ತಾವು ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಡಿಕೆಶಿ - ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಾಗಾದರೆ ಒಕ್ಕಲಿಗರಿಗೆ, ಲಿಂಗಾಯತರಿಗೆ ಕೊಟ್ಟಿರುವ ಮೀಸಲಾತಿ ಹೆಚ್ಚಳವನ್ನೂ ರದ್ದು ಮಾಡುತ್ತೀರಾ? ಎಸ್‌ಸಿಗೆ ಶೇ.15ರಿಂದ ಶೇ.17ಕ್ಕೆ, ಎಸ್ಟಿಗೆ ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿದ್ದನ್ನೂ ರದ್ದು ಮಾಡುತ್ತೀರಾ? ಎಂದು ಪ್ರಶ್ನಿಸಿದ ಕೋಟ
ಉಡುಪಿ(ಏ.10): ಗುಜರಾತ್‌ನಿಂದ ಅಮೂಲ್ ಬಂದರೆ ನಂದಿನಿ ಬ್ರ್ಯಾಂಡ್‌ಗೆ ಯಾವುದೇ ತೊಂದರೆ ಇಲ್ಲ. ಸಿದ್ದರಾಮಯ್ಯ ಹಾಗೂ ಸಿಎಂ ಇಬ್ರಾಹಿಂ ರಾಜಕೀಯಕ್ಕಾಗಿ ರೈತರ ದಾರಿ ತಪ್ಪಿಸುತ್ತಿದ್ದಾರೆ ಎಂದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಭಾನುವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಮಾರಾಟವಾಗುವ ಬ್ರ್ಯಾಂಡ್ ನಂದಿನಿಯ ನಮ್ಮ ರಾಜ್ಯದಲ್ಲಿ ಅಗಾಧ ವ್ಯವಹಾರ ನಡೆಸುತ್ತಿದೆ. ಜೊತೆಗೆ ಬೇರೆ 8 ರಾಜ್ಯಗಳ ಬ್ರ್ಯಾಂಡ್‌ಗಳು ನಮ್ಮಲ್ಲಿ ಮಾರಾಟ ಆಗುತ್ತಿವೆ, ಆದರೂ ನಂದಿನಿಗೆ ಸರಿಗಟ್ಟಲಾಗಿಲ್ಲ. ಅಮೂಲ್ ಅಥವಾ ಬೇರೆ ಯಾವುದೇ ಬ್ರ್ಯಾಂಡ್ ಬಂದರೂ ನಮ್ಮ ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ. ನಂದಿನಿ ಬ್ರ್ಯಾಂಡ್ ಮೇಲೆ ಯಾವುದೇ ಪರಿಣಾಮ ಆಗದು ಎಂದರು.
undefined
Amul Vs Nandini: ಅಮುಲ್ ಕಂಪನಿಯ ಏಕೈಕ ಸ್ಪರ್ಧಿ ನಂದಿನಿ ಬ್ರಾಂಡ್ ಮುಗಿಸಲು ಕೇಂದ್ರ ಸಂಚು: ಎಚ್‌ಡಿಕೆ ಸರಣಿ ಟ್ವೀಟ್
ಹೆಚ್ಚಿಸಿದ ಮೀಸಲಾತಿಯನ್ನೂ ರದ್ದು ಮಾಡ್ತೀರಾ?:
ತಾವು ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಡಿಕೆಶಿ - ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಾಗಾದರೆ ಒಕ್ಕಲಿಗರಿಗೆ, ಲಿಂಗಾಯತರಿಗೆ ಕೊಟ್ಟಿರುವ ಮೀಸಲಾತಿ ಹೆಚ್ಚಳವನ್ನೂ ರದ್ದು ಮಾಡುತ್ತೀರಾ? ಎಸ್‌ಸಿಗೆ ಶೇ.15ರಿಂದ ಶೇ.17ಕ್ಕೆ, ಎಸ್ಟಿಗೆ ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿದ್ದನ್ನೂ ರದ್ದು ಮಾಡುತ್ತೀರಾ? ಎಂದು ಕೋಟ ಪ್ರಶ್ನಿಸಿದರು.
ಅಲ್ಪಸಂಖ್ಯಾತರ ಮೀಸಲಾತಿಯನ್ನು ಮರು ಹಂಚಿಕೆ ಮಾಡಿ ಆರ್ಥಿಕವಾಗಿ ಬಡವರಿಗೆ ನೀಡಿದ್ದೇವೆ. ಇದನ್ನೂ ಟೀಕಿಸಿದ್ದಾರೆ. ವೈದ್ಯನ ಮಗ ವೈದ್ಯನಾಗುವುದು, ಎಂಜಿನಿಯರ್ ಮಗ ಎಂಜಿನಿಯರ್ ಆಗುವುದು ಸಹಜ. ಆದರೆ ಚರಂಡಿ ತೊಳೆಯುವವನ ಮಗ ಡಾಕ್ಟರ್, ಎಂಜಿನಿಯರ್ ಆಗೋದು ಯಾವಾಗ? ಎಂದು ಪ್ರಶ್ನಿಸಿದರು.
ಕೆಎಂಎಫ್‌ಗೆ ಸಡ್ಡು: ರಾಜ್ಯದಲ್ಲಿ ಅಮುಲ್ ಹೋಮ್ ಡೆಲಿವರಿ!
ಎರಡು ದಿನದಲ್ಲಿ ಅಭ್ಯರ್ಥಿಗಳ ಪಟ್ಟಿ: ಬೇರೆಲ್ಲ ಪಕ್ಷಗಳು ಅವರವರ ಮುಖಂಡರ ಮೂಗಿನ ನೇರಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿವೆ. ಆದರೆ ಬಿಜೆಪಿ ಆಯಾ ಕ್ಷೇತ್ರಗಳ ಕಾರ್ಯಕರ್ತರ ಭಾವನೆಗಳನ್ನು ಕೇಳಿ ತೀರ್ಮಾನಿಸುತ್ತಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಎರಡು ದಿನಗಳಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಬದಲಾವಣೆ ಆಗುತ್ತದೆ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ರಾಜಕೀಯದ ಇತಿಹಾಸದಲ್ಲಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿದು ಮಾದರಿಯಾಗಿದ್ದಾರೆ. ನಿವೃತ್ತಿಯಾದರೂ ಪಾರ್ಟಿಗೆ ಬೇಕಾದ ಕೆಲಸ ಮಾಡುವುದಾಗಿ ಹೇಳಿದ್ದು, ಅವರ ಬೆಂಬಲ ಪಕ್ಷಕ್ಕೆ ಇರುತ್ತದೆ ಎಂದರು.ಹಾಲಾಡಿ ಅವರ ನಿರ್ಧಾರದಿಂದ ಕುಂದಾಪುರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಒಂದಿಷ್ಟುಬದಲಾವಣೆ ಆಗಬಹುದು. ಅಭ್ಯರ್ಥಿಗಳ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಏನೇ ಬದಲಾವಣೆ ಇದ್ದರೂ ಕಾರ್ಯಕರ್ತರ ಅಭಿಪ್ರಾಯದಂತೆಯೇ ನಡೆಯಲಿದೆ ಎಂದರು.