
ಮೈಸೂರು, (ಅ.15): ದಲಿತರು ಬೌದ್ಧ ಧರ್ಮಕ್ಕೆ ಹೋದರೆ ಅದು ಮತಾಂತರ ಅಲ್ಲ. ಧರ್ಮದ ಬಗ್ಗೆ ಜ್ಞಾನ ಇಲ್ಲದವರು ಅದನ್ನು ಮತಾಂತರ ಅನ್ನುತ್ತಾರೆ ಅಷ್ಟೇ. ಬೌದ್ಧ ಧರ್ಮಕ್ಕೆ ಹೋಗುವುದು ನಮ್ಮ ಸ್ವಾತಂತ್ರ್ಯದ ಸಂಕೇತ. ಭಾರತ ನಮ್ಮ ದೇಶ. ನಾವು ಈ ದೇಶದ ಮೂಲ ನಿವಾಸಿಗಳು. ದೊಣ್ಣೆ ಕೋಲು ಗನ್‌ನಿಂದ ನಮ್ಮ ಶಕ್ತಿಯನ್ನು ಕಡಿಮೆ ಮಾಡಲು ಬಿಡಬಾರದು. ನಮ್ಮ ವೈಚಾರಿಕತೆ, ಸಂಘಟನೆ ಇನ್ನಷ್ಟು ಗಟ್ಟಿಯಾಗಬೇಕು ಎಂದು ಸಚಿವ ಹೆಚ್‌ಸಿ ಮಹದೇವಪ್ಪ ಕರೆ ನೀಡಿದರು.
ಮೈಸೂರಿನಲ್ಲಿ ನಡೆದ ಬೌದ್ಧ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವರು, ದಲಿತ ಸಮುದಾಯಕ್ಕೆ ಸ್ವಾಭಿಮಾನ ಮತ್ತು ಐಕ್ಯದ ಸಂದೇಶ ನೀಡಿದರು.
ಹೊಲೆಯ ಮಾದಿಗ ಪದ ಬಳಕೆಯಿಂದ ಬೇಸರ:
ದಲಿತರು ನಮಗೆ ನಾವೇ ಹೊಲೆಯ ಮಾದಿಗ ಪದ ಬಳಸಿ ದೊಡ್ಡದು ಮಾಡುತ್ತಿದ್ದೇವೆ. ಇದು ನಮಗೆ ನಾಚಿಕೆ ಆಗಬೇಕು.
ನಾವು ಇದಕ್ಕೆ ಬೇರೆ ಪದಗಳನ್ನು ಬಳಸಬೇಕು. ನಾನು ಚಿಕ್ಕವನ್ನಿದ್ದಾಗ ಯಾರಾದರೂ ಹೊಲೆಯ ಮಾದಿಗ ಎಂದರೆ ಜಾತಿ ನಿಂದನೆ ಕೇಸ್ ಹಾಕಿಸುತ್ತಿದ್ದೆ. ಆದರೆ ಈಗ ನಮಗೆ ನಾವೇ ಹೊಲೆಯ ಮಾದಿಗ ಎಂದು ಜೋರಾಗಿ ಹೇಳಿ ಕೊಳ್ಳುತ್ತಿದ್ದೇವೆ. ಇದು ನನಗೆ ನೋವಾಗುತ್ತಿದೆ ಎಂದರು.
ಇದನ್ನೂ ಓದಿ: 'ಬಿಜೆಪಿಯವ್ರು ಯಾವಾಗ್ಲೂ ಧಮ್ಮಿದ್ರೆ ಬ್ಯಾನ್ ಮಾಡಿ ಅಂತಾರೆ..' ಆರೆಸ್ಸೆಸ್ ಚಟುವಟಿಕೆ ನಿಷೇಧಕ್ಕೆ ಸಿಎಂ ಪರೋಕ್ಷ ಸುಳಿವು!
ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದ ದಲಿತರು:
ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೆಲುವಿಗೆ ದಲಿತರು ಟೋಂಕ ಕಟ್ಟಿ ನಿಂತರು. ಚುನಾವಣೆ ವೇಳೆ ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೆ ಬೆಂಬಲ ನೀಡಿದ್ದಾರೆ ಎಂದು ಅವರು ಪ್ರಶಂಸಿಸಿದರು. 2006ರಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನವನ್ನು ನಾಶಪಡಿಸುವ ರಾಜಕೀಯ ಷಡ್ಯಂತ್ರ ನಡೆದಿತ್ತು. ಆಗಲೂ ದಲಿತ ಸಮುದಾಯ ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿತ್ತು. ಇಂದು ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಇದೇ ಐತಿಹಾಸಿಕ ಘಟನೆ ಪುನರಾವರ್ತನೆಯಾಗಿದೆ ಎಂದರು.
ಇದನ್ನೂ ಓದಿ: ಭಾರತದಲ್ಲಿ ಬೌದ್ಧ ಧರ್ಮ ಬೆಳೆಯಲು ಮನುವಾದಿಗಳು ಬಿಡಲಿಲ್ಲ: ಸತೀಶ್ ಜಾರಕಿಹೊಳಿ ಕಿಡಿ
ಆರೆಸ್ಸೆಸ್ ವಿರುದ್ಧ ವಾಗ್ದಾಳಿ:
ಆರ್ ಎಸ್ ಎಸ್ ಉದ್ದೇಶ ಶ್ರೇಣಿಕೃತ ಸಮಾಜವನ್ನು ಜೀವಂತವಾಗಿ ಇಡುವುದಾಗಿದೆ. ಶ್ರೇಣೀಕೃತ ವ್ಯವಸ್ಥೆ ಒಳಗೆ ದಲಿತರನ್ನೆ ಆರ್ ಎಸ್ ಎಸ್ ಸೇರಿಸಿಲ್ಲ. ಬೌದ್ಧ ಧರ್ಮದಲ್ಲಿ ಇತರ ಧರ್ಮಗಳಲ್ಲಿ ಕಾಲ್ಪನಿಕ ಕಥೆಗಳಿಲ್ಲ. ಬುದ್ಧನು ನಿಜವಾದ ಮಾರ್ಗದರ್ಶಿ. ದಲಿತರು ಎರಡನೇ ದರ್ಜೆ ಪ್ರಜೆಗಳಲ್ಲ. ನಾವು ಬ್ರಾಹ್ಮಣ್ಯದ ಗುಲಾಮರಲ್ಲ. ಇಂದು ದಲಿತರು ಎಡಬಿಂಡಗಿ ಆಗಿದ್ದೇವೆ. ಮೂಢನಂಬಿಕೆಯನ್ನು ಪಾಲಿಸುತ್ತೇವೆ, ಬುದ್ದನು ಬೇಕು ಅಂತೀವಿ. ಬುದ್ಧ ಬೇಕು ಎಂದೆ ಈ ಎಡಬಿಡಂಗಿತನ ನಿಲ್ಲಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ