ಅರ್ಜುನನ ಸಾವು ಅನ್ಯಾಯ, ಅಂತ್ಯಕ್ರಿಯೆಯಲ್ಲಾದ್ರೂ ನ್ಯಾಯ ಕೊಡಿಸಿ ಎಂದವರ ಮೇಲೆ ಲಾಠಿ ಬೀಸಿದ ಪೊಲೀಸರು

By Sathish Kumar KH  |  First Published Dec 5, 2023, 3:12 PM IST

ಅರ್ಜುನ ಆನೆ ಮೃತದೇಹವನ್ನು ಸೂಕ್ತ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮಾಡಿ ಸ್ಮಾರಕ ನಿರ್ಮಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ ಓಡಿಸಿದ್ದಾರೆ.


ಹಾಸನ (ಡಿ.05): ಸಕಲೇಶಪುರದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನನ ಸಾವು ಅನ್ಯಾಯವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈಗ ಅರ್ಜುನ ಆನೆಯ ಸಾವಿನ ನಂತರವಾದರೂ ಸೂಕ್ತ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮಾಡಿ ಸ್ಮಾರಕ ಮಾಡುವ ಮೂಲಕ ನ್ಯಾಯ ಒದಗಿಸಿ ಎಂದು ಆಗ್ರಹಿಸಿದ ಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ ಓಡಿಸಿದ್ದಾರೆ.

ರಾಜ್ಯದಲ್ಲಿ 8 ಬಾರಿ ಮೈಸೂರು ದಸರಾ ಅಂಬಾರಿಯನ್ನು ಹೊತ್ತು ಅಪಾರ ಜನರ ಪ್ರೀತಿ ಗಳಿಸಿದ್ದ ಅರ್ಜುನ ಆನೆಯ ಸಾವಿನಲ್ಲಿ ಭೀಕರ ಅನ್ಯಾಯವಾಗಿದೆ. ಇನ್ನು ಸಾವಿನ ನಂತರವಾದರೂ ಸೂಕ್ತ ಸ್ಥಳದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸುವಂತೆ ಮಾವುತರು, ಸ್ಥಳೀಯ ಜನರು ಆಗ್ರಹಿಸಿದ್ದಾರೆ. ಆದರೆ ಇದಕ್ಕೂ ಒಪ್ಪದ ಅರಣ್ಯಾಧಿಕಾರಿಗಳು ಅರ್ಜುನನ ಸಾವಿನ ನಂತರವೂ ನ್ಯಾಯ ಒದಗಿಸದೇ ಕಾಡಿನಲ್ಲಿ ಗುಂಡಿ ತೋಡಿ ಮುಚ್ಚಲು ಮುಂದಾಗಿದ್ದಾರೆ. ಇದನ್ನು ವಿರೋಧಿಸಿದ ಸ್ಥಳೀಯರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.

Tap to resize

Latest Videos

ಕ್ಯಾಪ್ಟನ್‌ ಅರ್ಜುನನ ಸಾವಿಗೆ ಅರಣ್ಯ ಅಧಿಕಾರಿಗಳ ಪ್ರಮಾದವೇ ಕಾರಣವಾಯ್ತಾ? ಅರ್ಜುನನಿಗೆ ಗುಂಡೇಟು ಆಗಿದ್ದೇಗೆ?

ಕಾಡಾನೆ ಕಾರ್ಯಾಚರಣೆಯ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶು ಇಲಾಖೆ ಸಿಬ್ಬಂದಿಯ ಎಡವಟ್ಟಿನಿಂದಾಗಿ ರಾಜ್ಯದ ಹೆಮ್ಮೆಯ ಅರ್ಜುನ ಆನೆ ಬಲಿಯಾಗಿದೆ. ಈಗ ಅರ್ಜುನ ಆನೆಯನ್ನು ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿಕಟ್ಟೆ ನೆಡು ತೋಪಿನಲ್ಲಿಯೇ ಅಂತ್ಯಕ್ರಿಯೆ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಆದರೆ, ಮಾವುತರು ಹಾಗೂ ಸ್ಥಳೀಯ ಜನರು ಅರ್ಜುನ ಆನೆಯ ಮೃತದೇಹವನ್ನು ಸ್ಥಳಾಂತರ ಮಾಡಿ ಅಂತ್ಯಕ್ರಿಯೆ ಮಾಡುವಂತೆ ಒತ್ತಾಯಿಸಿದ್ದಾರೆ. 

ಇನ್ನು ಆನೆಯ ಮಾವುತರು ಮೈಸೂರಿನ ಬಳ್ಳೆ ಸಾಕಾನೆ ಶಿಭಿರಕ್ಕೆ ಕೊಂಡೊಯ್ಯಲು ಒತ್ತಾಯಿಸಿದ್ದಾರೆ. ಮಾವುತರ ಆಗ್ರಹಕ್ಕೆ ಧ್ವನಿಗೂಡಿಸಿದ ಸ್ಥಳೀಯರು ಕೂಡ ವೀರಮರಣ ಹೊಂದಿದ ಅರ್ಜುನ ಆನೆಗೆ ಸಾವಿನ ನಂತರವಾದರೂ ನ್ಯಾಯ ಕೊಡಿಸಿ ಎಂದು ಆಗ್ರಹ ಮಾಡಿದ್ದಾರೆ. ಆದರೆ, ಇದ್ಯಾವುದಕ್ಕೂ ಒಪ್ಪದ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಆರಂಭದಲ್ಲಿ ಜನರ ಮನವೊಲಿಸಿ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಾರೆ. ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದು, ಇದಕ್ಕೆ ಜನರು ಭಾರಿ ವಿರೋಧ ವಯಕ್ತಪಡಿಸಿ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗೆ ಮೇಲೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆನೆಯ ಅಂತ್ಯಕ್ರಿಯೆಗೆ ತೊಂದರೆ ಆಗುತ್ತಿದ್ದುದನ್ನು ಗಮನಿಸಿದ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ. ಲಾಠಿ ಬೀಸುತ್ತಲೆ ಪ್ರತಿಭಟನಾಕಾರರು ಅಲ್ಲಿಂದ ದಿಕ್ಕಾಪಾಲಾಗಿ ಓಡಿದ್ದಾರೆ. 

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಆಗಿರೊ ಯಡವಟ್ಟಿನ ಬಗ್ಗೆ ಭಾರೀ ಚರ್ಚೆ ಎದುರಾಗಿದೆ. ಮದದಲ್ಲಿದ್ದ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿತ್ತು. ಮದದಲ್ಲಿರೊ ಕಾಡಾನೆ ಹುಚ್ಚಾನೆಯಂತೆ ಆಡುತ್ತದೆ ಎನ್ನೊ ಮಾಹಿತಿ ಇದ್ದರೂ ಅರಣ್ಯ ಅಧಿಕಾರಿಗಳು ತಪ್ಪು ನಿರ್ಧಾರ ತೆಗೆದುಕೊಂಡರು ಎಂಬ ಬಗ್ಗೆ ತಜ್ಞರು ಟೀಕೆ ವ್ಯಕ್ತಪಡಿಸಿದ್ದಾರೆ. ಸೆರೆಗೆ ತೆರಳಿದ್ದ ವೇಳೆ ಏಕಾ ಏಕಿ ಮದದಲ್ಲಿದ್ದ ಒಂಟಿ ಸಲಗ ದಾಳಿ ಮಾಡಿದೆ. ಸಲಗ ದಾಳಿ ಮಾಡಿದಾಗ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ   ಗುಂಡು ಹಾರಿಸಿದ್ದಾರೆ. ಗುಂಡು  ಹಾರಿಸಿದಾಗ ಅರ್ಜುನನ ಕಾಲಿಗೆ ಗುಂಡು ತಗುಲಿರೊ ಬಗ್ಗೆ ಅನುಮಾನ ಎದ್ದಿದೆ. ಗುಂಡು ತಗುಲಿದ ಬಗ್ಗೆ ಕಾರ್ಯಾಚರಣೆ ಸ್ಥಳದಲ್ಲಿದ್ದ ಆನೆ ಮಾವುತರೊಬ್ಭರ ನೀಡಿರುವ ಹೇಳಿಕೆ ಹಲವು ಅನುಮಾನ ಹುಟ್ಟಿಸಿದೆ.

ಮೈಸೂರು ದಸರಾದಲ್ಲಿ 7 ಬಾರಿ ಅಂಬಾರಿ ಹೊತ್ತ ಅರ್ಜುನ ಆನೆ ವೀರಮರಣ: ಮಾವುತನ ಪ್ರಾಣಕ್ಕಾಗಿ ತನ್ನ ಜೀವ ಬಲಿದಾನ

ಅರ್ಜುನನ ಕಾಲಿಗೆ ಗುಂಡು ಬೀಳುತ್ತಲೇ ಬಲ ಕಳೆದುಕೊಂಡಿದ್ದಾನೆ. ಅರ್ಜುನ ಬಲ ಕಳೆದುಕೊಳ್ಳುತ್ತಲೇ ಹಠಾತ್ ಆಗಿ ಒಂಟಿ ಸಲಗ ಕಾಡಾನೆ ದಾಳಿ ಮಾಡಿದೆ. ಈ ವೇಳೆ ಅರಣ್ಯ ಇಲಾಖೆ ಕಾರ್ಯಾಚರಣೆ ಸಿಬ್ಬಂದಿ ಯಿಂದ ಮತ್ತೊಂದು  ಯಡವಟ್ಟು ನಡೆದಿದೆ. ಕಾಡಾನೆಗೆ ಅರವಳಿಗೆ ಮದ್ದು ನೀಡೋ ವೇಳೆ ಗುರಿ ತಪ್ಪಿ ಕಾರ್ಯಾಚರಣೆಯಲ್ಲಿದ್ದ ಮತ್ತೊಂದು ಸಾಕಾನೆಗೆ ಅರವಳಿಗೆ ನೀಡಿದ ಸಿಬ್ಬಂದಿ. ಮಿಸ್ ಫೈರ್ ಆಗಿ ಸಾಕಾನೆಗೆ ಅರವಳಿಕೆ ಮದ್ದು ಡಾಟ್ ಆಗಿದ್ದರಿಂದ ಕಾರ್ಯಾಚರಣೆ ತಂಡ ಕೂಡ ಬಲ ಕಳೆದುಕೊಂಡು ಸಮಸ್ಯೆಯಾಗಿದೆ.

click me!