ಕ್ಯಾಪ್ಟನ್‌ ಅರ್ಜುನನ ಸಾವಿಗೆ ಅರಣ್ಯ ಅಧಿಕಾರಿಗಳ ಪ್ರಮಾದವೇ ಕಾರಣವಾಯ್ತಾ? ಅರ್ಜುನನಿಗೆ ಗುಂಡೇಟು ಆಗಿದ್ದೇಗೆ?

By Suvarna News  |  First Published Dec 5, 2023, 12:46 PM IST

ಸತತ ಎಂಟು ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾದ ಅಂಬಾರಿ ಹೊತ್ತು ಸೈ ಎನಿಸಿ ಕೊಂಡಿದ್ದ ಕ್ಯಾಪ್ಟನ್‌ ಅರ್ಜುನ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ಜೊತೆ ಕಾದಾಟದಲ್ಲಿ ಹುತಾತ್ಮನಾಗಿದ್ದಾನೆ. ಇದೀಗ ಅರ್ಜುನನ ಸಾವಿನ ಬಗ್ಗೆ ಹಲವು ಅನುಮಾನ ಇದ್ದು, ಅರಣ್ಯ ಅಧಿಕಾರಿಗಳ ಎಡವಟ್ಟು ಕಾರಣ ಎಂದು ಆಕ್ರೋಶ ಎದ್ದಿದೆ.


ಹಾಸನ (ಡಿ.5): ಸತತ ಎಂಟು ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾದ ಅಂಬಾರಿ ಹೊತ್ತು ಸೈ ಎನಿಸಿ ಕೊಂಡಿದ್ದ ಕ್ಯಾಪ್ಟನ್‌ ಅರ್ಜುನ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ಜೊತೆ ಕಾದಾಟದಲ್ಲಿ ಹುತಾತ್ಮನಾಗಿದ್ದಾನೆ. ಇಡೀ ರಾಜ್ಯವೇ ಈ ದುರಂತ ಸಾವಿಗೆ ಮರುಗುತ್ತಿದೆ.  ಜನರಿಗೆ ಕಂಟಕವಾಗಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮಡಿದ ಅರ್ಜುನನಿಗೆ ಸಕಲ ಸರ್ಕಾರಿ ಗೌರವ, ಮೈಸೂರು ಅರಮನೆ ಪುರೋಹಿತರಿಂದ ಪೂಜಾ ವಿಧಿ ವಿಧಾನದ ಬಳಿಕ ಅಂತ್ಯ ಸಂಸ್ಕಾರ ನಡೆಯಲಿದೆ. ಇದೀಗ ಅರ್ಜುನನ ಸಾವಿನ ಸುತ್ತ ಹಲವು ಅನುಮಾನ ಎದ್ದಿದೆ.

ಕಾರ್ಯಾಚರಣೆ ವೇಳೆ ನಡೆದು ಪ್ರಮಾದ ಹೋಯ್ತಾ, ಅರ್ಜುನನಿಗೆ ಗುಂಡೇಟು ಆಗಿದ್ದೇಗೆ?
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ‌ ಬಾಳೆಕೆರೆ ಸಮೀಪ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ನಡೆದು ಹೋಯ್ತಾ ಮಹಾ ಪ್ರಮಾ? ಗುರಿ ತಪ್ಪಿ ಬಿದ್ದ ಅದೊಂದು ಗುಂಡೇಟಿನಿಂದ ಬಲ ಕಳೆದುಕೊಂಡು ಕಾದಾಡಲಾಗದೆ ಸೋಲೊಪ್ಪಿದ್ನಾ ಅರ್ಜುನ? ಇಂತಹದೊಂದು ಪ್ರಶ್ನೆ ಎದ್ದಿದೆ.

Latest Videos

undefined

ಸಿಬ್ಬಂದಿ ಯಡವಟ್ಟಿನಿಂದ ಮೃತಪಟ್ಟನಾ ಅರ್ಜುನ? ಕಾಡಾನೆ ಎದುರು ಬಲ ಕಳೆದುಕೊಂಡು ಬಲಿ?

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಆಗಿರೊ ಯಡವಟ್ಟಿನ ಬಗ್ಗೆ ಭಾರೀ ಚರ್ಚೆ ಎದುರಾಗಿದೆ. ಮದದಲ್ಲಿದ್ದ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿತ್ತು. ಮದದಲ್ಲಿರೊ ಕಾಡಾನೆ ಹುಚ್ಚಾನೆಯಂತೆ ಆಡುತ್ತದೆ ಎನ್ನೊ ಮಾಹಿತಿ ಇದ್ದರೂ ಅರಣ್ಯ ಅಧಿಕಾರಿಗಳು ತಪ್ಪು ನಿರ್ಧಾರ ತೆಗೆದುಕೊಂಡರು ಎಂಬ ಬಗ್ಗೆ ತಜ್ಞರು ಟೀಕೆ ವ್ಯಕ್ತಪಡಿಸಿದ್ದಾರೆ.

ಸೆರೆಗೆ ತೆರಳಿದ್ದ ವೇಳೆ ಏಕಾ ಏಕಿ ಮದದಲ್ಲಿದ್ದ ಒಂಟಿ ಸಲಗ ದಾಳಿ ಮಾಡಿದೆ. ಸಲಗ ದಾಳಿ ಮಾಡಿದಾಗ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ   ಗುಂಡು ಹಾರಿಸಿದ್ದಾರೆ. ಗುಂಡು  ಹಾರಿಸಿದಾಗ ಅರ್ಜುನನ ಕಾಲಿಗೆ ಗುಂಡು ತಗುಲಿರೊ ಬಗ್ಗೆ ಅನುಮಾನ ಎದ್ದಿದೆ. ಗುಂಡು ತಗುಲಿದ ಬಗ್ಗೆ ಕಾರ್ಯಾಚರಣೆ ಸ್ಥಳದಲ್ಲಿದ್ದ ಆನೆ ಮಾವುತರೊಬ್ಭರ ನೀಡಿರುವ ಹೇಳಿಕೆ ಹಲವು ಅನುಮಾನ ಹುಟ್ಟಿಸಿದೆ. 

ಅರ್ಜುನನ ಕಾಲಿಗೆ ಗುಂಡು ಬೀಳುತ್ತಲೇ ಬಲ ಕಳೆದುಕೊಂಡಿದ್ದಾನೆ. ಅರ್ಜುನ ಬಲ ಕಳೆದುಕೊಳ್ಳುತ್ತಲೇ ಹಠಾತ್ ಆಗಿ ಒಂಟಿ ಸಲಗ ಕಾಡಾನೆ ದಾಳಿ ಮಾಡಿದೆ. ಈ ವೇಳೆ ಅರಣ್ಯ ಇಲಾಖೆ ಕಾರ್ಯಾಚರಣೆ ಸಿಬ್ಬಂದಿ ಯಿಂದ ಮತ್ತೊಂದು  ಯಡವಟ್ಟು ನಡೆದಿದೆ. ಕಾಡಾನೆಗೆ ಅರವಳಿಗೆ ಮದ್ದು ನೀಡೋ ವೇಳೆ ಗುರಿ ತಪ್ಪಿ ಕಾರ್ಯಾಚರಣೆಯಲ್ಲಿದ್ದ ಮತ್ತೊಂದು ಸಾಕಾನೆಗೆ ಅರವಳಿಗೆ ನೀಡಿದ ಸಿಬ್ಬಂದಿ. ಮಿಸ್ ಫೈರ್ ಆಗಿ ಸಾಕಾನೆಗೆ ಅರವಳಿಕೆ ಮದ್ದು ಡಾಟ್ ಆಗಿದ್ದರಿಂದ ಕಾರ್ಯಾಚರಣೆ ತಂಡ ಕೂಡ ಬಲ ಕಳೆದುಕೊಂಡು ಸಮಸ್ಯೆಯಾಗಿದೆ.

ಅಂಬಾರಿ ಅರ್ಜುನನ ನಿಧನಕ್ಕೆ ಕಂಬನಿ ಮಿಡಿದ ಕರ್ನಾಟಕ, ಸಿಎಂ ಸಿದ್ದು ಸೇರಿ ಗಣ್ಯರ ಸಂತಾಪ!

ಕಾರ್ಯಾಚರಣೆ ತಂಡದಿಂದ ಆಕಸ್ಮಿಕವಾಗಿ ಆದ ಯಡವಟ್ಟಿನಿಂದ ಅರ್ಜನ ಬಲಿಯಾದ ಬಗ್ಗೆ ಬಲವಾದ ಅನುಮಾನವಿದೆ. ಈ ಎಲ್ಲಾ ಯಡವಟ್ಟಿನಿಂದ ಕಾಡಾನೆ ಎದುರು ಬಲ ಕಳೆದುಕೊಂಡು ಅರ್ಜನ ಬಲಿಯಾಗಿದ್ದಾನೆ. ಹೀಗಾಗಿ ಅರ್ಜುನನ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಒತ್ತಾಯ ಹೆಚ್ಚಿದೆ. ಕಾರ್ಯಾಚರಣೆ ವೇಳೆ ಆದ ಯಡವಟ್ಟಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹ ಹೆಚ್ಚಿದೆ. ಅರ್ಜುನ ಆನೆ ಸಾವನ್ನಪ್ಪಿದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಅರ್ಜುನ ಮೃತ ದೇಹದ ಮುಂದೆ ಪ್ರಕರಣವನ್ನು ಸಿಓಡಿಗೆ ವಹಿಸುವಂತೆ ಒತ್ತಾಯ ಹೆಚ್ಚಿದೆ. ಕೂಡಲೇ ಸಂಬಂಧಪಟ್ಟ ‌ಅಧಿಕಾರಿಗಳನ್ನ ಸಸ್ಪೆಂಡ್ ಮಾಡುವಂತೆ ಆಗ್ರಹಿಸಲಾಗಿದೆ.

ಇದೆಲ್ಲದರ ಮಧ್ಯೆ ಅರ್ಜುನನ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ವೇ ಕಾರಣ ಎಂದು ಸ್ಥಳೀಯರ ಆಕ್ರೋಶ ಹೊರ ಹಾಕಿದ್ದಾರೆ. ವಯಸ್ಸಾದ ಕಾಡಾನೆ ಕಾರ್ಯಾಚರಣೆಗೆ ಬಳಸಿದ್ದು ತಪ್ಪು ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಜನರು ಕಿಡಿಕಾರಿದ್ದಾರೆ. ಹುತಾತ್ಮ ಅರ್ಜುನನ ಮೃತದೇಹದ ಬಳಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಕಲೇಶಪುರ ತಾಲ್ಲೂಕಿನ ಬಾಳೆಕೆರೆ ಸಮೀಪದ ದಬ್ಬಳ್ಳಿ ಫಾರೆಸ್ಟ್ ನಲ್ಲಿ ವೀರಮರಣವನ್ಬಪ್ಪಿರುವ ಅರ್ಜುನ. ಅರ್ಜುನನಿಗೆ 63 ವರ್ಷ ವಯಸ್ಸಾಗಿತ್ತು. 

click me!