ನವರಾತ್ರಿ ಹಿನ್ನೆಲೆಯಲ್ಲಿ ಸಂಸದರೂ ಆದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆಯಲ್ಲಿ ಸಂಪ್ರದಾಯದಂತೆ ಖಾಸಗಿ ದರ್ಬಾರ್ ನಡೆಸಿದರು.
ಮೈಸೂರು (ಅ.4): ನವರಾತ್ರಿ ಹಿನ್ನೆಲೆಯಲ್ಲಿ ಸಂಸದರೂ ಆದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆಯಲ್ಲಿ ಸಂಪ್ರದಾಯದಂತೆ ಖಾಸಗಿ ದರ್ಬಾರ್ ನಡೆಸಿದರು.
ಶರನ್ನವರಾತ್ರಿಯ ಆರಂಭದ ದಿನವಾದ ಗುರುವಾರ ರಾಜವಂಶಸ್ಥರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಯದುವೀರ್ಅವರು ಕಂಕಣ ಧರಿಸಿ ಖಾಸಗಿ ದರ್ಬಾರ್ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು.
undefined
ಸಂಪ್ರದಾಯದಂತೆ ಮೊದಲಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಎಣ್ಣೆಶಾಸ್ತ್ರ ನೆರವೇರಿಸಲಾಯಿತು. ಬೆಳಗ್ಗೆ 5.45 ರಿಂದ 6.10 ರ ಒಳಗಿನ ಶುಭ ಮುಹೂರ್ತದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಸಿಂಹದ ಮುಖ ಜೋಡಿಸಲಾಯಿತು. ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ಅವರಿಗೆ ಬೆಳಗ್ಗೆ 7.45ರ ಸುಮಾರಿನಲ್ಲಿ ಕಂಕಣ ಧಾರಣೆ ನೆರವೇರಿಸಲಾಯಿತು.
ಖಾಸಗಿ ದರ್ಬಾರ್ ಆರಂಭದ ಹಿನ್ನೆಲೆಯಲ್ಲಿ ಅರಮನೆಯ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಆಸು ಆಗಮಿಸಿತು. ಬೆಳಗ್ಗೆ 11ಕ್ಕೆ ಕಳಸ ಪೂಜೆ ಮತ್ತು ಸಿಂಹಾಸನ ಪೂಜೆ ನೆರವೇರಿಸಿದ ಯದುವೀರ್ಅವರು 11.35 ರಿಂದ 12.05ರ ಒಳಗೆ ಅವರು ಸಿಂಹಾಸನಾರೋಹಣ ಮಾಡುವ ಮೂಲಕ ಖಾಸಗಿ ದರ್ಬಾರ್ ಆರಂಭಿಸಿದರು. ಇದಕ್ಕೂ ಮುನ್ನ ವೇದಘೋಷದ ನಡುವೆ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಪ್ರದಕ್ಷಿಣೆ ಹಾಕಿದರು.
ಈ ನವರಾತ್ರಿಯಂದು ನಿಮ್ಮ ಸಂಕಲ್ಪಗಳನ್ನು ಸಾಕಾರಗೊಳಿಸಿ ಗುರುದೇವ್ ಶ್ರೀ ಶ್ರೀ ರವಿಶಂಕರ್
ಯದುವೀರ ಅವರಿಗೆ ಅರಮನೆಯ ಪುರೋಹಿತರು, ಆಗಮಿಕರು ವಿವಿಧ ದೇವಾಲಯಗಳಿಂದ ತರಲಾದ ಪ್ರಸಾದವನ್ನು ಯದುವೀರ ಅವರಿಗೆ ನೀಡಿದರು.ಈ ಎಲ್ಲಾ ಪ್ರಸಾದ ಸ್ವೀಕರಿಸಿದ ಸಂಸದ ಯದುವೀರ್ಅವರು, ಅರಮನೆ ಪುರೋಹಿತರಿಗೆ ಗೌರವ ಕಾಣಿಕೆ ಸಲ್ಲಿಸಿದರು.
ಬಳಿಕ ಸಾರ್ವಜನಿಕರಿಗೆ ಗೌರವ ಸಲ್ಲಿಸಿ, ಸಿಂಹಾಸನದ ಮೇಲೆಯೇ ಎದ್ದು ನಿಂತು ಕಾಯೋ ಶ್ರೀಗೌರಿ ಹಾಡಿಗೆ ಗೌರವ ಸೂಚಿಸಿದರು.
ಇದಕ್ಕೂ ಮುನ್ನ ಯದುವೀರ್ಅವರ ಪತ್ನಿ ತ್ರಿಷಿಕಾ ಅವರು ಕಂಕಣ ಧರಿಸಿ ಬಂದ ಯದುವೀರ್ಕೃಷ್ಣದತ್ತ ಚಾಮರಾಜ ಒಡೆಯರ್ಅವರ ಪಾದಪೂಜೆ ನೆರವೇರಿಸಿದರು.
ದರ್ಬಾರ್ ಹಾಲ್ಗೆ ಪ್ರವೇಶಿಸಿದ ಯದುವೀರ್ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಸೇವಕರು ಸವಾಲ್ಬೀಸುತ್ತ ಸ್ವಾಗತಿಸಿದರೆ, ಹೊಗಳು ಭಟ್ಟರು ಜಯಘೋಷ ಕೂಗಿದರು.