ಇಂದಿನಿಂದ ಹಾಲು, ಮೊಸರು ದರ ಏರಿಕೆ; ಪರಿಷ್ಕೃತ ದರ ಇಲ್ಲಿದೆ

By Kannadaprabha NewsFirst Published Aug 1, 2023, 6:41 AM IST
Highlights

ನಂದಿನಿಯ ಎಲ್ಲಾ ಮಾದರಿಯ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 3 ರು. ಹೆಚ್ಚಳ ಮಾಡಲಾಗಿದ್ದು, ಪರಿಷ್ಕೃತ ದರವು ಮಂಗಳವಾರದಿಂದ ಜಾರಿಗೆ ಬಂದಿದೆ.

ಬೆಂಗಳೂರು (ಆ.1) : ನಂದಿನಿಯ ಎಲ್ಲಾ ಮಾದರಿಯ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 3 ರು. ಹೆಚ್ಚಳ ಮಾಡಲಾಗಿದ್ದು, ಪರಿಷ್ಕೃತ ದರವು ಮಂಗಳವಾರದಿಂದ ಜಾರಿಗೆ ಬಂದಿದೆ.

ಹೆಚ್ಚಾಗುತ್ತಿರುವ ಹಾಲು ಉತ್ಪಾದನೆ ಮತ್ತು ಹಾಲು ಸಂಸ್ಕರಣಾ ವೆಚ್ಚಗಳು ಮತ್ತು ರಾಜ್ಯದಲ್ಲಿ ಹೈನೋದ್ಯಮವನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 3 ರು. ಹೆಚ್ಚಳ ಮಾಡಲಾಗಿದೆ. ಹೀಗಾಗಿ ಹೋಮೋಜಿನೈಸ್ಡ್‌ ಟೋನ್‌್ಡ ಹಾಲು ಪ್ರತಿ ಲೀಟರ್‌ಗೆ 43 ರು. ಇರಲಿದ್ದು, ಅರ್ಧ ಲೀಟರ್‌ ಹಾಲಿಗೆ 10 ಎಂಎಲ್‌ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ 22 ರು.ನಂತೆ ಮಾರಾಟ ಮಾಡಲಾಗುತ್ತದೆ ಎಂದು ಕೆಎಂಎಫ್‌ ತಿಳಿಸಿದೆ.

Latest Videos

ತಿರುಪತಿ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ: ಕಾರಣ ಬಿಚ್ಚಿಟ್ಟ ಕೆಎಂಎಫ್‌

ಕೆಎಂಎಫ್‌ ಮತ್ತು ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಪ್ರತಿ ಲೀಟರ್‌ ಹಾಲು ದರವನ್ನು 5 ರು. ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಪಶು ಆಹಾರ, ಮೇವು, ವಿದ್ಯುತ್‌, ಸಾಗಾಣಿಕೆ ವೆಚ್ಚದ ಹೆಚ್ಚಳದಿಂದ ಹೈನೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಖಾಸಗಿ ಸಂಸ್ಥೆಗಳು ರೈತರಿಗೆ ಹೆಚ್ಚಿನ ದರ ಕೊಟ್ಟು ಹಾಲು ಖರೀದಿಸುತ್ತಿವೆ. ಹಾಗಾಗಿ ರೈತರು ಖಾಸಗಿ ಸಂಸ್ಥೆಗಳಿಗೆ ಹಾಲು ಹಾಕುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಸಮರ್ಥವಾಗಿ ಪೈಪೋಟಿ ನಡೆಸಲು ಸಾಧ್ಯವಾಗುತ್ತಿಲ್ಲ. ಬೇಡಿಕೆಗೆ ತಕ್ಕಂತೆ ಒಕ್ಕೂಟಗಳಿಗೆ ಹಾಲು ಸಂಗ್ರಹಣೆಯಾಗುತ್ತಿಲ್ಲ ಎಂದು ತಮ್ಮ ಅಳಲನ್ನು ಸರ್ಕಾರದ ಮುಂದಿಟ್ಟಿದ್ದವು.

ಈ ಹಿನ್ನೆಲೆಯಲ್ಲಿ ಕಳೆದೊಂದು ವಾರದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಎಂಎಫ್‌ ಮತ್ತು ಹಾಲು ಒಕ್ಕೂಟಗಳ ಸಭೆ ನಡೆಸಿ 3 ರು. ದರ ಏರಿಕೆಗೆ ಒಪ್ಪಿಗೆ ನೀಡಿದ್ದರು. ಆಗಸ್ಟ್‌ 1ರಿಂದ ಪರಿಷ್ಕೃತ ದರ ಜಾರಿಗೊಳಿಸಬೇಕು. ಹಾಲಿನಿಂದ ಬಂದ ಹೆಚ್ಚುವರಿ 3 ರು.ಗಳನ್ನು ರೈತರಿಗೆ ನೀಡಬೇಕು ಎಂದು ಸೂಚನೆ ನೀಡಿದ್ದರು. ಈ ಬಗ್ಗೆ ಸಚಿವ ಸಂಪುಟದಲ್ಲೂ ಒಪ್ಪಿಗೆ ಪಡೆಯಲಾಗಿದ್ದು, ಇಂದಿನಿಂದ ನೂತನ ದರವು ಜಾರಿಗೆ ಬಂದಿದೆ.

 

ನಾಳೆಯಿಂದ ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ ; ಕಾಫಿ ಟೀ ಬೆಲೆಯೂ ಹೆಚ್ಚಳ!

ಹಾಲಿನ ಹೊಸ ದರ

ಹಾಲಿನ ವಿಧ (ಪ್ರತಿ ಲೀಟರ್‌) ಹಿಂದಿನ ದರ ಪರಿಷ್ಕೃತ ದರ

  • ಟೋನ್‌್ಡ ಹಾಲು(ಹಳದಿ) 39 ರು. 42 ರು.
  • ಹೋಮೋಜಿನೈಸ್ಡ್‌ ಟೋನ್‌್ಡ (ನೀಲಿ) 40 ರು. 43 ರು.
  • ಹಸುವಿನ ಹಾಲು(ಹಸಿರು) 43 ರು. 46 ರು.
  • ಶುಭಂ (ಕೇಸರಿ)/ಸ್ಪೆಷಲ್‌ ಹಾಲು 45 ರು. 48 ರು.
  • ಮೊಸರು, ಪ್ರತಿ ಕೆಜಿಗೆ 47 ರು. 50 ರು.
  • ಮಜ್ಜಿಗೆ, ಪ್ರತಿ 200 ಮಿಲಿ ಪೊಟ್ಟಣಕ್ಕೆ 8 ರು. 9 ರು.
click me!