
ಬೆಂಗಳೂರು (ನ.24) : ಚನ್ನೈ, ದೆಹಲಿ ಬಳಿಕ ಇದೀಗ ನಮ್ಮ ಮೆಟ್ರೋದಲ್ಲೂ ಸಿನಿಮಾ, ಸಿರಿಯಲ್ ಶೂಟಿಂಗ್ ನಡೆಸಲು ಬಿಎಂಆರ್‌ಸಿಎಲ್ ಅವಕಾಶ ಮಾಡಿಕೊಟ್ಟಿದೆ. ಇಷ್ಟು ದಿನಗಳ ಕಾಲ ಟಾಲಿವುಡ್, ಬಾಲಿವುಡ್ ನಲ್ಲಿ ನೋಡ್ತಿದ್ದ ಮೆಟ್ರೋ ಇದೀಗ ಕನ್ನಡದ ಸಿನಿಮಾ, ಸಿರಿಯಲ್‌ಗಳಲ್ಲೂ ನಮ್ಮ ಮೆಟ್ರೋ ಸಂಚರಿಸಲಿದೆ.
ಸಿನಿಮಾ ಹಾಗೂ ಸೀರಿಯಲ್ ಶೂಟಿಂಗ್‌ಗೆ ಮೆಟ್ರೋದಲ್ಲಿ ಅವಕಾಶ ಮಾಡಿಕೊಡುವಂತೆ ಹಿಂದಿನಿಂದಲೂ ಕನ್ನಡ ಸಿನಿಮಾ ಇಂಡಸ್ಟ್ರೀ ಕಲಾವಿದರು ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದರು. ಆದರೆ ಅವಕಾಶ ಕೊಟ್ಟಿರಲಿಲ್ಲ. ಇದೀಗ ಕೆಲವು ನಿಯಮಗಳ ಜೊತೆ ಸಿನಿಮಾ ಶೂಟಿಂಗ್‌ಗೆ ಬಿಎಂಆರ್‌ಸಿಎಲ್ ಅವಕಾಶ ಮಾಡಿಕೊಟ್ಟಿದೆ.
ಮೆಟ್ರೋ ರೈಲಿನೊಳಗೆ ಭಿಕ್ಷೆ ಬೇಡುತ್ತಿದ್ದವನಿಗೆ ಬಿತ್ತು ₹500 ದಂಡ!
ನಿಯಮಗಳೇನು?
ಶೂಟಿಂಗ್ ವೇಳೆ ಪ್ರಯಾಣಿಕರಿಗೆ ತೊಂದರೆಯಾಗಬಾರದು. ಮೆಟ್ರೋ ರೈಲು ಹಾಗೂ ಸ್ಟೇಷನ್‌ನಲ್ಲಿ ಶೂಟಿಂಗ್ ಮಾಡುವಾಗ ಹಾನಿಯಾಗಂತೆ ಎಚ್ಚರಿಕೆವಹಿಸಬೇಕು, ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಸಮಯದಲ್ಲಿ , ಹಾಗೂ ಸ್ಕ್ರಿಪ್ಟ್ ಆಧರಿಸಿ ಶೂಟಿಂಗ್ ನಡೆಸಬೇಕು. ಶೂಟಿಂಗ್ ವೇಳೆ ಸಿನಿಮಾ ತಂಡಕ್ಕೆ ಹಾಗೂ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಭದ್ರತೆ. ಭದ್ರತೆಗಾಗಿ ಹೆಚ್ಚುವರಿ ಪೋಲಿಸರು ಹಾಗೂ ಹೋಂ ಗಾರ್ಡ್ ಗಳ ನಿಯೋಜಿಸುವಂತೆ ತಿಳಿಸಿದೆ..
ಬೆಂಗಳೂರು: ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ?
ಇನ್ನು ಮೆಟ್ರೋ ನಿಲ್ದಾಣ ಹಾಗೂ ಮೆಟ್ರೋ ರೈಲಿನಲ್ಲಿ ಶೂಟಿಂಗ್‌ಗೆ ಒಂದು ದಿನಕ್ಕೆ ಆರು ಲಕ್ಷ ರೂಪಾಯಿ ದರ ನಿಗದಿ ಮಾಡಿದೆ. ಕನ್ನಡ ಸಿನಿಮಾಗಳಿಗೆ ಶೇ. 25% ರಿಯಾಯಿತಿ ದೊರೆಯಲಿದೆ. ಕನ್ನಡ ಸಿನಿಮಾಗಳು ಒಂದು ತಿಂಗಳ ಒಳಗಾಗಿ ಹಾಗೂ ಇತರೇ ಭಾಷೆ ಸಿನಿಮಾಗಳು ಐವತ್ತು ದಿನಗಳ ಒಳಗಾಗಿ ಪ್ರೊಸಿಜರ್ ಮುಗಿಸಿ ಅನುಮತಿ ಪಡೆಯಬೇಕು.ಈ ಎಲ್ಲ ನಿಯಮಗಳನ್ನು ಪಾಲಿಸುವುದಾದರೆ ಇಂದಿನಿಂದಲೇ ಮೆಟ್ರೋ ಶೂಟಿಂಗ್ ಮಾಡಲಿಚ್ಛಿಸುವ ಸಿನಿಮಾ ಹಾಗೂ ಸೀರಿಯಲ್ ತಂಡಗಳು ಬಿಎಂಆರ್‌ಸಿಎಲ್ ಗೆ ಅರ್ಜಿ ಸಲ್ಲಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ