ನಾಗಮಂಗಲ ಗಣೇಶ ವಿಸರ್ಜನೆ ವೇಳೆ ಕೋಮುಗಲಭೆ ಪ್ರಕರಣ; ಸರ್ಕಾರ, ಪೊಲೀಸರ ವಿರುದ್ಧ ಮಾಜಿ ಶಾಸಕ ಸುರೇಶ್ ಗೌಡ ಗರಂ

By Ravi Janekal  |  First Published Sep 12, 2024, 11:37 AM IST

ನಮ್ಮ ನಗರದಲ್ಲಿ ನಡೆದಿರುವುದು ಬಹಳ ವಿಷಾದನೀಯ. ಕಳೆದ ಒಂದು ವರ್ಷದ ಹಿಂದೆ ಅದೇ ಜಾಗದಲ್ಲಿ ಘಟನೆ ನಡೆದಿತ್ತು. ಕಳೆದ ಬಾರಿ ಘಟನೆ ನಡೆದಿದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರ, ತಾಲೂಕು ಇಲಾಖೆ. ಪೊಲೀಸರ ನಿರ್ಲಕ್ಷ್ಯವೇ ಘಟನೆ ಎಂದು ಮಾಜಿ ಶಾಸಕ ಸುರೇಶ ಗೌಡ ಕಿಡಿಕಾರಿದರು.


ನಾಗಮಂಗಲ (ಸೆ.12): ನಮ್ಮ ನಗರದಲ್ಲಿ ನಡೆದಿರುವುದು ಬಹಳ ವಿಷಾದನೀಯ. ಕಳೆದ ಒಂದು ವರ್ಷದ ಹಿಂದೆ ಅದೇ ಜಾಗದಲ್ಲಿ ಘಟನೆ ನಡೆದಿತ್ತು. ಕಳೆದ ಬಾರಿ ಘಟನೆ ನಡೆದಿದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರ, ತಾಲೂಕು ಇಲಾಖೆ. ಪೊಲೀಸರ ನಿರ್ಲಕ್ಷ್ಯವೇ ಘಟನೆ ಎಂದು ಮಾಜಿ ಶಾಸಕ ಸುರೇಶ ಗೌಡ ಕಿಡಿಕಾರಿದರು.

ನಾಗಮಂಗಲ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ನಡೆದಿರುವ ಹಿನ್ನೆಲೆ ಗಲಭೆ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇಂಟಲಿಜೆನ್ಸ್ ಎಲ್ಲಿ ಹೋಯ್ತು? ಏಕಾಏಕಿ ದಾಳಿ ಮಾಡಲು ಆಗೊಲ್ಲ. ಇದು ಪೂರ್ವನಿಯೋಜಿತ ಕೃತ್ಯ. ಸಾರ್ವಜನಿಕರು ಶಾಂತಿ ಕಾಪಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Tap to resize

Latest Videos

undefined

ನಾಗಮಂಗಲ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ; ಇದೊಂದು ಆಕಸ್ಮಿಕ ಘಟನೆ ಎಂದ ಗೃಹ ಸಚಿವ!

ಪೊಲೀಸ್ ಠಾಣೆ ಅಕ್ಕಪಕ್ಕದಲ್ಲಿರುವ ಅಂಗಡಿಗಳಿಗೆ ಸಹ ಬೆಂಕಿ ಹಾಕಿದ್ದಾರೆ, ಪೊಲೀಸರು ಏನು ಮಾಡುತ್ತಿದ್ದರು? ರಾಜ್ಯದಲ್ಲಿ ಕಾನೂನು ಪರಿಪಾಲನೆ ಮಾಡುವವರು ಏನು ಮಾಡುತ್ತಿದ್ದಾರೆ? ತಲ್ವಾರ್, ಪೆಟ್ರೋಲ್ ಬಾಂಬ್, ಆಸಿಡ್ ಎಸೆದಿದ್ದಾರೆ. ನಾನು ವೈಯುಕ್ತಿಕವಾಗಿ ಯಾರ ಮೇಲೂ ನಿಂದನೆ ಮಾಡಲ್ಲ. ಬೇರೆ ಕೋಮಿನವರು ಮೆರವಣಿಗೆ ಮಾಡ್ತಾರೆ ಆಗಲು ಇಂತಹ ಘಟನೆಗಳು ನಡೆಯಬಹುದು. ಇದಕ್ಕೆ ಸರಕಾರವೇ ಸಂಪೂರ್ಣ ಹೊಣೆ. ಈ ಘಟನೆಯಲ್ಲಿ ಯಾರಿಗೆ ನಷ್ಟ ಆಗಿದೆ ಅದನ್ನು ಸರ್ಕಾರವೇ ಭರಿಸಬೇಕು ಎಂದರು.

ನನಗೆ ಪೊಲೀಸರ ಮೇಲೆ ನಂಬಿಕೆ ಇಲ್ಲ. ಪೊಲೀಸರು ತಪ್ಪಿತಸ್ಥರನ್ನು ಹಿಡಿಯೋದಿಲ್ಲ. ಎರಡು ಕೋಮಿನವರನ್ನು ಅರೆಸ್ಟ್ ಮಾಡಿ ಕೈತೊಳೆದುಕೊಳ್ತಾರೆ. ತಪ್ಪಿತಸ್ಥರು ಯಾರಿದ್ದಾರೆ ಅವರಿಗೆ ಶಿಕ್ಷೆಯಾಗಲಿ ಅದುಬಿಟ್ಟು ಅಧಿಕಾರದಲ್ಲಿರುವವರ ಪ್ರಭಾವಕ್ಕೆ ಒಳಗಾಗಿ ಪೊಲೀಸರು ಕರ್ತವ್ಯ ಮರೆತು ಯಾರದೋ ಮರ್ಜಿಗೆ ಕೆಲಸ ಮಾಡಬಾರದು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದರು.

ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: ಪೊಲೀಸ್, ಸರ್ಕಾರದ ವಿರುದ್ಧ ಮುತಾಲಿಕ್ ಕೆಂಡ!

ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಗರಂ

ಸುಮ್ಮನೆ ಇನ್ನೊಬ್ಬರ ಹೆಗಲಮೇಲೆ ಹಾಕುವುದಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ಒಬ್ಬ ಭ್ರಷ್ಟ ಅಧಿಕಾರಿಯನ್ನ ಇಟ್ಟುಕೊಂಡಿದ್ದಾರೆ. ಒಬ್ಬ ಸರ್ಕಲ್ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್ ಅಂತ ಇದ್ದಾನೆ ಅವನು ಏನು ಕೆಲಸ ಮಾಡುತ್ತಾನೆ? ಹೋದ ಬಾರಿಯೂ ಇಲ್ಲೇ ಇದ್ದ. ಆಗಲೂ ಗಲಾಟೆಯಾಗಿತ್ತು. ಏನು ಮಾಡಿದ. ಈಗ ಯಾವ ಮುಂಜಾಗ್ರತಾ ಕ್ರಮ ತಗೊಂಡಿದ್ದ? ಕೆಲಸ ಬಿಟ್ಟು ಬರೀ ಭ್ರಷ್ಟಾಚಾರ ಮಾಡಿಕೊಂಡು ಕುಳಿತಿದ್ದರೆ ಕಾನೂನು ಕಾಪಾಡುವವರು ಯಾರು? ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

click me!