
ಬೆಂಗಳೂರು (ಮೇ.20) : ನಮ್ಮ ಮೆಟ್ರೋ ಆರ್.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ವಿದ್ಯುದ್ದೀಕರಣ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಟಿಎಂ ಲೇಔಟ್ ಫ್ಲಾಟ್‌ಫಾರಂ ನಿಲ್ದಾಣದಿಂದ ಆರ್‌ವಿ ರಸ್ತೆ ನಿಲ್ದಾಣದ ಕೊನೆಯವರೆಗೆ ಮೆಟ್ರೋ ವಯಡಕ್ಟ್‌ಗಳನ್ನು ಕಡ್ಡಾಯವಾಗಿ ಪ್ರವೇಶಿಸದಂತೆ ಸಾರ್ವಜನಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಎಚ್ಚರಿಕೆ ನೀಡಿದೆ.
ಪ್ರಾಯೋಗಿಕ ವಿದ್ಯುದ್ದೀಕರಣ ಸಂದರ್ಭದಲ್ಲಿ ಅಪಾಯಕಾರಿ ಮಟ್ಟದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಮೆಟ್ರೋ ವಯಡಕ್ಟ್ ಮೂಲಕ 33 ಕೆವಿ ವಿದ್ಯುತ್ ಕೇಬಲ್‌ಗಳು ಹಾದು ಹೋಗಿವೆ. ಬಿಟಿಎಂ ಲೇಔಟ್ ನಿಲ್ದಾಣ, ಜಯದೇವ ನಿಲ್ದಾಣ, ರಾಗಿಗುಡ್ಡ ನಿಲ್ದಾಣ ಮತ್ತು ಆರ್‌ವಿ ರಸ್ತೆ ನಿಲ್ದಾಣದವರೆಗೂ 750 ವೋಲ್ಟ್‌ಗಳ ವಿದ್ಯುತ್ ಸರಬರಾಜು ಆಗುತ್ತದೆ. ಈ ವೇಳೆ ವಯಡಕ್ಟ್ ಪ್ರವೇಶಿಸಿದರೆ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚು.
ಮೆಟ್ರೋದಲ್ಲಿ ಯುವತಿಯ ಅಶ್ಲೀಲ ಡ್ಯಾನ್ಸ್, ರೀಲ್ಸ್ ಹುಚ್ಚಿಗೆ ಮಜುಗರಕ್ಕೀಡಾದ ಪ್ರಯಾಣಿಕರು!
ಹೆಬ್ಬಗೋಡಿ ಡಿಪೋ ವಿಭಾಗದಿಂದ ಬೊಮ್ಮಸಂದ್ರ ನಿಲ್ದಾಣದವರೆಗೆ ಹಾಗೂ ಆರ್.ವಿ.ರಸ್ತೆ ನಿಲ್ದಾಣದವರೆಗೂ 16 ನಿಲ್ದಾಣಗಳಲ್ಲಿ ವಿದ್ಯುತ್ ಪ್ರವಹಿಸಲಿದೆ. ಈ ನಿಲ್ದಾಣಗಳಿಗೆ ಅಥವಾ ಮಾರ್ಗದ ವಯಾಡಕ್ಟ್‌ಗಳಿಗೆ ಪ್ರವೇಶದಿಂದ ಮಾರಣಾಂತಿಕ ಅಪಾಯ ಉಂಟಾಗಬಹುದು. ಹೀಗಾಗಿ, ಅನುಮತಿಯಿಲ್ಲದೆ ಪ್ರವೇಶಿಸದಂತೆ ಬಿಎಂಆರ್‌ಸಿಎಲ್ ಎಚ್ಚರಿಕೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ