
ನಂದಿನಿ ತುಪ್ಪಕ್ಕೆ ದೇಶದೆಲ್ಲೆಡೆ ಭಾರಿ ಡಿಮ್ಯಾಂಡ್ ಇದ್ದು, ಟಿಟಿಡಿ ಈ ಸಲ ಹೆಚ್ಚಿಗೆ ತುಪ್ಪವನ್ನು ಕೇಳಿದ್ದಾರೆ ಎಂದು ಸಚಿವ ಕೆ. ವೆಂಕಟೇಶ್ ಹೇಳಿದರು.
ಚಾಮರಾಜನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ನಾವು ಕೂಡ 50 ರುಪಾಯಿ ಹೆಚ್ಚಿಗೆ ಮಾಡಿ ತುಪ್ಪವನ್ನು ನೀಡುತ್ತಿದ್ದೇವೆ, ಈ ಹಿಂದೆ ಹೆಚ್ಚಿಗೆ ಲಾಭ ಇರ್ಲಿಲ್ಲ ಈಗ ಸೇಲ್ಸ್ ಚೆನ್ನಾಗಿದೆ. ಕೇವಲ ನಂದಿನಿ ತುಪ್ಪಕ್ಕೆ ಅಷ್ಟೇ ಅಲ್ಲ ನಂದಿನಿ ಬ್ರಾಂಡ್ ಹಾಗೂ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.
ಈ ತಿಂಗಳ ಕೊನೆಯಲ್ಲಿ ಸಭೆ ಮಾಡುತ್ತಿದ್ದು, ಬೇಡಿಕೆ ಇರುವ ಉತ್ಪನ್ನವನ್ನು ಹೆಚ್ಚು ಉತ್ಪಾದನೆ ಮಾಡಲು ನಿರ್ಧರಿಸುತ್ತೇವೆ. ಕಳೆದ ಬಾರಿಯ 2025ರ ದಸರಾ ಮತ್ತು ದೀಪಾವಳಿ ಹಬ್ಬದಲ್ಲಿ ನಂದಿನಿ ತುಪ್ಪ ಹಾಗೂ ಉತ್ಪನ್ನ ಅಧಿಕವಾಗಿ ಸೇಲ್ ಆಗಿದೆ, 740 ಮೆಟ್ರಿಕ್ ಟನ್ ನಂದಿನಿ ಉತ್ಪನ್ನ ಕಳೆದ ಬಾರಿ ಹಬ್ಬದಲ್ಲಿ ಖರ್ಚಾಗಿತ್ತು, ಈ ಬಾರಿಯ ದಸರಾ ಹಾಗೂ ದೀಪಾವಳಿ ಹಬ್ಬದಲ್ಲಿ 1 ಸಾವಿರ ಮೆಟ್ರಿಕ್ ಟನ್ ಉತ್ಪಾದನೆ ಮಾಡಲು ತಯಾರಿ ಮಾಡಿಕೊಂಡಿದ್ದೆವು. ಆದರೆ, 1 ಸಾವಿರದ 80 ಮೆಟ್ರಿಕ್ ಟನ್ ತುಪ್ಪ ಸೇಲ್ ಆಗಿದೆ, ನಮ್ಮ ನಂದಿನಿ ಬ್ರಾಂಡನ್ನು ಜನರು ಒಪ್ಪಿಕೊಂಡಿದ್ದಾರೆ. ನಂದಿನಿ ಬ್ರಾಂಡ್‌ನ ಕ್ವಾಲಿಟಿ ಚೆನ್ನಾಗಿ ಇರುವ ಕಾರಣ ತಿರುಪತಿಯವರು ಅಧಿಕ ತುಪ್ಪ ಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದರು.
ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲ, ಬೇರೆ ರಾಜ್ಯದಲ್ಲೂ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ, ನಂದಿನಿಗೆ ಒಳ್ಳೆಯ ದೆಸೆ ಬಂದಿದೆ ಎಂದು ಕೆ.ವೆಂಕಟೇಶ್ ಹೇಳಿಕೆ ನೀಡಿದರು.
ಅಶೋಕ್ ಹೇಳಿಕೆಗೆ ತಿರುಗೇಟು:
ಚುನಾವಣೆಯಲ್ಲಿ ಸೋಲು- ಗೆಲುವು ಸಹಜ. ಸೋತ ಕೂಡಲೇ ಡಮ್ಮಿ ಆಗಲ್ಲ ಬಿಹಾರ ಫಲಿತಾಂಶದ ಬಳಿಕ ಗಾಂಧಿ ಡಮ್ಮಿಯಾಗಿದ್ದಾರೆ ಎಂಬ ಆರ್.ಅಶೋಕ್ ಹೇಳಿಕೆ ಬಗ್ಗೆ ನಗರದಲ್ಲಿ ಸೋಮವಾರ ಮಾತನಾಡಿ, ಸೋತ ತಕ್ಷಣವೇ ಡಮ್ಮಿ ಆಗೋಕೆ ಸಾದ್ಯವಿಲ್ಲ, ಚುನಾವಣೆಯಲ್ಲಿ ಸೋಲು ಗೆಲವು ಕಾಮನ್. ಇದು ರಾಜ್ಯದ ಚುನಾವಣೆ ದೇಶದ ಒಟ್ಟಿಗೆ ನಡೆದಾಗ ಪಲಿತಾಂಶ ಏನಾಗುತ್ತೆ ನೋಡಬೇಕಲ್ಲ ಎಂದರು.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಚಾರ್ ಸೋ ಬಾರ್ ಅಂತ ಮೋದಿ ಹೇಳಿದ್ರು ಕೊನೆಗೆ ಏನಾಯ್ತು, ಚುನಾವಣೆಯಲ್ಲಿ ಸೋತಿದ್ದೇವೆ ಅಂದ ತಕ್ಷಣ ಕಾಂಗ್ರೆಸ್ ಪಕ್ಷನೇ ಇಲ್ಲ ಅಂತ ಹೇಳೋಕೆ ಆಗುತ್ತಾ? ಬಿಹಾರ ಚುನಾವಣೆ ಸೋಲಿಗೆ ಮತ ಚೋರಿ ಆಗಿರೋದೆ ಕಾರಣ. ನವೆಂಬರ್ ಕ್ರಾಂತಿ ವಿಚಾರ ಸೃಷ್ಠಿ ಮಾಡಿರುವುದು ಬಿಜೆಪಿಯವರು ಮತ್ತು ಮಾಧ್ಯಮದವರೇ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ