ಬೆಂಗಳೂರಿನಲ್ಲಿ ಮತ್ತೊಮ್ಮೆ ನಿಗೂಢ ಸ್ಫೋಟವಾಗಿದೆ. ಮೊದಲಿಗೆ ಇದು ಸಿಲಿಂಡರ್ ಸ್ಪೋಟಕ ಎನ್ನಲಾಗಿತ್ತಾದರೂ, ಎನ್‌ಐಎ ಟೀಮ್ ಸ್ಪೋಟದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ. ಮೇಲ್ನೋಟಕ್ಕೆ ಇದು ಕುಕ್ಕರ್ ಬ್ಲ್ಯಾಸ್ಟ್ ಎನ್ನಲಾಗುತ್ತಿದೆ.
ಬೆಂಗಳೂರು (ಆ.14): ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅನುಮಾನಾಸ್ಪದ ಸ್ಪೋಟ ವರದಿಯಾಗಿದೆ. ನಗರದ ಜೆಪಿ ನಗರ 24. ಮೇನ್ ಉಡುಪಿ ಉಪಹಾರದ ಮನೆಯ ಬಳಿ ಘಟನೆ ನಡೆದಿದೆ. ಈ ಸ್ಪೋಟವೂ ನಿಗೂಢವಾಗಿದೆ ಎನ್ನಲಾಗಿದೆ. ಈ ಹಿಂದೆ ನಡೆದ ರಾಮೇಶ್ವರಂ ಕೆಫೆಗೂ ಮೊದಲು ಸಿಲಿಂಡರ್ ಸ್ಫೋಟ ಎನ್ನಲಾಗಿತ್ತಾದರೂ, ಬಳಿಕ ಅದು ಭಯೋತ್ಪಾದಕ ಕೃತ್ಯ ಎನ್ನುವುದು ಖಚಿತವಾಗಿತ್ತು. ಅದೇ ಮಾದರಿಯಲ್ಲಿ ಜೆಪಿ ನಗರದಲ್ಲಿ ನಡೆದಿರುವ ಸ್ಪೋಟವೂ ಕೂಡ ಅನುಮಾನಾಸ್ಪದಕ್ಕೆ ಕಾರಣವಾಗಿದ್ದು, ಇದು ಕುಕ್ಕರ್ ಸ್ಫೋಟ ಎನ್ನಲಾಗುತ್ತಿದೆ. ಜೆಪಿ ನಗರದ ಮನೆಯಲ್ಲಿ ಈ ಘಟನೆ ನಡೆದಿದ್ದು,ಪ್ರಕರಣದಲ್ಲಿ ಇಬ್ಬರಿಗೆ ಗಾಯವಾಗಿದೆ. ಸಮೀರ್ ಅಂಡ್ ಮೋಸಿನ್ ಇಬ್ಬರಿಗೆ ಗಾಯವಾಗಿದೆ. ಸೋಮವಾರ ಬೆಳಿಗ್ಗೆ 10 ಗಂಟೆಗೆ ಈ ಸ್ಪೋಟ ಸಂಭವಿಸಿದೆ. ಇಬ್ಬರೂ ಯುವಕರು ಉತ್ತರ ಪ್ರದೇಶದ ಮೂಲದವರು ಎನ್ನಲಾಗಿದೆ. ಸ್ಪೋಟದ ತೀವ್ರತೆಗೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಕುಕ್ಕರ್ ನಿಂದ ಸ್ಪೋಟ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಹೊಟೇಲ್‌ನಲ್ಲಿ ಸುಟ್ಟ ವಯರ್‌ಗಳು ಕೂಡ ಪತ್ತೆಯಾಗಿದೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಮುಸಾವೀರ್ ಪ್ರಕ್ರಿಯೆ ಮರುಸೃಷ್ಟಿ, ಬಟ್ಟೆ ಬದಲಿಸಿದ ಮಸೀದಿಯ ಮಹಜರ್!
undefined
ಇನ್ನು ಈ ಸ್ಪೋಟದ ಬಗ್ಗೆ ತನಿಖಾ ತಂಡಗಳು ಕೂಡ ಅನುಮಾನ ವ್ಯಕ್ತಪಡಿಸಿವೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎನ್ಐಎ ಹಾಗೂ ಕೇಂದ್ರ ತನಿಖಾ ತಂಡ ಬೇಟಿ ಪರಿಶೀಲನೆ ನಡೆಸುತ್ತಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ರೂವಾರಿ ಬೆಂಗಳೂರಿನ ಎಂಜಿನಿಯರ್..!
ಕುಕ್ಕರ್ ಬ್ಲಾಸ್ಟ್‌ಗಿಂತಲೂ ತೀವ್ರವಾಗಿ ಸ್ಪೋಟ ನಡೆದಿದೆ. ಸ್ಪೋಟದ ತೀವ್ರತೆಗೆ ಕೊಠಡಿ ಸಂಪೂರ್ಣ ಛಿದ್ರವಾಗಿದೆ. ಸ್ವಾತಂತ್ರ ದಿನಾಚರಣೆ ಮುನ್ಮವೇ ನಡೆದ ಸ್ಪೋಟದ ಬಗ್ಗೆ ಆತಂಕ ವ್ಯಕ್ತವಾಗಿದೆ. ಸ್ಪೋಟದ ತೀವ್ರತೆಯನ್ನು ಎನ್‌ಐಎ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಕುಕ್ಕರ್ ಸ್ಪೋಟಕ್ಕಿಂತ ತೀವ್ರತರವಾದ ಹಾನಿ ಹಿನ್ನೆಲೆಯಲ್ಲಿ ಇದರ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಎನ್ ಐ ಎ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸರು ಕೂಡ ಸಾಥ್ ನೀಡಿದ್ದು, ಗಾಯಗೊಂಡ ಯುವಕರ ಪೂರ್ವಾಪರವನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಬೆಂಗಳೂರಿಗೆ ಹೇಗೆ ಬಂದರು, ಏನು ಕೆಲಸ ಮಾಡುತ್ತಿದ್ದರು ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ತೀವ್ರವಾಗಿ ಪರಿಶೀಲನೆ ಮಾಡಲಾಗಿದೆ. ಸ್ಪೋಟದ ವಸ್ತುಗಳನ್ನು ಕೂಡ ಪೊಲೀಸರು ಕಲೆ ಹಾಕುತ್ತಿದ್ದಾರೆ.ಈ ನಡುವೆ ರಾಮೇಶ್ವರಂ ಕೆಫೆ ಬ್ಲಾಸ್ಟ್ ಬಳಿಕ ಅದೇ ಮಾದರಿಯ ಬ್ಲಾಸ್ಟ್ ನಡೀತಾ ಎನ್ನುವ ಅನುಮಾನ ಬಂದಿದೆ.
ಕುಕ್ಕರ್ ಬ್ಲಾಸ್ಟ್ ಆಗಿ ಸ್ಪೋಟ ಎಂದ ದಯಾನಂದ್: ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಸ್ಪೋಟಕದ ಬಗ್ಗೆ ಮಾಹಿತಿ ನೀಡಿದ್ದು, ಭಯೋತ್ಪಾದಕ ಕೃತ್ಯ ಇದಲ್ಲ ಎನ್ನುವ ಸೂಚನೆ ನೀಡಿದ್ದಾರೆ. ಕುಕ್ಕರ್ ಬ್ಲಾಸ್ ಆಗಿದೆ. ಬಳಿಕ ಶಾರ್ಟ್ ಸೆರ್ಕ್ಯೂಟ್ ಆಗಿದೆ. ಇಬ್ಬರಿಗೆ ಗಂಭೀರ ಗಾಯವಾಗಿದೆ. ಸ್ಥಳದಲ್ಲಿ ಮತ್ತಷ್ಟು ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.