ಪ್ಯಾರಾ ಒಲಂಪಿಕ್‌ನಲ್ಲಿ ಚಿನ್ನ ಗೆದ್ದ ಮೂಡಿಗೆರೆ ತಾಲೂಕಿನ ಗುಡ್ನಳ್ಳಿ ಅಂಧ ಯುವತಿ ರಕ್ಷಿತಾ ರಾಜುಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು. ಚೀನಾದ ಹಾಂಗೌಜ್ ನಲ್ಲಿ ನಡೆದಿದ್ದ ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲಿ 1500 ಮೀಟರ್ ಓಟವನ್ನ 5.21 ಸೆಕೆಂಡ್ ಗೆ ಓಡಿ ಸಾಧನೆ ಮಾಡಿದ ಚಿನ್ನದ ಹುಡುಗಿ ರಕ್ಷಿತಾ ರಾಜು. ಕಳೆದ ವರ್ಷ ಪ್ಯಾರಿಸ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ 5ನೇ ಸ್ಥಾನ ಪಡೆದಿದ್ದ ರಕ್ಷಿತಾ.
ಚಿಕ್ಕಮಗಳೂರು (ನ.2): ಪ್ಯಾರಾ ಒಲಂಪಿಕ್‌ನಲ್ಲಿ ಚಿನ್ನ ಗೆದ್ದ ಮೂಡಿಗೆರೆ ತಾಲೂಕಿನ ಗುಡ್ನಳ್ಳಿ ಅಂಧ ಯುವತಿ ರಕ್ಷಿತಾ ರಾಜುಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.
ಚೀನಾದ ಹಾಂಗೌಜ್ ನಲ್ಲಿ ನಡೆದಿದ್ದ ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲಿ 1500 ಮೀಟರ್ ಓಟವನ್ನ 5.21 ಸೆಕೆಂಡ್ ಗೆ ಓಡಿ ಸಾಧನೆ ಮಾಡಿದ ಚಿನ್ನದ ಹುಡುಗಿ ರಕ್ಷಿತಾ ರಾಜು. ಕಳೆದ ವರ್ಷ ಪ್ಯಾರಿಸ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ 5ನೇ ಸ್ಥಾನ ಪಡೆದಿದ್ದ ರಕ್ಷಿತಾ.
ನಮ್ಮ ಸರ್ಕಾರ ಕ್ರೀಡಾಳುಗಳ ಪರವಾಗಿದೆ: ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ಮೋದಿಗೆ ವಿಶೇಷ ಗಿಫ್ಟ್:
ದೆಹಲಿಯಲ್ಲಿ ಪ್ಯಾರಾ ಒಲಂಪಿಕ್ ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಮೋದಿ ಅಭಿನಂದನೆ. ಈ ವೇಳೆ ಪ್ರಧಾನಿ ಮೋದಿಗೆ ಭಾರತದಲ್ಲೇ ಸಿಗದಂತಹ ಗಿಫ್ಟ್ ಕೊಟ್ಟ ಕಾಫಿನಾಡ ಯುವತಿ ರಕ್ಷಿತಾ. ತನ್ನ ಓಟದ ಪಾರ್ಟನರ್ ಟಿಟ್ಟರ್ ಅನ್ನ ಮೋದಿಗೆ ನೀಡಿದ ಯುವತಿ. ಎರಡು ಚಿನ್ನದ ಮೆಡಲ್ ಗೆದ್ದ ಟಿಟ್ಟರ್ ನ ಮೋದಿಗೆ ನೀಡಿದ ಅಂಧ ಓಟಗಾರ್ತಿ. ಗೈಡ್ ಜೊತೆ ಸಮಯೋಚಿತವಾಗಿ ಓಡಲು ಸಹಾಯ ಮಾಡುವ ಟಿಟ್ಟರ್. ಚೀನಾದಿಂದ ತಂದಿದ್ದ ಟಿಟ್ಟರ್ ನ ಮೋದಿಗೆ ಗಿಫ್ಟ್.
ಎರಡೂ ಕೈಗಳಿಲ್ಲದ ಆರ್ಚರಿ ಪಟು ಶೀತಲ್ ದೇವಿಗೆ 'ಮಹೀಂದ್ರಾ' ಕಾರು ಗಿಫ್ಟ್..!
ರಕ್ಷಿತಾಳ ಉಡುಗೊರೆ ಸ್ವೀಕರಿಸಿ ಸಂತಸಪಟ್ಟ ಪ್ರಧಾನಿ ನರೇಂದ್ರ ಮೋದಿ. ಮುಂದೆಯೂ ಪ್ಯಾರಾ ಒಲಂಪಿಕ್ ನಲ್ಲಿ ಚಿನ್ನ ಗೆಲ್ಲುವಂತೆ ಹಾರೈಸಿದ ಪ್ರಧಾನಿ ಮೋದಿ. ಈ ವೇಳೆ ಪ್ರಧಾನಿ ಭೇಟಿಯಿಂದ ಶುಭ ಹಾರೈಕೆಯಿಂದ ಸಂತಸ ಪಟ್ಟ ಚಿನ್ನದ ಹುಡುಗಿ ರಕ್ಷಿತಾ