ಚಿತ್ರಮಂದಿರದೊಳಗೆ ಎದ್ದು ನಿಂತು ಗೌರವ ಸೂಚಿಸದೇ ರಾಷ್ಟ್ರಗೀತೆಗೆ ಮುಸ್ಲಿಂ ದಂಪತಿ ಅಪಮಾನ ಮಾಡಿದ ಘಟನೆ ಮೈಸೂರಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ನಡೆದಿದೆ.
ಮೈಸೂರು (ಜು.22): ಚಿತ್ರಮಂದಿರದೊಳಗೆ ಎದ್ದು ನಿಂತು ಗೌರವ ಸೂಚಿಸದೇ ರಾಷ್ಟ್ರಗೀತೆಗೆ ಮುಸ್ಲಿಂ ದಂಪತಿ ಅಪಮಾನ ಮಾಡಿದ ಘಟನೆ ಮೈಸೂರಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ನಡೆದಿದೆ.
ನಿನ್ನೆ ರಾತ್ರಿ 9:55 ಸಮಯದಲ್ಲಿ ಗೋಕುಲಂ ರಸ್ತೆಯಲ್ಲಿರುವ ಪ್ರತಿಷ್ಠಿತ ಬಿಎಮ್ ಹ್ಯಾಬಿಟೆಟ್ ಮಾಲ್‌ನ ಡಿಆರ್‌ಸಿ ಚಿತ್ರಮಂದಿರದಲ್ಲಿ ಬ್ಯಾಡ್ ನ್ಯೂಸ್ ಚಿತ್ರ ಪ್ರದರ್ಶನ ವೇಳೆ ಚಿತ್ರ ಪ್ರಾರಂಭಕ್ಕೆ ಮುನ್ನ ರಾಷ್ಟ್ರಗೀತೆ ಹಾಡಿಗೆ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ. ಆದರೆ ಎದ್ದು ನಿಲ್ಲದೆ ಕುಳಿತಿದ್ದ ಮುಸ್ಲಿಂ ದಂಪತಿ. ಇದನ್ನ ಹಿಂದೂ ದಂಪತಿ ಪ್ರಶ್ನಿಸಿದ್ದಾರೆ. ಈ ವಿಚಾರ ಮಾತಿಗೆ ಮಾತು ಬೆಳೆದು ಎರಡು ಕುಟುಂಬಗಳು ನಡುವೆ ಗಲಾಟೆಯಾಗಿದೆ. ಗಲಾಟೆ ಜೋರು ಆಗುತ್ತಿದ್ದಂತೆ ಮಾಲ್ ಬಳಿ ಜಮಾಯಿಸಿದ ಮುಸ್ಲಿಂ ಕುಟುಂಬ ಸದಸ್ಯರು. ಗಲಾಟೆ ವಿಕೋಪಕ್ಕೆ ತಿರುಗುವ ಮೊದಲೇ ಸ್ಥಳಕ್ಕೆ ಜಯಲಕ್ಷ್ಮಿಪುರಂ ಪೊಲೀಸರು ಬಂದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
undefined
ಆನ್‌ಲೈನಲ್ಲಿ ಮಸಾಜ್‌ಗೆ ಬುಕ್ ಮಾಡಿ ಯುವತಿಯರಸುಲಿಗೆ ಮಾಡುತ್ತಿದ್ದ ನಕಲಿ ಪೊಲೀಸ್ ಬಂಧನ
ಸಿಸಿಟಿವಿ ದೃಶ್ಯ ಪರಿಶೀಲನೆ:
ರಾಷ್ಟ್ರಗೀತೆ ಮುಸ್ಲಿಂ ದಂಪತಿ ಅಗೌರವ ತೋರಿರುವ ಪ್ರಕರಣ ಸಂಬಂಧ ಡಿಆರ್‌ಸಿ ಚಿತ್ರಮಂದಿರಕ್ಕೆ ಜಯಲಕ್ಷ್ಮಿ ಪುರಂ ಪೊಲೀಸರು ಭೇಟಿ ನೀಡಿ ಚಿತ್ರಮಂದಿರದ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿ, ಚಿತ್ರಮಂದಿರದ ಮಾಲೀಕರಿಂದ ಘಟನೆ ಸಂಪೂರ್ಣ ಮಾಹಿತಿ ಪಡೆದುಕೊಂಡಿರುವ ಪೊಲೀಸರು. ಚಿತ್ರಮಂದಿರದ ಸಿಸಿಟಿವಿ ದೃಶ್ಯಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಸದ್ಯ ಘಟನೆ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು.