ರಾಜ್ಯ ಆರೋಗ್ಯ ಸಚಿವರು ದಿನೇಶ್ ಗುಂಡುರಾವ್ ಅವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಗಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕಾಗಿದ್ದು, ಆಯುಷ್ ವೈದ್ಯರಿಗೂ ಮಾನ್ಯತೆ ಕೊಡಬೇಕಾಗಿ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಕ್ಲಿನಿಕ್‌ಗಳ ಮೇಲೆ ದಾಳಿ: ಕೊಟ್ಟೂರಿನಲ್ಲಿ ಇಬ್ಬರು ನಕಲಿ ವೈದ್ಯರು ವಶಕ್ಕೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ